ಸನಾತನ ಧರ್ಮವನ್ನ ಯಾಕೆ ನಾಶ ಪಡಿಸಬೇಕು ಅಂತೀರಿ? ಸ್ಟ್ಯಾಲಿನ್‌ಗೆ ಮಂಗಳಾರತಿ ಮಾಡಿದ ಮದ್ರಾಸ್ ಹೈಕೋರ್ಟ್!
ಸನಾತನ ಧರ್ಮದ ಕುರಿತು ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದ ಮದ್ರಾಸ್ ಹೈಕೋರ್ಟಿನ ನ್ಯಾಯಮೂರ್ತಿ ಎನ್ ಶೇಷಶಾಯಿ ಅವರು ಸನಾತನ ಧರ್ಮವು ರಾಷ್ಟ್ರ, ಪೋಷಕರು, ಶಿಕ್ಷಕರಿಗೆ ನೀಡುವ ಶಾಶ್ವತ ಕರ್ತವ್ಯದ ಗುಚ್ಛ. ಇಂಥ ಕರ್ತವ್ಯಗಳನ್ನು ನಾಶಪಡಿಸಬೇಕು ಎನ್ನುವ ಮಾತುಗಳು ಬರುತ್ತಿರುವುದೇಕೆ ಎಂದು ಅಚ್ಚರಿಪಟ್ಟಿದ್ದಾರೆ.

ಚೆನ್ನೈ (ಸೆ.16): ದೇಶದಲ್ಲಿ ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟ್ಯಾಲಿನ್ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ಗೆ ಮದ್ರಾಸ್ ಹೈಕೋರ್ಟ್ (Madras High Court) ಮಂಗಳಾರತಿ ಮಾಡಿದೆ. ದೇಶದಲ್ಲಿ ಈಗ ನಡೆಯುತ್ತಿರುವ ಸನಾತನ ಧರ್ಮದ ಚರ್ಚೆಯ ಬಗ್ಗೆ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದ ಮದ್ರಾಸ್ ಹೈಕೋರ್ಟ್, ಸನಾತನ ಧರ್ಮವು ಹಿಂದೂ ಜೀವನ ವಿಧಾನವನ್ನು ಅನುಸರಿಸುವವರಿಗೆ ರಾಷ್ಟ್ರ, ಪೋಷಕರು ಮತ್ತು ಗುರುಗಳ ಬಗ್ಗೆ ಕರ್ತವ್ಯಗಳನ್ನು ಒಳಗೊಂಡಂತೆ ವಿಧಿಸಲಾದ ಶಾಶ್ವತ ಕರ್ತವ್ಯಗಳ ಗುಚ್ಛ. ರಾಷ್ಟ್ರ, ಪೋಷಕರು ಹಾಗೂ ಗುರುಗಳ ಬಗ್ಗೆ ಎಂದಿಗೂ ಗೌರವ ಸನಾತನ ಧರ್ಮದಲ್ಲಿ ಕಡಿಮೆಯಾಗೋದಿಲ್ಲ. ಇಂಥ ಕರ್ತವ್ಯಗಳನ್ನು ನಾಶ ಪಡಿಸಬೇಕು ಎನ್ನುವ ಮಾತುಗಳು ಬರುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎನ್ ಶೇಷಸಾಯಿ ಅವರು ಸನಾತನ ಧರ್ಮದ ಸುತ್ತಲಿನ ಚರ್ಚೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸನಾತನ ಧರ್ಮವು ಕೇವಲ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಆದರೆ, ಈ ಕಲ್ಪನೆಯನ್ನು ಅವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ.
ಸನಾತನ ಧರ್ಮವು ಒಂದು ಜೀವನ ವಿಧಾನವಾಗಲು ಉದ್ದೇಶಿಸಿದ್ದರೂ ಎಲ್ಲೋ ಒಂದು ಮಾರ್ಗದಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಉತ್ತೇಜಿಸುತ್ತದೆ ಎಂಬ ಕಲ್ಪನೆಯನ್ನು ಹರಿಡಿಸಲಾಗಿತು. ಸನಾತನ ಧರ್ಮದ ತತ್ವಗಳಲ್ಲಿ ಅಸ್ಪೃಶ್ಯತೆ ಅನುಮತಿಸಿದರೂ ಸಹಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ಸಮಾನ ನಾಗರಿಕರ ದೇಶದಲ್ಲಿ ಅಸ್ಪೃಶ್ಯತೆ ಸಹಿಸಲಾಗುವುದಿಲ್ಲ" ಎಂದು ನ್ಯಾಯಮೂರ್ತಿ ಶೇಷಸಾಯಿ ಹೇಳಿದ್ದಾರೆ. "ಸನಾತನ ಧರ್ಮ'ದ ತತ್ವ ಅಸ್ಪಶೃತೆ ಇದೆ ಎಂದು ಹೇಳಲಾದರೂ, ಸಂವಿಧಾನದ 17 ನೇ ವಿಧಿ ಅಸ್ಪೃಶ್ಯತೆಯನ್ನು ತೊಡೆದುಹಾಕಲಾಗಿದೆ ಎಂದು ಘೋಷಿಸಿರುವುದರಿಂದ ಅಸ್ಪಶೃತೆ ದೇಶದಲ್ಲಿ ಇರಲು ಸಾಧ್ಯವಿಲ್ಲ' ಎಂದು ಹೇಳಿದರು.
ವಾಕ್ ಸ್ವಾತಂತ್ರ್ಯವು ಮೂಲಭೂತ ಹಕ್ಕಾಗಿದ್ದರೂ, ಅದು ದ್ವೇಷದ ಭಾಷಣವಾಗಿ ಬದಲಾಗಬಾರದು ಎಂದು ನ್ಯಾಯಾಧೀಶರು ಒತ್ತಿ ಹೇಳಿದರು, ವಿಶೇಷವಾಗಿ ಅದು ಧರ್ಮದ ವಿಷಯಗಳಿಗೆ ಸಂಬಂಧಿಸಿದಂತೆ. ಇಂತಹ ಭಾಷಣದಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಉದಯನಿಧಿ ಸನಾತನ ಧರ್ಮ ಹೇಳಿಕೆ ಅವಿವೇಕತನದ್ದು: ಭಾಸ್ಕರ್ ರಾವ್
"ಪ್ರತಿಯೊಂದು ಧರ್ಮವು ನಂಬಿಕೆಯ ಮೇಲೆ ಸ್ಥಾಪಿತವಾಗಿದೆ' ಎಂದು ಅವರು ಹೇಳಿದರು. "ಆದ್ದರಿಂದ, ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯವನ್ನು ಚಲಾಯಿಸಿದಾಗ, ಯಾರಿಗೂ ನೋವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮುಕ್ತ ಭಾಷಣವು ಎಂದೂ ದ್ವೇಷ ಭಾಷಣವಾಗಬಾರದು' ಎಂದು ಎಚ್ಚರಿಸಿದೆ.
ಇತ್ತೀಚೆಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (udhayanidhi stalin) ಅವರು ಸನಾತನ ಧರ್ಮದ ವಿರುದ್ಧ ಮಾಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಟೀಕೆಗಳು ಬಂದಿವೆ. ಸನಾತನ ಧರ್ಮದ ವಿಚಾರವಾಗಿ ಅವರು ಮಾಡಿದ ಟೀಕೆಗೆ ದೇಶಾದ್ಯಂತ ವಿರೋಧಗಳು ವ್ಯಕ್ತವಾಗಿದ್ದವು. ಸನಾತನ ಧರ್ಮವನ್ನು ಅವರು ಡೆಂಘೆ ಮತ್ತು ಮಲೇರಿಯಾದಂತ ಕಾಯಿಲೆಗಳಿಗೆ ಹೋಲಿಸಿದ್ದು ಮಾತ್ರವಲ್ಲದೆ ಇವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಹಿಂದೂವಾಗಿ ನಾವು ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು? ನಟಿ ರಶ್ಮಿ ಗೌತಮ್ ಹೇಳಿರೋ ಮಾತನ್ನು ನೋಡಿ