ಭೋಪಾಲ್(ಮೇ.13): ದೇಶಕ್ಕೆ ದುಃಸ್ವಪ್ನದಂತೆ ಎಂಟ್ರಿ ಕೊಟ್ಟಿರುವ ಕೊರೋನಾ ಸಿಕ್ಕ ಸಿಕ್ಕವರನ್ನು ತನ್ನ ಪಾಶಕ್ಕೆ ಸಿಲುಕಿಸುತ್ತಿದೆ. ಈ ಕೊರೋನಾ ಅಟ್ಟಹಾಸಕ್ಕೆ ಜನ ಸಾಮಾನ್ಯರು ನಲುಗಿದ್ದಾರೆ. ತಮ್ಮ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಯಮನಂತೆ ಎರಗಿರುವ ಈ ಮಹಾಮಾರಿಯಿಂದಾಗಿ ಅನೇಕ ಮಂದಿ ತನ್ನ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅನೇಕ ಮಂದಿ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಸದ್ಯ ಇಂತಹ ಮಕ್ಕಳಿಗಾಗಿ ಮಧ್ಯಪ್ರದೇಶ ಸರ್ಕಾರ ವಿಶೇಷ ನೆರವು ಘೋಷಿಸಿದೆ.

1 ಸಾವಿರ ಬೆಡ್‌ನ ಕ್ವಾರಂಟೈನ್‌ ಕೇಂದ್ರ: ರೋಗಿಗಳಿಗೆ ರಾಮಾಯಣ, ಮಹಾಭಾರತದ ದರ್ಶನ!

ಹೌದು ಕೊರೋನಾದಿಂದಾಗಿ ತಮ್ಮ ತಂದೆ ತಾಯಿ ಕಳೆದುಕೊಂಡು ಅನಾಥವಾದ ಪ್ರತಿ ಮಗುವಿಗೂ ಮಧ್ಯಪ್ರದೇಶ ಸರ್ಕಾರ  ಮಾಸಿಕ 5 ಸಾವಿರ ರೂಪಾಯಿ ಪೆನ್ಷನ್ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಉಚಿತ ಪಡಿತರ, ಉಚಿತ ವಿಧ್ಯಾಭ್ಯಾಸವನ್ನೂ ಸರ್ಕಾರ ನೀಡಲಿದೆ ಎಂದು  ಇಲ್ಲಿನ ಸಿಎಂ ಶಿವರಾಜ್ ಸಿಂಗ್ ಘೋಷಣೆ ಮಾಡಿದ್ದಾರೆ. '

ಸರ್ಕಾರದ ಈ ಘೋಷಣೆ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಕೊಂಚ ಸಮಾಧಾನ ನೀಡಲಿದೆ. ಮಕ್ಕಳಿಗೆ ಬದುಕು ಕಟ್ಟಿಕೊಳ್ಳಲು ದಾರಿಯಾಗಲಿದೆ.