ಮುಂಬೈ(ಮೇ 12) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರದ ಮಹಾ ವಿಕಾಸ್ ಸರ್ಕಾರ   ಕರೋನವೈರಸ್ ಲಾಕ್ ಡೌನ್ ಮುಗಿಯುವವರೆಗೆ ಮನೆ ಬಾಗಿಲಿಗೆ ಮದ್ಯ ವಿತರಣೆಯನ್ನು ಪ್ರಾರಂಭಿಸಲು ಮುಂದಾಗಿದೆ.

 ಮದ್ಯ ವಿತರಣೆಯು ಮೇ 14 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಕೆಲವು ಷರತ್ತುಗಳೊಂದಿಗೆ ವೈನ್ ಅಂಗಡಿಗಳನ್ನು ಮತ್ತೆ ತೆರೆಯಲು ಅನುಮತಿಸಲಾದ ನಗರಗಳಲ್ಲಿ ಮಾತ್ರ ಎನ್ನಲಾಗಿದೆ. ಮಹಾರಾಷ್ಟ್ರ ಅಬಕಾರಿ ಇಲಾಖೆಯು ರಾಜ್ಯಾದ್ಯಂತ ಮನೆ ಮದ್ಯ ವಿತರಣೆಯ ಬಗ್ಗೆ ಕಟ್ಟುನಿಟ್ಟಿನ ಜಾಗರೂಕತೆ ವಹಿಸಬೇಕು ಎಂದು ಸರ್ಕಾರ ತಿಳಿಸಿದೆ.

ಎಣ್ಣೆ ಏಟು,, ಬಿಲ್ಡಿಂಗ್ ಮೇಲಿಂದ ಬಿದ್ದಿದ್ದು ಗೊತ್ತಾಗಲಿಲ್ಲ!

ಮುಂಬೈ ಕೆಂಪು ವಲಯದಲ್ಲಿರುವುದರಿಂದ ಈ ಸವಲತ್ತಿನಿಂದ ವಂಚಿತವಾಗಲಿದೆ.   ಹೆಚ್ಚಿನ ಜನಸಂದಣಿ  ತಪ್ಪಿಸಲು ಪುಣೆ ಮತ್ತು ನಾಸಿಕ್ ಸೇರಿದಂತೆ ಆಯ್ದ ನಗರಗಳಲ್ಲಿ ಮದ್ಯ ಮಾರಾಟಕ್ಕೆ ಪ್ರಾಯೋಗಿಕ ಆಧಾರದ ಮೇಲೆ ಆನ್‌ಲೈನ್ ಟೋಕನ್ ವ್ಯವಸ್ಥೆಯನ್ನು ಪ್ರಾರಂಭಿಸಲು  ಮಹಾರಾಷ್ಟ್ರ ಅಬಕಾರಿ ಇಲಾಖೆ ತೀರ್ಮಾನಿಸಿದೆ.  ಕೊಳ್ಳುವವರು ಮತ್ತು ಮಾರಾಟ ಮಾಡುವವರಿಗೆ  ಕೆಲವು ಕಂಡಿಶನ್ ವಿಧಿಸಲಾಗಿದೆ.

* ತಾನು ಲೈಸನ್ಸ್ ಪಡೆದುಕೊಂಡ ಏರಿಯಾದಲ್ಲಿ ಮಾತ್ರ ಮಾರಾಟಗಾರ ಮದ್ಯ ಡಿಲೆವರಿ ಮಾಡಬಹುದು.

*ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ಮಾತ್ರ ಡಿಲೆವರಿಗೆ ಅವಕಾಶ

* ಯಾರು ಆರ್ಡ್ರ್ ಪ್ಲೇಸ್ ಮಾಡಿರುತ್ತಾರೋ ಅವರ ಮನೆ ಬಾಗಿಲಿಗೆ ಮಾತ್ರ ಮದ್ಯ ಸರಬರಾಜು ಮಾಡಬೇಕು

* ಡಿಲೆವರಿ ಮಾಡುವ ವ್ಯಕ್ತಿ ಸೋಶಿಯಲ್ ಡಿಸ್ಟಂಸಿಂಗ್, ಸಾನಿಟೈಸ್ ಸೇರಿದಂತೆ ಲಾಕ್ ಡೌನ್ ನಿಯಮ ಪಾಲಿಸಬೇಕು .

*ಇ ಟೋಕನ್ ಆಧಾರದಲ್ಲಿ ಮದ್ಯ ಮನೆ ಬಾಗಿಲಿಗೆ ವಿತರಣೆ