ಇಲ್ಲಿಯವರೆಗೂ ನಾವು ಸುಮ್ಮನಿದ್ದದ್ದು ಸಾಕು, ಹಿಂದೂವಾಗಿ ನಾವು ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು ಅನ್ನೋದನ್ನು ಖ್ಯಾತ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್‌ ತಮ್ಮ ಟ್ವಿಟರ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. 

ಬೆಂಗಳೂರು (ಸೆ.14): ಸನಾತನ ಧರ್ಮದ ಕುರಿತಾಗಿ ಟೀಕೆ ಮಾಡಿದ ವಿಚಾರವಾಗಿ ಗುರುವಾರ ಸ್ವತಃ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಆದರೆ, ಹಿಂದೂ ಹಾಗೂ ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್‌ ಹೇಳಿರುವ ದಿನದಿಂದಲೂ ಈ ವಿಚಾರವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದವರು ತೆಲುಗಿನ ಖ್ಯಾತ ನಿರೂಪಕಿ ಹಾಗೂ ನಟಿ ರಶ್ಮಿ ಗೌತಮ್‌. ತಮ್ಮ ನಿಲುವನ್ನು ವಿರೋಧಿ ಟ್ವೀಟ್‌ ಮಾಡಿದ ಪ್ರತಿಯೊಬ್ಬರಿಗೂ ಅವರದೇ ಭಾಷೆಯಲ್ಲಿ ಉತ್ತರ ನೀಡುತ್ತಿದ್ದ ರಶ್ಮಿ ಗೌತಮ್‌, ನನ್ನ ಧರ್ಮವನ್ನು, ನನ್ನ ನಂಬಿಕೆಯನ್ನು ಹಾಗೂ ನನ್ನ ದೇವರನ್ನು ನಿಂದನೆ ಮಾಡುವ ಅಧಿಕಾರ ಯಾರಿಗೂ ಇಲ್ಲ' ಎಂದು ಖಡಕ್‌ ಆಗಿ ಹೇಳಿದ್ದಾರೆ. ಇದೇ ವೇಳೆ ನೀವು ಚಲನಚಿತ್ರಗಳಲ್ಲಿ ಹಾಟ್‌ ದೃಶ್ಯಗಳಲ್ಲಿ ನಟಿಸೋದು, ಹಾಟ್‌ ಬಟ್ಟೆಗಳನ್ನು ಧರಿಸೋದು ನಿಮ್ಮ ಧರ್ಮ ಒಪ್ಪುತ್ತದೆಯೇ ಎನ್ನುವ ಪ್ರಶ್ನೆಗೆ, ಕಾಮಸೂತ್ರ ಕೂಡ ನನ್ನ ಸಂಸ್ಕೃತಿಯ ಭಾಗ ಎಂದು ಧೈರ್ಯದಿಂದಲೇ ಹೇಳಿದ್ದರು. ಗುರುವಾರವೂ ಕೂಡ ಅವರ ಟ್ವಿಟರ್‌ ಪೇಜ್‌ನಲ್ಲಿ ಇದೇ ವಿಚಾರದ ಬಗ್ಗೆ ಚರ್ಚೆಯಾಗಿದೆ. ಇದರ ನಡುವೆ ಹಿಂದೂಗಳಾಗಿ ನಾವು ಮಾಡುತ್ತಿರುವ ತಪ್ಪುಗಳೇನು? ಮುಂದಿನ ಪೀಳಿಗೆಯ ನಮ್ಮ ಹಿಂದೂಗಳಿಗೆ ನಾವು ಕಲಿಸಬೇಕಾಗಿರೋದೇನು ಅನ್ನೋದರ ಬಗ್ಗೆ ಬಹಳ ವಿಶೇಷವಾಗಿ ಬರೆದುಕೊಂಡಿದ್ದಾರೆ.

'ಇಲ್ಲಿನ ಕಳೆದ ಮೂರು ದಿನಗಳ ಹಾಗೂ ಈ ಹಿಂದೆಯೂ ಸಹ ಬೆಂಬಲ ನೀಡಿದ ನನ್ನ ಎಲ್ಲಾ ಸಹ ಹಿಂದೂಗಳು ಹಾಗೂ ಹಿಂದೂಯೇತರ ನನ್ನ ಅಭಿಮಾನಿಗಳಿಗೆ ತುಂಬಾ ಧನ್ಯವಾದಗಳು. ಅವರು ನನ್ನ ಧರ್ಮದ ಬಗ್ಗೆ ಗೌರವ ತೋರಿಸುವವರೆಗೂ ನಾನು ಯಾವುದೇ ಧರ್ಮದ ವಿರುದ್ಧ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಪ್ರತಿಯೊಂದು ಧರ್ಮದ ಮೂಲ ಉಪದೇಶವು ಬದುಕಿ ಮತ್ತು ಬದಕಲು ಬಿಡಿ ಎನ್ನುವುದಾಗಿದೆ. ಆದರೆ, ಸಮಸ್ಯೆ ಇರುವುದು ಜನಸರಲ್ಲಿ ಅದನ್ನು ಸರಿಪಡಿಸಲು ಪ್ರಯತ್ನ ಮಾಡೋಣ. ಹಿಂದೂ ಧರ್ಮ ಇನ್ನಷ್ಟು ಚಿರಕಾಲ ಉಳಿಯುವಂತಾಗಲಿ' ಎಂದು ರಶ್ಮಿ ಗೌತಮ್‌ ಬರೆದುಕೊಂಡಿದ್ದಾರೆ.

'ಹಿಂದೂ ಧರ್ಮದ ಬಗ್ಗೆ ಜನರ ಗ್ರಹಿಕೆಯನ್ನು ಬದಲಾಯಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಹಿಂದೂ ಧರ್ಮ ಒಂದು ಜೀವನ ವಿಧಾನ. ಇದು ಸ್ವಯಂ ಆವಿಷ್ಕಾರ ನೀಡುವಂಥ ಧರ್ಮ. ನಾವು ಬದುಕಲು ಸಹಾಯ ಮಾಡುವ ಪ್ರತಿಯೊಂದು ಅಂಶವನ್ನು ಗೌರವಿಸುವುದು ನನ್ನ ಧರ್ಮದಲ್ಲಿದೆ. ಹೌದು ಗ್ರಹಗಳ ಚಲನೆಗಳು ಚಂದ್ರ ಸೂರ್ಯ ನಮ್ಮ ಸುತ್ತಲಿನ ಪ್ರತಿಯೊಂದು ಅಂಶವು ನಮ್ಮ ಆರೋಗ್ಯ ಮತ್ತು ಬದುಕುಳಿಯುವಲ್ಲಿ ಭಾರಿ ವ್ಯತ್ಯಾಸವನ್ನುಂಟುಮಾಡುತ್ತದೆ. ಕೆಲವರು ಇದನ್ನು ಜ್ಯೋತಿಷ್ಯ ಎಂದು ಕರೆಯುತ್ತಾರೆ ಕೆಲವರು ಇದನ್ನು ವಿಜ್ಞಾನ ಎಂದು ಕರೆಯುತ್ತಾರೆ. ಹೊಸ ಯುಗದ ಹಿಂದೂಗಳು ಪ್ರಶ್ನೆಗಳನ್ನು ಕೇಳಲು ಹಿಂಜರಿಯುತ್ತಾರೆ ಮತ್ತು ಹಿಂದೂ ಧರ್ಮದ ಪ್ರತಿಯೊಂದು ಅಂಶದ ಹಿಂದೆ ವಿಜ್ಞಾನವನ್ನು ಅನ್ವೇಷಣೆ ಮಾಡುತ್ತಾರೆ. ನಮ್ಮ ಮುಂದಿನ ಪೀಳಿಗೆಗಳು ಗಂಟೆಗಳ ಕಾಲ ನಡೆಯುವ ಆಚರಣೆಗಳ ಬಗ್ಗೆ ಬಲವಂತಪಡಿಸಬಾರದು ಹಾಗೂ ಅವರಿಗ ಭಯವನ್ನು ತುಂಬಬಾರದು. ಬದಲಿಗೆ ಅದು ಏಕೆ ಬೇಕು ಎಂದು ಕೇಳಿದಾಗಿ ಅದಕ್ಕೆ ಸೂಕ್ತವಾದ ಉತ್ತರ ನೀಡುವಂತಿರಬೇಕು. ನಮಗೆ ಅದೇಕೆ ಅಗತ್ಯವಿದೆ ಎಂದು ತಿಳಿಸಬೇಕು. ಅವರ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸಲು ಸಿದ್ಧವಾಗಿರಬೇಕು' ಎಂದು ಬರೆದಿದ್ದಾರೆ.

'ಹಿಂದೂ ಸಿದ್ಧಾಂತವನ್ನೇ ಸಂಘಿ ಎನ್ನುವುದಾದರೆ, ನಾನು ಸಂಘಿ' ಎಂದ ಖ್ಯಾತ ನಿರೂಪಕಿ ರಶ್ಮಿ ಗೌತಮ್‌!

ನಾವು ಮತ್ತು ನಮ್ಮ ಮುಂದಿನ ಪೀಳಿಗೆ ದೇವಾಲಯಗಳ ನಿರ್ಮಾಣದ ಹಿಂದಿನ ವಿಜ್ಞಾನವನ್ನು ತಿಳಿಸಬೇಕು. ಆಯುರ್ವೇದದ ಮೂಲಭೂತ ಅಂಶಗಳು ಏನು ಅನ್ನೋದನ್ನೂ ತಿಳಿಸಬೇಕು. ನಮ್ಮ ಚಕ್ರಗಳನ್ನು ವಿಕಸನಗೊಳಿಸಲು ಮತ್ತು ತೆರೆಯಲು ಯೋಗವು ಹೇಗೆ ಸಹಾಯ ಮಾಡುತ್ತದೆ ಎನ್ನುವುದನ್ನೂ ವಿವರಿಸವೇಕು. ನಿಜವಾದ ಹಿಂದೂ ಸಿದ್ಧಾಂತವನ್ನು ಅನುಸರಿಸುವುದು ಹೇಗೆ ಆರೋಗ್ಯ ಮತ್ತು ಸಂಪತ್ತನ್ನು ಉತ್ತೇಜಿಸುತ್ತದೆ ಎನ್ನುವ ವಿವರ ನೀಡಬೇಕು. ಹಿಂದೂ ಧರ್ಮವು ಸಹಬಾಳ್ವೆ ಮತ್ತು ಎಲ್ಲಾ ಜಾತಿಗಳಿಗೆ ಗೌರವವನ್ನು ಕಲಿಸುತ್ತದೆ ಎನ್ನುವುದನ್ನು ಅವರ ತಿಳಿಸಬೇಕು ಎಂದು ಬರೆದಿದ್ದಾರೆ.

'ಸನಾತನ ಧರ್ಮವನ್ನೇ ಅವರು ತುಂಡು ಮಾಡಲು ಬಯಸಿದ್ದಾರೆ..' ಇಂಡಿ ಒಕ್ಕೂಟದ ವಿರುದ್ಧ ಮೋದಿ ವಾಗ್ದಾಳಿ

Scroll to load tweet…