* ಹಿಂದಿನ ಸರ್ಕಾರದಲ್ಲಿ ಸಾವಿರಾರು ಕೋಟಿ ರು. ನೀರಾವರಿ ಹಗರಣ ಆರೋಪಕ್ಕೆ ಸಿಲುಕಿದ್ದ ಎನ್‌ಸಿಪಿ ನಾಯಕ* ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪಾವರ್‌ಗೆ ಇ.ಡಿ. ಶಾಕ್‌* ಅಕ್ರಮ ಹಣ ವರ್ಗಾವಣೆ ಕೇಸಲ್ಲಿ 65.75 ಕೋಟಿ ರು. ಆಸ್ತಿ ಜಪ್ತಿ

ನವದೆಹಲಿ(ಜು.02): ಹಿಂದಿನ ಸರ್ಕಾರದಲ್ಲಿ ಸಾವಿರಾರು ಕೋಟಿ ರು. ನೀರಾವರಿ ಹಗರಣ ಆರೋಪಕ್ಕೆ ಸಿಲುಕಿದ್ದ ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಮುಖ್ಯಮಂತ್ರಿ ಅಜಿತ್‌ ಪವಾರ್‌ ಇದೀಗ ಇನ್ನೊಂದು ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅಜಿತ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರ ಸೋದರ ಸಂಬಂಧಿ.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಿತ್‌ ಪವಾರ್‌ ನಿಯಂತ್ರಣಕ್ಕೆ ಒಳಪಟ್ಟಸಕ್ಕರೆ ಕಾರ್ಖಾನೆಯೊಂದನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಜರಾಂಡೇಶ್ವರ ಸರ್ಕಾರಿ ಸಕ್ಕರೆ ಕಾರ್ಖಾನೆಯ ಕಟ್ಟಡ, ಯಂತ್ರೋಪಕರಣಗಳು ಸೇರಿದಂತೆ ಜಪ್ತಿ ಮಾಡಲಾದ ಆಸ್ತಿಯ ಮೌಲ್ಯ 2010ರ ಮಾರುಕಟ್ಟೆದರದದಂತೆ 65.75 ಕೋಟಿ ರು.ಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಈ ಆಸ್ತಿಗಳು ಗುರು ಕಮೋಡಿಟೀಸ್‌ ಸವೀರ್‍ಸಸ್‌ ಲಿಮಿಡೆಟ್‌ನ ನಿಯಂತ್ರಣದಲ್ಲಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ. ಆದರೆ, ಇದೊಂದು ನಕಲಿ ಕಂಪನಿಯಾಗಿದೆ. ಅಲ್ಲದೇ ಸ್ಪಾಕ್ರ್ಲಿಂಗ್‌ ಸೊಲಿ ಪ್ರೈವೇಟ್‌ ಲಿಮಿಟೆಡ್‌ ಜರಾಂಡೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಹೆಚ್ಚಿನ ಷೇರುಗಳನ್ನು ಹೊಂದಿದ್ದು,ಅದು ಅಜಿತ್‌ ಪಾವರ್‌ ಮತ್ತು ಪತ್ನಿ ಸುನೇತ್ರಾ ಪವಾರ್‌ ಅವರ ಒಡೆತನದ ಕಂಪನಿಗೆ ಸೇರಿದ್ದಾಗಿದೆ.

2019ರಲ್ಲಿ ಸಕ್ಕರೆ ಕಾರ್ಖಾನೆಯನ್ನು ಕಾನೂನು ಬಾರಹಿರವಾಗಿ ಕಡಿಮೆ ದರಕ್ಕೆ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯ ವೇಳೆ ಈ ಅಕ್ರಮದಲ್ಲಿ ಅಜಿತ್‌ ಪವಾರ್‌ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದ ಅಜಿತ್‌, ಬಳಿಕ ಮತ್ತೆ ಎನ್‌ಸಿಪಿ ಪಾಳಯಕ್ಕೆ ಮರಳಿದ್ದರು.