Asianet Suvarna News Asianet Suvarna News

ಸುಶೀಲ್‌ ವಿರುದ್ಧ ಪಾಸ್ವಾನ್‌ ಪತ್ನಿ ಘಟಬಂಧನ ಅಭ್ಯರ್ಥಿ?

ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನ| ಜೆಪಿ ಅಭ್ಯರ್ಥಿ ಸುಶೀಲ್‌ ಕುಮಾರ್‌ ಮೋದಿ ವಿರುದ್ಧ ಪಾಸ್ವಾನ್‌ ಪತ್ನಿ ರೀನಾ ಪಾಸ್ವಾನ್‌ ಕಣಕ್ಕಿಳಿಸಲು ತಂತ್ರ

Mahagathbandhan ready to back Reena Paswan to take on Sushil Modi if LJP fields her pod
Author
Bangalore, First Published Nov 30, 2020, 5:32 PM IST

ಪಟನಾ(ನ.30): ಕೇಂದ್ರ ಸಚಿವ ರಾಮವಿಲಾಸ್‌ ಪಾಸ್ವಾನ್‌ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಸುಶೀಲ್‌ ಕುಮಾರ್‌ ಮೋದಿ ವಿರುದ್ಧ ಪಾಸ್ವಾನ್‌ ಪತ್ನಿ ರೀನಾ ಪಾಸ್ವಾನ್‌ ಅವರನ್ನು ಎಲ್‌ಜೆಪಿ ಕಣಕ್ಕಿಳಿಸಿದರೆ ಬೆಂಬಲಿಸುವುದಾಗಿ ಆರ್‌ಜೆಡಿ ನೇತೃತ್ವದ ಮಹಾ ಗಠಬಂಧನ ತಿಳಿಸಿದೆ.

ಈ ಕುರಿತ ಆಫರ್‌ವೊಂದನ್ನು ಈಗಾಗಲೇ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಅವರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಆರ್‌ಜೆಡಿ ಆಫರ್‌ಗೆ ಚಿರಾಗ್‌ ಪಾಸ್ವಾನ್‌ ಇನ್ನೂ ಪ್ರತಿಕ್ರಿಯಿಸಿಲ್ಲ. ಡಿ.14ಕ್ಕೆ ಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಸಲು ಡಿ.3 ಕೊನೆಯ ದಿನವಾಗಿದೆ.

ಡಿಸೆಂಬರ್‌ 14ಕ್ಕೆ ಚುನಾವಣೆ ನಡೆಯಲಿದ್ದು, ನಾಮನಿರ್ದೇಶನ ಸಲ್ಲಿಸಲು ಡಿಸೆಂಬರ್‌ 3 ಕೊನೆಯ ದಿನಾಂಕವಾಗಿದೆ. ಈ ಹಿನ್ನೆಲೆಯಲ್ಲಿ ಚಿರಾಗ್‌ ನಿರ್ಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ಲಾಲು ಪ್ರಸಾದ್‌ ಯಾದವ್‌ ಕಾಯುತ್ತಿದ್ದಾರೆ.

ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನದ ನಂತರ ಬಿಜೆಪಿ ರೀನಾ ಪಾಸ್ವಾನ್‌ ಅವರಿಗೆ ರಾಜ್ಯಸಭಾ ಟಿಕೆಟ್‌ ನೀಡಬಹುದೆಂದು ಊಹಿಸಿದ್ದೆವು. ಅದು ಪಾಸ್ವಾನ್‌ ಅವರಿಗೆ ಸಲ್ಲಿಸುವ ಗೌರವವೂ ಆಗಿತ್ತು. ಆದರೆ ಎಲ್‌ಜೆಪಿಗೆ ಬಿಜೆಪಿ ಏಕೆ ಟಿಕ್‌ ನೀಡಲಿಲ್ಲ ಎಂದು ತಿಳಿಯುತ್ತಿಲ್ಲ. ಒಂದುವೇಳೆ ಎನ್‌ಡಿಎ ರೀನಾ ಅವರನ್ನು ಕಣಕ್ಕಿಳಿಸಿದ್ದರೆ ಗಠಬಂಧನ ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುತ್ತಿತ್ತು ಎಂದು ಆರ್‌ಜೆಡಿ ವಕ್ತಾರೆ ಶಕ್ತಿ ಸಿಂಗ್‌ ಯಾದವ್‌ ತಿಳಿಸಿದ್ದಾರೆ.

Follow Us:
Download App:
  • android
  • ios