ನಮ್ಮದೇ ಜಮೀನಲ್ಲಿ ನಾವು ಜೀತದಾಳು: ಧರ್ಮವೀರ್ ಸಂಕಟ ತರಿಸಿದ ಅಳು!

ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ| ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಧಾರ್ಮಿಕಅಲ್ಪಸಂಖ್ಯಾತರಿಗೆ ನೆರಳಾಗಲಿದೆ ಭಾರತ| ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗೆ ನೆರವು| ನಿರ್ಭಿತ ಹಾಗೂ ಸ್ವಚ್ಛಂದ ಸಮಾಜದಲ್ಲಿ ಸ್ವತಂತ್ರ್ಯವಾಗಿ ಉಸಿರಾಡುವ ಅವಕಾಶ|ಪಾಕಿಸ್ತಾನಿ ಶರಣಾರ್ಥಿಗಳ ಬದುಕು ಬವಣೆಯ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ವಿಸ್ತೃತ ವರದಿ| ಪಾಕಿಸ್ತಾನಿ ಹಿಂದೂ ಶರಣಾರ್ಥಿ ಧರ್ಮವೀರ್ ಸೋಲಂಕಿ  ಮನದಾಳದ ಮಾತುಗಳು|

Pakistani Hindu Refugee Tortured Dharmaveer Solanki Tell Tale Story Delhi

ಬೆಂಗಳೂರು(ಡಿ.19): ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದಲ್ಲಿ ಸಂಚಲನ ಮೂಡಿಸಿದೆ. ದಶಕಗಳಿಂದ ನಮ್ಮ ನೆರೆಯ ರಾಷ್ಟ್ರಗಳಲ್ಲಿ ದೌರ್ಜನ್ಯಕ್ಕೆ ಗುರಿಯಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತ ನೆರಳಾಗುವ ಭರವಸೆ ನೀಡಿದೆ. ಆದರೆ ಈ ಕಾಯ್ದೆ ಭಾರತದಲ್ಲೇ ಧಾರ್ಮಿಕ ಕಂದಕಕ್ಕೆ ಮುನ್ನಡಿ ಬರೆಯಲಿದೆ ಎಂಬ ವಾದವೂ ಮುನ್ನೆಲೆಗೆ ಬಂದಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿರುವ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಹಾಗೂ ಜೋರಾಸ್ಟ್ರಿಯನ್ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ಸದುದ್ದೇಶ.

ಪಾಕಿಸ್ತಾನಿ ಹಿಂದೂ ಶರಣಾರ್ಥಿಗಳು: ಕಷ್ಟ ಹೇಳುವ ಸರಣಿ ಲೇಖನಗಳು!

ಪೌರತ್ವ ತಿದ್ದುಪಡಿ ಕುರಿತು ಭಾರತದಲ್ಲೇಕೆ ಚರ್ಚೆ ಶುರುವಾಗಿದೆ? ಕೆಲವರಿಗೇಕೆ ಭೀತಿ ಎದುರಾಗಿದೆ? ಅಷ್ಟಕ್ಕೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾರೆಂದರೆ ಯಾರು? ಈ ರಾಷ್ಟ್ರಗಳಲ್ಲಿ ಅವರು ಅನುಭವಿಸುತ್ತಿರುವ ಸಂಕಷ್ಟಗಳೇನು? ಈ ಎಲ್ಲವುಗಳ ಕುರಿತು ನಿಮ್ಮ ಸುವರ್ಣನ್ಯೂಸ್.ಕಾಂ ಸರಣಿ ಲೇಖನ ಪ್ರಕಟಿಸಲಿದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಅದರಲ್ಲೂ ಹಿಂದೂ ಧರ್ಮೀಯರು ಭಯದ ನೆರಳಲ್ಲೇ ಬದುಕುತ್ತಿದ್ದಾರೆ. ಧರ್ಮದ ಅಧಾರದ ಮೇಲೆಯೇ ರಚನೆಯಾಗಿರುವ ಪಾಕಿಸ್ತಾನದಲ್ಲಿ ಅನ್ಯ ಕೋಮಿನ ಜನರಿಗೆ ನೀಡುವ ಕಿರುಕುಳ ಹೇಳ ತೀರದು.

ಈ ಅನ್ಯಾಯವನ್ನು ಸಹಿಸಲಾಗದೇ ಪಾಕಿಸ್ತಾನದಿಂದ ಓಡಿ ಬಂದು ಭಾರತದಲ್ಲಿ ಹಲವು ಜನರು ಆಶ್ರಯ ಪಡೆದಿದ್ದಾರೆ. ಅವರಲ್ಲಿ ದೆಹಲಿಯ ಮಜ್ನು ಕಾ ಟೀಲಾ ಪ್ರದೇಶದಲ್ಲಿ ಆಶ್ರಯ ಪಡೆದಿರುವ ಧರ್ಮವೀರ್ ಸೋಲಂಕಿ, ಏಶಿಯಾನೆಟ್ ನ್ಯೂಸ್ ಕನ್ನಡದೊಂದಿಗೆ ಸಂವಾದ ನಡೆಸಿದ್ದಾರೆ.

ಹೆಣ್ಣುಮಕ್ಕಳನ್ನು ಹೊತ್ತೊಯ್ದು..ಗಂಗಾರಾಮ್ ಮಾತಿಗೆ ಕಣ್ಣಂಚು ತೊಯ್ದು!

ಓವರ್ ಟು ಧರ್ಮವೀರ್:

ಮುಸ್ಲಿಂ ಮೂಲಭೂತವಾದಿಗಳ ಕಾಟ ತಾಳಲಾರದೇ ನಾನು 2013ರಲ್ಲಿ ಕುಟುಂಬ ಸಮೇತವಾಗಿ ಭಾರತಕ್ಕೆ ಆಶ್ರಯ ಬಯಸಿ ಬಂದೆ. ದೆಹಲಿಯ ಪಾಕಿಸ್ತಾನಿ ಹಿಂದೂ ಶರಣಾರ್ಥಿಗಳ ಶಿಬಿರದಲ್ಲಿ ಆಶ್ರಯ ಪಡೆದೆ.

ತಲೆತಲಾಂತರಗಳಿಂದ ನಾವು ಕೃಷಿಯನ್ನೇ ನಂಬಿಕೊಂಡು ಬದುಕು ನಡೆಸಿದ್ದೇವೆ. ಆದರೆ ನಮ್ಮಿಂದ ಒತ್ತಾಯಪೂರ್ವಕವಾಗಿ ನಮ್ಮ ಜಮೀನನ್ನು ಕಸಿದುಕೊಳ್ಳಲಾಗಿದ್ದು, ಜೀವನಾಧಾರವನ್ನೇ ನಾಶ ಮಾಡಲಾಗಿದೆ.

ನಮ್ಮ ಜಮೀನನ್ನು ಕಸಿದುಕೊಂಡ ದುರುಳರು ನಮ್ಮನ್ನು ಜೀತದಾಳುಗಳನ್ನಾಗಿ ಪರಿವರ್ತಿಸಿದ್ದಾರೆ. ನಮ್ಮನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣಲಾಗುತ್ತದೆ. 

ಮಕ್ಕಳಿಗೆ ಶಾಲೆಗಳಲ್ಲಿ ಇಸ್ಲಾಂ ಮೂಲಭೂತ ಶಿಕ್ಷಣವನ್ನು ಒತ್ತಾಯ ಮಾಡಿ ಕಲಿಸಲಾಗುತ್ತಿದೆ. ನಮ್ಮ ನಂಬಿಕೆಗಳ ಮೇಲೆ ನೇರ ದಾಳಿ ಮಾಡುವ ಮೂಲಕ ಬದುಕಿನ ಜೊತೆಗೆ  ನಂಬಿಕೆಯನ್ನೂ ಕಸಿದುಕೊಳ್ಳಲಾಗಿದೆ.

ಓಡಿ ಬರುವುದು ಬಿಟ್ಟರೆ ಬೇರೇನು ಮಾರ್ಗ?: ಸೋನ್‌ದಾಸ್ ಪ್ರಕಾರ ಭಾರತವೇ ಸ್ವರ್ಗ!

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಮೋದಿ ಸರ್ಕಾರ ನಮ್ಮ ಬಾಳಲ್ಲಿ ಹೊಸ ಚೈತನ್ಯ ತುಂಬಿದ್ದು, ಈ ಕಾಯ್ದೆಯಿಂದ ನಿರ್ಭಯವಾಗಿ ಬದುಕುವ ಭರವಸೆ ಮೂಡಿದೆ. 

Latest Videos
Follow Us:
Download App:
  • android
  • ios