Asianet Suvarna News Asianet Suvarna News

3,419 ಕೋಟಿ ರೂಪಾಯಿ ವಿದ್ಯುತ್ ಬಿಲ್, ದುಬಾರಿ ಮೊತ್ತ ನೋಡಿ ಕುಸಿದ ಬಿದ್ದ ವೃದ್ಧ ಆಸ್ಪತ್ರೆ ದಾಖಲು!

ಪ್ರತಿ ತಿಂಗಳು 700 ರಿಂದ 1000 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದ ವೃದ್ಧನಿಗೆ ಏಕಾಏಕಿ 3,419 ಕೋಟಿ ರೂಪಾಯಿ ಬಿಲ್ ಬಂದಿದೆ. ಬಿಲ್ ನೋಡಿದ ವೃದ್ಧ ಆಘಾತಕ್ಕೊಳಗಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧ ಇನ್ನೂ ಶಾಕ್‌ನಿಂದ ಹೊರಬಂದಿಲ್ಲ.

Madhya Pradesh man hospitalised after receive RS 3419 crore monthly electricity bill ckm
Author
Bengaluru, First Published Jul 27, 2022, 5:55 PM IST

ಮಧ್ಯಪ್ರದೇಶ(ಜು.27):  ವಿದ್ಯುತ್ ಬಿಲ್ ಈಗಾಗಲೇ ಹಲವರಿಗೆ ಶಾಕ್ ನೀಡಿದೆ. ಆದರೆ ಈ ಬಾರಿ ನೀಡಿದ ಶಾಕ್‌ಗೆ ವೃದ್ಧ ಆಸ್ಪತ್ರೆ ದಾಖಲಾಗಿದ್ದಾನೆ. ಕಾರಣ ವಿದ್ಯುತ್ ಬಿಲ್ ಸಾವಿರ, ಲಕ್ಷಗಳಲ್ಲ, ಬರೋಬ್ಬರಿ 3,419 ಕೋಟಿ ರೂಪಾಯಿ. ಈ ಬಿಲ್ ನೋಡಿದ ವೃದ್ಧ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಇದರಿಂದ ಕುಟುಂಬಸ್ಥರು ವೃದ್ಧನ ಆಸ್ಪತ್ರೆ ದಾಖಲಿಸಿದ್ದಾರೆ. ಈ ಘಟನೆ ನಡೆದಿರುವು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಪ್ರಿಯಾಂಕ ಗುಪ್ತಾ ಹಾಗೂ ಸಂಜೀವ್ ಕನ್ಕಾನೆ ಅವರ ಮನೆಯ ತಿಂಗಳ ವಿದ್ಯುತ್ ಬಿಲ್‌ನಿಂದ ಸಂಜೀವ್ ತಂದೆ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ.  ಸಂಜೀವ್ ಮನೆಯ ಜುಲೈ ತಿಂಗಳ ವಿದ್ಯುತ್ ಬಿಲ್  3,419 ಕೋಟಿ ರೂಪಾಯಿ ಎಂದು ಉಲ್ಲೇಖಿಸಿ ಬಿಲ್ ನೀಡಿದ್ದಾರೆ. ಜುಲೈ 20 ರಂದು ಮಧ್ಯಪ್ರದೇಶ ಕ್ಷೇತ್ರ ವಿದ್ಯುತ್ ವಿತ್ರಾನ್ ಕಂಪನಿ ಈ ಬಿಲ್ ಪರಿಶೀಲಿಸಿ ನೀಡಿದೆ. ಆದರೆ ಸಂಜೀವ್ ಹಾಗೂ ಪತ್ನಿ ಪ್ರಿಯಾಂಕಾ ಕೆಲಸದ ನಿಮಿತ್ತ ತೆರಳಿದಾಗ ಬಿಲ್ ಬಂದಿದೆ. ಈ ಬಿಲ್ ನೋಡಿ ಸಂಜೀವ್ ತಂದೆ ತೀವ್ರ ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಮನೆಗೆ ಮರಳಿದ ಸಂಜೀವ್ ತಂದೆಯನ್ನು ಆಸ್ಪತ್ರೆ ದಾಖಲಿಸಿದ್ದಾರೆ.

3,419 ಕೋಟಿ ರೂಪಾಯಿ ಬಿಲ್ ಕುರಿತು ಸುದ್ಧಿಯಾಗುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ವಿದ್ಯುತ್ ಇಲಾಖೆಗೆ ಪರಿಶೀಲಿಸಲು ಸೂಚಿಸಿದ್ದಾರೆ. ಬಳಿಕ ವಿದ್ಯುತ್ ಇಲಾಖೆ ಬಿಲ್ ಪ್ರಿಟಿಂಗ್‌ನಲ್ಲಿ ತಪ್ಪಾಗಿದೆ. ಸಂಜೀವ್ ಅವರ ಜುಲೈ ತಿಂಗಳ ವಿದ್ಯುತ್ ಬಿಲ್ 1,300 ರೂಪಾಯಿ ಎಂದಿದೆ. ಇಷ್ಟೇ ಅಲ್ಲ ತಪ್ಪಾಗಿ ಜನರೇಟ್ ಮಾಡಿರುವ ಬಿಲ್ ತೆಗೆದು ಹಾಕಿ ಹೊಸ ಬಿಲ್ ನೀಡಲಾಗಿದೆ. 

ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯ್ತಿಗಳಿಗೆ Hescom ಶಾಕ್, ಕತ್ತಲಲ್ಲಿ ಜನ

267.28 ಕೋಟಿ ವಿದ್ಯುತ್‌ ಬಿಲ್‌ ಕಟ್ಟಲು ಗ್ರಾಪಂಗೆ ಬೆಸ್ಕಾಂ ಸೂಚನೆ
ಹೊಸಕೋಟೆ ವಿಭಾಗ ವ್ಯಾಪ್ತಿಯ ಬೀದಿದೀಪ ಮತ್ತು ಕುಡಿಯುವ ನೀರಿನ ಸ್ಥಾವರಗಳ ಕಂದಾಯ ಬಾಕಿ ಪಾವತಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) 2022 ಮೇ ತಿಂಗಳ ಅಂತ್ಯಕ್ಕೆ ಬಾಕಿ ಇರುವ ತಮ್ಮ ಪಂಚಾಯಿತಿ ವಿದ್ಯುತ್‌ ಬಾಕಿ ಮೊತ್ತವನ್ನು ಜೂನ್‌ 20ರೊಳಗೆ ಪಾವತಿಸುವಂತೆ ಬೆಸ್ಕಾಂ ಸೂಚನೆ ನೀಡಿದೆ.

ಬೆಂಗಳೂರು ಪೂರ್ವದ 9 ಪಂಚಾಯಿತಿಗಳು ಕುಡಿಯುವ ನೀರಿನ ಸ್ಥಾವರಗಳ .17.32 ಕೋಟಿ ಮತ್ತು ಬೀದಿ ದೀಪಗಳ ಬಾಕಿ .3.18 ಕೋಟಿ ಸೇರಿದಂತೆ .20.50 ಕೋಟಿ ಪಾವತಿಸಬೇಕಿದೆ. ಬೆಂಗಳೂರು ಉತ್ತರದ 10 ಪಂಚಾಯಿತಿಗಳು ಕುಡಿಯುವ ನೀರಿನ ಸ್ಥಾವರದ ಬಾಕಿ .18.80 ಕೋಟಿ, ಬೀದಿ ದೀಪಗಳ ಬಾಕಿ .1.24 ಕೋಟಿ ಸೇರಿ .20.04 ಕೋಟಿ, ಹೊಸಕೋಟೆಯ 28 ಪಂಚಾಯಿತಿಗಳು .136.57 ಕೋಟಿ ಕುಡಿಯುವ ನೀರಿನ ಸ್ಥಾವರಗಳು ಮತ್ತು .10.31 ಕೋಟಿ ಬೀದಿ ದೀಪಗಳ ಬಾಕಿ ಸೇರಿ .146.88 ಕೋಟಿ ಪಾವತಿ ಮಾಡಬೇಕಿದೆ.

Cyber Fraud: ವಿದ್ಯುತ್ ಬಿಲ್ ಬಾಕಿ ಹೆಸರಲ್ಲಿ ಸೈಬರ್ ವಂಚನೆ: ಲಿಂಕ್‌ ಕ್ಲಿಕ್‌ ಮಾಡುವ ಮುನ್‌ ಎಚ್ಚರ!

Follow Us:
Download App:
  • android
  • ios