ಕೌಟುಂಬಿಕ ನ್ಯಾಯಾಲಯದ ತೀರ್ಮಾನವನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದ. ಪತ್ನಿಯ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸುವ ಅರ್ಜಿಯನ್ನು ಸಹ ನ್ಯಾಯಾಲಯವು ಪರಿಗಣಿಸಿತ್ತು.

ಚೆನ್ನೈ (ಮಾ.20): ವಿವಾಹಿತ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಳೆ ಮಾಡುವ ಕ್ರೌರ್ಯವಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ ಹೇಳಿದೆ. ಗಂಡ-ಹೆಂಡತಿ ಸಂಬಂಧದಲ್ಲಿ ಇಂಥ ಕೆಲಸಗಳು ತೊಂದರೆ ತರುತ್ತದೆ ಎಂದು ಸಾಬೀತು ಮಾಡಲು ಸಾಧ್ಯವಿಲ್ಲವಾಗಿರುವ ಕಾರಣ, ಇಂಥ ವರ್ತನೆಯನ್ನು ಗಂಡನ ಮೇಲೆ ಮಾಡೋ ಕ್ರೌರ್ಯ ಎಂದೂ ಪರಿಗಣಿಸೋಕೆ ಆಗಲ್ಲ ಎಂದು ಕೋರ್ಟ್‌ ತಿಳಿಸಿದೆ. ಅಶ್ಲೀಲ ಚಿತ್ರ ನೋಡಲು ಇಷ್ಟವಿಲ್ಲ ಎಂದ ಗಂಡವನ್ನು, ಇಂಥ ಸಿನಿಮಾ ನೋಡುವಂತೆ ಹೆಂಡತಿ ಬಲವಂತ ಮಾಡಿದರೆ ಮಾತ್ರವೇ ಇದು ಕ್ರೌರ್ಯ ಎನಿಸಿಕೊಳ್ಳಲಿದೆ ಎಂದು ಮದ್ರಾಸ್‌ ಹೈಕೋರ್ಟ್‌ನ ಮಧುರೈ ಪೀಠ ಹೇಳಿದೆ. 

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ಜಸ್ಟೀಸ್ ಆರ್. ಪೂರ್ಣಿಮಾ ಅವರಿದ್ದ ಪೀಠ, ತನ್ನನ್ನು ತಾನೇ ಖುಷಿಪಡಿಸಿಕೊಳ್ಳುವ ಹಸ್ತ ಮೈಥುನದಂತ ವಿಚಾರ ಹೆಂಗಸಿಗೆ ನಿಷೇಧ ಮಾಡಿರೋ ವಿಚಾರಲ್ಲ ಎಂದು ಹೇಳಿದೆ. ಮದುವೆ ಆಗಿದ್ದಾಳೆ ಎನ್ನುವ ಏಕೈಕ ಕಾರಣಕ್ಕೆ ಹೆಂಗಸು ತನ್ನ ದೇಹಕ್ಕೆ ಖುಷಿ ಕೊಡೋಕೆ ಪ್ರಯತ್ನಿಸುವುದನ್ನ ತಡೆಯೋಕೆ ಆಗಲ್ಲ ಎಂತಲೂ ಕೋರ್ಟ್‌ ಹೇಳಿದೆ.
ಖಾಸಗಿ ಅನ್ನೋದು ಒಬ್ಬೊಬ್ಬರ ಮೂಲಭೂತ ಹಕ್ಕು. ಗಂಡಸರು ತಮಗೆ ತಾವೇ ಖುಷಿ ಪಡೋದು ಜಗತ್ತಿನಲ್ಲಿ ಒಪ್ಪಿಕೊಳ್ಳೋ ವ ವಿಷಯವಾಗಿ ನೋಡುತ್ತಾರೆ. ಇದೇ ಕೆಲಸವನ್ನು ಹೆಂಗಸಿ ಮಾಡಿದರೆ ಅದನ್ನು ತಪ್ಪು ಅಂತಾ ನೋಡುವುದು ಸರಿಯಲ್ಲ ಎಂದೂ ಕೋರ್ಟ್‌ಹೇಳಿದೆ. ಅಶ್ಲೀಲ ವಿಡಿಯೋ ನೋಡೋದು ಹಿಂದೂ ಮದುವೆ ಕಾನೂನಿನ 13(1)ಗೆ ಅನ್ವಯ ತಪ್ಪು ಎಂದು ಸಾಬೀತು ಮಾಡಲು ಆಗುವುದಿಲ್ಲ ಅಂತಾನೂ ಕೋರ್ಟ್ ಹೇಳಿದೆ. 

ತನ್ನ ಮದುವೆ ರದ್ದು ಮಾಡೋಕೆ ಒಪ್ಪದ ಕೌಟುಂಬಿಕ ನ್ಯಾಯಾಲಯದ ಕೋರ್ಟ್ ವಿರುದ್ಧ ಗಂಡ ಹೈಕೋರ್ಟ್‌ ಮೆಟ್ಟಿಲೇರಿದ್ದ. ಹೆಂಡತಿ ತನ್ನ ಗಂಡನ ಜೊತೆ ಸಂಸಾರ ಮಾಡೋಕೆ ವಾಪಸ್ ಬರಬೇಕು ಅನ್ನೋ ಅರ್ಜಿನೂ ಕೋರ್ಟ್ ವಿಚಾರಣೆ ಮಾಡಿತು. 2018 ಜುಲೈ 11ಕ್ಕೆ ಮದುವೆ ಆಗಿದ್ದ ಗಂಡ ಹೆಂಡತಿ ಕೋರ್ಟ್‌ಗೆ ಈ ಕುರಿತಾಗಿ ಅರ್ಜಿ ದಾಖಲು ಮಾಡಿದ್ದರು. 2020 ಡಿಸೆಂಬರ್ 9ರಿಂದ ಇಬ್ಬರೂ ಬೇರೆ ಬೇರೆ ಇದ್ದಾರೆ ಅಂತಾ ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಗಂಡ ಹೆಂಡತಿ ನಡುವಿನ ಸಂಬಂಧ ಸರಿಪಡಿಸೋಕೆ ಆಗದಷ್ಟು ಹಾಳಾಗಿದೆ ಅಂತಾ ಗಂಡನ ಪರ ವಕೀಲರು ವಾದ ಮಾಡಿದ್ದರು ಉಪಯೋಗ ಇಲ್ಲದ ಸಂಬಂಧ ಮುಂದುವರೆಸೋಕೆ ಅರ್ಥ ಇಲ್ಲ ಅಂತಾನೂ ಕೋರ್ಟ್‌ಗೆ ಎದುರು ವಾದ ಮಾಡಿದ್ದರು. ಹೆಂಡತಿಗೆ ಲೈಂಗಿಕ ರೋಗ ಇದೆ ಅಂತಾ ಆರೋಪ ಮಾಡಿದ. ಆದರೆ, ಇದಕ್ಕೆ ಸರಿಯಾದ ದಾಖಲೆ ಕೋರ್ಟ್‌ ಎದುರಿಗೆ ನೀಡಲು ವಿಫಲವಾಗಿದ್ದ. 

ಐಐಟಿ ಮದ್ರಾಸ್‌ನ ಹೈಪರ್‌ ಲೂಪ್‌ಗೆ ಶೀಘ್ರವೇ ವಿಶ್ವದ ಅತಿ ಉದ್ದದ ಹೈಪರ್‌ ಲೂಪ್ ಹಿರಿಮೆ

ಇದರ ಬೆನ್ನಲ್ಲಿಯೇ ಹೈಕೋರ್ಟ್‌ ತನ್ನ ತೀರ್ಪು ನೀಡಿದೆ.ಹೆಂಡತಿ ತುಂಬಾ ದುಡ್ಡು ಖರ್ಚು ಮಾಡ್ತಾಳೆ, ಮನೆ ಕೆಲಸ ಮಾಡಲ್ಲ, ಅಪ್ಪ ಅಮ್ಮನ ಸರಿಯಾಗಿ ನೋಡಿಕೊಳ್ಳಲ್ಲ, ಜಾಸ್ತಿ ಹೊತ್ತು ಫೋನ್‌ನಲ್ಲಿ ಮಾತಾಡ್ತಾಳೆ ಅಂತಾನೂ ಗಂಡ ಆರೋಪ ಮಾಡಿದ. ಆದರೆ, ಈ ಆರೋಪಗಳನ್ನ ಆತ ಸಾಬೀತು ಮಾಡೋಕೆ ಸಾಧ್ಯವಾಗಲಿಲ್ಲ. ಅದಕ್ಕೆ ಫ್ಯಾಮಿಲಿ ಕೋರ್ಟ್ ಕೊಟ್ಟ ತೀರ್ಮಾನವನ್ನ ಮದ್ರಾಸ್ ಹೈಕೋರ್ಟ್ ಸರಿ ಅಂತಾ ಹೇಳಿದೆ. 

ದೇವಾಲಯದ ಮಾಲೀಕತ್ವ ನಮ್ಮದೆಂದು ಯಾವುದೇ ಜಾತಿ ಹೇಳುವಂತಿಲ್ಲ