ಆಕ್ಸಿಜನ್ ಸೋರಿಕೆಯಿಂದ ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಸಾವು; ಪ್ರಧಾನಿ ಮೋದಿ ಸಂತಾಪ!
ಕೊರೋನಾತಂಕ ಮಧ್ಯೆ ಅನಿಲ ದುರಂತ| ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆ ಬಳಿ ಆಮ್ಲಜನಕ ಸೋರಿಕೆ| ಆಕ್ಸಿಜನ್ ಸೋರಿಕೆಯಿಂದ 22 ರೋಗಿಗಳು ಸಾವು
ಮುಂಬೈ(ಏ.21): ಕೊರೋನಾ ಕಾಲದಲ್ಲಿ ಒಂದೆಡೆ ಆಮ್ಲಜನಕ ಕೊರತೆಯಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಆದರೀಗ ಮಹಾರಾಷ್ಟ್ರ ನಾಸಿಕ್‌ನ ಜಾಕಿರ್ ಹುಸೇನ್ ಆಸ್ಪತ್ರೆ ಬಳಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾಗಿದ ಪರಿಣಾಮ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ರೋಗಿಗಳು ಮೃತಪಟ್ಟಿದ್ದಾರೆ.
ಹೌದು ಆಸ್ಪತ್ರೆ ಆವರಣದಲ್ಲಿ ಏಕಾಏಕಿ ಆಕ್ಸಿಜನ್ ಟ್ಯಾಂಕ್ ಲೀಕ್ ಆಗಿದ್ದು, ಆಸ್ಪತ್ರೆ ಆವರಣದಲ್ಲಿ ಹೊಗೆ ತುಂಬಿಕೊಂಡಿದೆ. ಸದ್ಯ ರಕ್ಷಣಾ ದಳ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ್ದು, ಪರಿಸ್ಥಿತಿ ನಿಯಂತ್ರಿಸುವ ಕಾರ್ಯ ಆರಂಭಿಸಿದ್ದಾರೆ. ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಈ ಮಾಹಿತಿಯನ್ನು ದೃಢಪಡಿಸಿದ್ದು,ಸ್ಟೋರೇಜ್ ಟ್ಯಾಂಕ್ ನಲ್ಲಿದ್ದ ಆಮ್ಲಜನಕ ಬೃಹತ್ ಪ್ರಮಾಣದಲ್ಲಿ ಸೋರಿಕೆಯಾಗಿದೆ, ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದ್ದಾರೆ.
ನಾಸಿಕ್ ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುತ್ತಿದ್ದ ಕೊರೋನಾ ಆಸ್ಪತ್ರೆ ಇದಾಗಿದೆ.ಲಭ್ಯವಾದ ಮಾಹಿತಿ ಅನ್ವಯ ವೆಂಟಿಲೇಟರ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 22 ಮಂದಿ ಸಾವನ್ನಪ್ಪಿದ್ದಾರೆ. ಈ ಸೋರಿಕೆಯಿಂದ ಆಕ್ಸಿಜನ್ ಪೂರೈಕೆ ಕುಸಿದು ರೋಗಿಗಳು ಸಾವನ್ನಪ್ಪಿದ್ದಾರೆನ್ನಲಾಘಿದೆ.
ದುರಂತ ಘಟನೆ ತೀವ್ರ ನೋವು ತಂದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಮ್ಲಜನರ ಟ್ಯಾಂಕ್ ಸೋರಿಕೆಯಿಂದ ನಾಸಿಕಆ ಆಸ್ಪತ್ರೆಯಲ್ಲಿ ಸಂಭಿವಿಸಿದ ದುರಂತ ಮನಕಲುಕುವಂತಿದೆ. ಈ ಘಟನೆಯಲ್ಲಿ ಪ್ರಾಣಹಾನಿಗಳು ಸಂಭವಿಸಿದೆ. ಮೃತರ ಕುಂಬಕ್ಕೆ ದುಃಖ ಭರಿಸೋ ಶಕ್ತಿ ನೀಡಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಒಟ್ಟಾರೆ 150 ರೋಗಿಗಳ ಪೈಕಿ 127 ಮಂದಿಗೆ ಆಕ್ಸಿಜನ್ ನೀಡಲಾಗುತ್ತಿತ್ತು. ಸೋರಿಕೆಯಾಗುತ್ತಿರುವ ಆಕ್ಸಿಜನ್ ನ ವಿಡಿಯೋ ವೈರಲ್ ಆಗತೊಡಗಿದೆ.
ಮಹಾಮಾರಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಏರುತ್ತಿರುವ ಪರಿಣಾಮ ಈಗಾಗಲೇ ಆಕ್ಸಿಜನ್ ಕೊರತೆ ಎದುರಾಗಿದೆ. ಅನೇಕ ಮಂದಿ ಆಮ್ಲಜನಕ ಸಿಗದೇ ಪ್ರಾಣ ಬಿಟ್ಟಿದ್ದಾರೆ. ಹೀಗಿರುವಾಗ ಮಹಾ ಆಕ್ಸಿಜನ್ ಶೀಘ್ರವಾಗಿ ದೊರಕಿಸಿಕೊಂಡುವಂತೆ ಮನವಿ ಮಾಡಿಕೊಂಡಿದೆ. ಈ ಮೂಲಕ ಸೂಕ್ತ ಸಮಯದಲ್ಲಿ ಆಕ್ಸಿಜನ್ ನೀಡಿ ರೋಗಿಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡಿ ಎಂದಿದೆ.
ಆದರೀಗ ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಅನಿಲ ದುರಂತ ಸಂಭವಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.