Covid Crisis: ಮಾಸ್ಕ್‌ ಕಡ್ಡಾಯ ನಿಯಮ ರದ್ದತಿಗೆ ಮಹಾರಾಷ್ಟ್ರ ಚಿಂತನೆ

*  ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆ
*  ಕೇಂದ್ರ ಸರ್ಕಾರ, ಕಾರ್ಯಪಡೆಗೆ ಮಹಾರಾಷ್ಟ್ರ ಕೋರಿಕೆ
*  ಪಾಸಿಟಿವಿಟಿ ದರ ಶೇ.5ಕ್ಕಿಂತ ಕೆಳಕ್ಕೆ
 

Maharashtra Government Thinking to Cancellation of Mask Mandatory Rule

ನವದೆಹಲಿ(ಫೆ.12):  ದೇಶದಲ್ಲಿ ಕೊರೋನಾ(Coronavirus) ಸೋಂಕಿನ ಅಬ್ಬರ ಮತ್ತಷ್ಟು ತಗ್ಗಿದೆ. ಪಾಸಿಟಿವಿಟಿ ದರ(Positivity Rate)  ಶೇ.5ಕ್ಕಿಂತ ಕೆಳಕ್ಕಿಳಿದು, ಶೇ.3.47ರಷ್ಟು ದಾಖಲಾಗಿದೆ. ಶುಕ್ರವಾರ 58,077 ಕೋವಿಡ್‌ ಕೇಸ್‌ಗಳು ದೃಢಪಟ್ಟಿವೆ. ಕರ್ನಾಟಕದಲ್ಲೂ(Karnataka) ಪಾಸಿಟಿವಿಟಿ ದರ ಶೇ.3.47ಕ್ಕೆ ಇಳಿದಿದ್ದು, 3976 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌(Covid-19) ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಸ್ವೀಡನ್‌ ಸರ್ಕಾರ(Government of Sweden) ಸೋಂಕು ಪತ್ತೆ ಪರೀಕ್ಷೆಯನ್ನೇ ಕೈಬಿಟ್ಟಿದ್ದರೆ ಇತ್ತ ಮಹಾರಾಷ್ಟ್ರ ಸರ್ಕಾರ(Government of Maharashtra)  ರಾಜ್ಯದಲ್ಲಿ ಮಾಸ್ಕ್‌(Mask) ಧರಿಸುವುದನ್ನು ಕಡ್ಡಾಯ ಎಂಬ ನಿಯಮ ಕೈಬಿಡುವ ಬಗ್ಗೆ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ಅದು ಇಂಥ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ.

Covid 19 Crisis Bengaluru: ಕೋವಿಡ್‌ ನಿಯಮ ಗಾಳಿಗೆ: ನಿತ್ಯ ₹2ಲಕ್ಷ ದಂಡ ಸಂಗ್ರಹ!

ಈ ಕುರಿತು ಶುಕ್ರವಾರ ಮಾತನಾಡಿದ ರಾಜ್ಯದ ಆರೋಗ್ಯ ಸಚಿವ ಆರೋಗ್ಯ ಸಚಿವ ರಾಜೇಶ್‌ ಟೋಪೆ(Rajesh Tope), ಬ್ರಿಟನ್‌(Britain) ಸೇರಿ ಇತರೆ ದೇಶಗಳಲ್ಲಿ ಈಗಾಗಲೇ ಜನರು ಮಾಸ್ಕ್‌ ಇಲ್ಲದೆ ಸ್ವತಂತ್ರವಾಗಿ ಓಡಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನಾವು ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ. ಆ ದೇಶಗಳಲ್ಲಿ ಇದು ಸಾಧ್ಯವಾಗಿದ್ದು ಹೇಗೆ ಎಂಬ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಜೊತೆಗೆ ಕೋವಿಡ್‌ ಕೇಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ಕೈಬಿಡುವ ಸಂಬಂಧ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಕೋವಿಡ್‌ ಕಾರ‍್ಯಪಡೆಯಿಂದ ಮಾಹಿತಿ ಕೋರಲಾಗಿದೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬುಧವಾರ 7142, ಗುರುವಾರ 6248 ಕೋವಿಡ್‌ ಕೇಸ್‌ಗಳು ಪತ್ತೆಯಾಗಿದ್ದವು.

2 ದಿನದಲ್ಲಿ ಪಾಸಿಟಿವಿಟಿ ಭಾರಿ ಇಳಿಕೆ: ಕೋವಿಡ್‌ ತಹಬದಿಗೆ

Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

ಬೆಂಗಳೂರು (ಫೆ.12): ರಾಜ್ಯದ (Karnataka) ಕೋವಿಡ್‌-19ರ (Covid19) ಪಾಸಿಟಿವಿಟಿ ದರದಲ್ಲಿ (Positivity Rate) ಭಾರಿ ಇಳಿಕೆ ದಾಖಲಾಗುತ್ತಿದೆ. ಸತತ ಎರಡು ದಿನಗಳಿಂದ ಶೇ.5ರೊಳಗೆ ರಾಜ್ಯದ ಪಾಸಿಟಿವಿಟಿ ದರ ಬಂದಿದ್ದು ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವುದು ಖಚಿತವಾಗಿದೆ.

ಒಮಿಕ್ರೋನ್‌(Omicron) ಪ್ರೇರಿತ ಮೂರನೇ ಅಲೆಯಲ್ಲಿ ಜನವರಿ 8 ರಂದು ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇ.5 ದಾಟಿತ್ತು. ಅಲ್ಲಿಂದ ಬಳಿಕ ಏರುತ್ತ ಸಾಗಿದ್ದ ಪಾಸಿಟಿವಿಟಿ ದರ ಜನವರಿ 24ಕ್ಕೆ ಮೂರನೇ ಅಲೆಯ ಗರಿಷ್ಠ ಶೇ.32.95 ತಲುಪಿತ್ತು. ತದನಂತರ ಇಳಿಕೆ ಹಾದಿಯಲ್ಲಿ ಸಾಗಿದ ಪಾಸಿಟಿವಿಟಿ ದರ ಫೆ.9ಕ್ಕೆ ಮೊದಲ ಬಾರಿಗೆ ಶೇ.5 ರೊಳಗೆ ಬಂದಿದೆ. ರಾಜ್ಯದಲ್ಲಿ ಸದ್ಯ ಐದಾರು ಜಿಲ್ಲೆಗಳಲ್ಲಿ ಮಾತ್ರ ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ದಾಖಲಾಗುತ್ತಿದೆ.
ಫೆ. 10ರ ಮಾಹಿತಿಯಂತೆ ಶಿವಮೊಗ್ಗ (ಶೇ.8.41), ತುಮಕೂರು (ಶೇ. 7.62), ಕೊಡಗು (ಶೇ.7.14), ಬಳ್ಳಾರಿ (ಶೇ. 6.65), ಮೈಸೂರು (ಶೇ.5.95), ಚಾಮರಾಜನಗರ ಜಿಲ್ಲೆ (ಶೇ. 5.6)ಯಲ್ಲಿ ಮಾತ್ರ ಶೇ. 5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ವರದಿಯಾಗಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮಂಡ್ಯ (ಶೇ. 1.99), ರಾಯಚೂರು (ಶೇ. 1.86), ದಾವಣಗೆರೆ (ಶೇ. 1.8), ದಕ್ಷಿಣ ಕನ್ನಡ (ಶೇ. 1.75), ಕೊಪ್ಪಳ (ಶೇ. 1.68), ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ (ಶೇ. 1.56), ಪಾಸಿಟಿವಿಟಿ ದರ ಶೇ.2 ಕ್ಕಿಂತ ಕೆಳಕ್ಕಿಳಿದಿದೆ.
 

Latest Videos
Follow Us:
Download App:
  • android
  • ios