ಅಷ್ಟಕ್ಕೂ ಹಿಂದೂ ಶರಣಾರ್ಥಿಗಳಿಗೆ ಎಲ್ಲಿ ಜಾಗ ಕೊಡ್ತಿರಿ?: ಉದ್ಧವ್!
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆ| ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಮಹಾರಾಷ್ಟ್ರ ಸಿಎಂ| ವಿದೇಶಿ ಹಿಂದೂ ಅಕ್ರಮ ವಲಸಿಗರಿಗೆ ನೆಲೆ ಎಲ್ಲಿ ಒದಗಿಸುತ್ತೀರಿ?| ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಸಿಡಿದೆದ್ದ ಉದ್ಧವ್ ಠಾಕ್ರೆ| 'ವಿದೇಶಿ ಹಿಂದೂ ಶರಣಾರ್ಥಿಗಳಿಗೆ ನೆಲೆ ಕಲ್ಪಿಸುವ ಕುರಿತು ಕೇಂದ್ರ ಸರ್ಕಾರ ಆಲೋಚನೆಯನ್ನೇ ಮಾಡಿಲ್ಲ'| ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ್ದ ಶಿವಸೇನೆ|
ನಾಗ್ಪುರ್(ಡಿ.19): ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೇಶದಲ್ಲಿ ವಿದೇಶಿ ಹಿಂದೂ ಅಕ್ರಮ ವಲಸಿಗರಿಗೆ ನೀವು ಎಲ್ಲಿ ಮತ್ತು ಹೇಗೆ ನೆಲೆ ಕಲ್ಪಿಸುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ನಮ್ಮದೇ ಜಮೀನಲ್ಲಿ ನಾವು ಜೀತದಾಳು: ಧರ್ಮವೀರ್ ಸಂಕಟ ತರಿಸಿದ ಅಳು!
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಉದ್ಧವ್, ಬೆಳಗಾವಿಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರದಲ್ಲೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿದರು.
ಓಡಿ ಬರುವುದು ಬಿಟ್ಟರೆ ಬೇರೇನು ಮಾರ್ಗ?: ಸೋನ್‌ದಾಸ್ ಪ್ರಕಾರ ಭಾರತವೇ ಸ್ವರ್ಗ!
ವಿದೇಶಗಳಿಂದ ವಲಸೆಬರುವ ಹಿಂದೂಗಳಿಗೆ ನೀವು ದೇಶದಲ್ಲಿ ಎಲ್ಲಿ ಮತ್ತು ಹೇಗೆ ನೆಲೆ ಕಲ್ಪಿಸುತ್ತೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಕುರಿತು ನೀವೂ ಆಲೋಚನೆಯನ್ನೂ ಮಾಡಿಲ್ಲ ಎಂದು ಅನಿಸುತ್ತಿದೆ ಎಂದು ಉದ್ಧವ್ ಹರಿಹಾಯ್ದರು.
ಹೆಣ್ಣುಮಕ್ಕಳನ್ನು ಹೊತ್ತೊಯ್ದು..ಗಂಗಾರಾಮ್ ಮಾತಿಗೆ ಕಣ್ಣಂಚು ತೊಯ್ದು!
ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದ ಶಿವಸೇನೆ, ರಾಜ್ಯಸಭೆಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಸದನದಿಂದ ಹೊರ ನಡೆದಿತ್ತು ಮತ್ತು ಕಾಯ್ದೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಆರೋಪಿಸಿತ್ತು.