Asianet Suvarna News Asianet Suvarna News

ಗಡಿ ಕಿಡಿ ಹೊತ್ತಿಸಲು ಮುಂದಾದ ಮಹಾರಾಷ್ಟ್ರ, ವಿವಾದಿತ ಪುಸ್ತಕ ಲೋಕಾರ್ಪಣೆ ಸಿದ್ಧತೆ!

ಪುಸ್ತಕ ಬಿಡುಗಡೆ ನಂತರ ಮತ್ತೊಮ್ಮೆ ಗಡಿ ವಿವಾದದ ಕಿಡಿ ಹೊತ್ತಲಿದೆಯಾ? / "ಮಹಾರಾಷ್ಟ್ರ ಕರ್ನಾಟಕ ಸೀಮಾವಾದ: ಸಂಘರ್ಷ ಆನಿ ಸಂಕಲ್ಪ"( ಗಡಿವಿವಾದ: ಸಂಘರ್ಷಮತ್ತು ಸಂಕಲ್ಪ) ಪುಸ್ತಕ ಬಿಡುಗಡೆಗೆ ಸಿದ್ಧತೆ/ ಶರದ್ ಪವಾರ್ ಅಧ್ಯಕ್ಷತೆ ವಹಿಸಲಿದ್ದಾರೆ

maharashtra government to release book on belagavi border Issue mah
Author
Bengaluru, First Published Jan 26, 2021, 11:06 PM IST

ಬೆಳಗಾವಿ (ಜ 26) ' ಕರ್ನಾಟಕ ಆಕ್ರಮಿತ ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರಕಾರ ಬದ್ಧವಾಗಿದೆ' ಎಂದು ಟ್ವೀಟ್ ಮಾಡುವ ಮೂಲಕ ಭಾರೀ ವಿವಾದಕ್ಕೆ ಹಾಗೂ ಕರ್ನಾಟಕ ಸರಕಾರ ಮತ್ತು ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರಕಾರ ಈಗ ಗಡಿವಿವಾದ ಸಂಬಂಧ ಮತ್ತೊಂದು ಕಿಡಿ ಹೊತ್ತಿಸಲು ತಯಾರಾಗಿದ್ದಾರೆ.

ಉದ್ಧಟತನಕ್ಕೆ ಇನ್ನೊಂದೆ ಹೆಸರೆ ಉದ್ಧವ್ ಠಾಕ್ರೆ!

ಬುಧವಾರ ಮಹಾರಾಷ್ಟ್ರ ಸರಕಾರವೇ ಹೊರತರುತ್ತಿರುವ ಗಡಿವಿವಾದ ಕುರಿತ ಪುಸ್ತಕವೊಂದನ್ನು ಠಾಕ್ರೆ ಅವರು ಬಿಡುಗಡೆ ಮಾಡಲಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು  ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಗಡಿವಿವಾದ ಕುರಿತು ಬರೆದ "ಮಹಾರಾಷ್ಟ್ರ ಕರ್ನಾಟಕ ಸೀಮಾವಾದ: ಸಂಘರ್ಷ ಆನಿ ಸಂಕಲ್ಪ"( ಗಡಿವಿವಾದ: ಸಂಘರ್ಷಮತ್ತು ಸಂಕಲ್ಪ)ಎಂಬ ಈ ಪುಸ್ತಕದಲ್ಲಿ 1956 ರಿಂದ 2021 ರವರೆಗಿನ ಗಡಿವಿವಾದ ಘಟನಾವಳಿಗಳು ಮತ್ತು ಮಹಾರಾಷ್ಟ್ರ ತಳೆದ ನಿಲುವುಗಳು ಇವೆಯೆಂದು ಹೇಳಲಾಗುತ್ತಿದೆ.

Follow Us:
Download App:
  • android
  • ios