ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಚೈಲ್ಡ್ ಪೋರ್ನೋಗ್ರಫಿ ಕುರಿತಾಗಿ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನು ಪರಿಶೀಲನೆ ಮಾಡುವುದಾಗಿ ಹೇಳಿದೆ.
ನವದೆಹಲಿ (ಮಾ.11): ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಹೇಳಿದ್ದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ಆದರೆ, ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನೆ ಮಾಡಿರುವ ನ್ಯಾಯಾಲಯ, ಇದು ‘ದೌರ್ಜನ್ಯ’ ಎಂದು ತಿಳಿಸಿದೆ “ಇದು (ಹೈಕೋರ್ಟ್ ತೀರ್ಪು) ಘೋರವಾಗಿದೆ. ಏಕಪೀಠದ ನ್ಯಾಯಾಧೀಶರು ಈ ತೀರ್ಪನ್ನು ಹೇಗೆ ನೀಡಲು ಸಾಧ್ಯ? ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ವಿಚಾರಣೆಯ ವೇಳೆ ಹೇಳಿದ್ದಾರೆ. ಜನವರಿಯಲ್ಲಿ, ಮದ್ರಾಸ್ ಹೈಕೋರ್ಟ್ ತನ್ನ ಮೊಬೈಲ್ ಫೋನ್‌ನಲ್ಲಿ ಚೈಲ್ಡ್ ಪೋರ್ನೋಗ್ರಫಿ ವಿಷಯವನ್ನು ಡೌನ್‌ಲೋಡ್ ಮಾಡಿದ ಆರೋಪದ ಮೇಲೆ ಚೆನ್ನೈನ ಎಸ್ ಹರೀಶ್ (28) ಎಂಬ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿತು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಹೈಕೋರ್ಟ್ ತೀರ್ಪಿನ ವಿರುದ್ಧ ಎರಡು ಎನ್‌ಜಿಒಗಳು ಸಲ್ಲಿಸಿದ ಅರ್ಜಿಯನ್ನು ಗಮನಿಸಿದೆ. ಮಕ್ಕಳ ಅಶ್ಲೀಲತೆಯ ವಿರುದ್ಧದ ಕಾಯಿದೆಗಳ ಅಡಿಯಲ್ಲಿ ಸ್ಪಷ್ಟವಾದ ನಿಬಂಧನೆ ಇರುವ ಹೊರತಾಗಿಯೂ ಉಚ್ಚ ನ್ಯಾಯಾಲಯವು ಈ ತೀರ್ಪನ್ನು ಹೇಗೆ ನೀಡಿದೆ ಎಂದು ಪ್ರಶ್ನೆ ಮಾಡಿದೆ. ಆರೋಪಿಗೆ ಈ ಕುರಿತಾಗಿ ನೋಟಿಸ್ ಜಾರಿ ಮಾಡಲಾಗುವುದು ಮತ್ತು ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ ಎರಡು ಎನ್‌ಜಿಒಗಳು ಫರಿದಾಬಾದ್‌ನ ‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ ಮತ್ತು ನವದೆಹಲಿ ಮೂಲದ ‘ಬಚ್‌ಪನ್ ಬಚಾವೋ ಆಂದೋಲನ್’ ಆಗಿದೆ.
ಕಟಕಟೆಯಲ್ಲಿ ಬಿಜೆಪಿಯ 'ಕಮಲ' ಚಿಹ್ನೆ! ಮದ್ರಾಸ್ ಹೈಕೋರ್ಟ್‌ನಲ್ಲಿ ಭವಿಷ್ಯ ನಿರ್ಧಾರ!
28 ವರ್ಷದ ಯುವಕನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಾಗ, ಮದ್ರಾಸ್ ಹೈಕೋರ್ಟ್, ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67-ಬಿ ಪ್ರಕಾರ ಆರೋಪಿಯು ಚೈಲ್ಡ್ ಪೋರ್ನೋಗ್ರಫಿಯ ಚಿತ್ರಗಳನ್ನು ಶೇರ್ ಮಾಡಿದ್ದಲ್ಲಿ, ರಚಿಸಿದಲ್ಲಿ ಮಾತ್ರವೇ ಅದು ಅಪರಾಧ ಎನಿಸಿಕೊಳ್ಳುತ್ತದೆ. ಆದರೆ, ಈ ಪ್ರಕರಣದಲ್ಲಿ ಆತ ಡೌನ್‌ಲೋಡ್ ಮಾಡಿಕೊಂಡು ತನ್ನ ಮೊಬೈಲ್‌ನಲ್ಲಿಯೇ ವೀಕ್ಷಿಸಿದ್ದಾನೆ. ಹಾಗಾಗಿ ಇದು ಐಟಿ ಕಾಯ್ದೆಯ ಉಲ್ಲಂಘನೆ ಆಗುತ್ತದೆಯೇ ಹೊರತು, ಪೋಕ್ಸೋ ಕಾಯ್ದೆಯ ಪ್ರಕರಣ ಎನಿಸಿಕೊಳ್ಳುವುದಿಲ್ಲ ಎಂದಿತ್ತು.
ಆರೆಸ್ಸೆಸ್ ನಾಯಕರ ಫೋಟೋ ಇಟ್ಕೊಳ್ಳೋದು ಭಯೋತ್ಪಾದಕ ಕೃತ್ಯವಲ್ಲ: ಪಿಎಫ್‌ಐ ಕಾರ್ಯಕರ್ತರಿಗೆ ಹೈಕೋರ್ಟ್ ಜಾಮೀನು!
