ಇಂದೋರ್(ಏ.16): ದೇಶದಲ್ಲಿ ಕೊರೋನಾ ವೈರಸ್ ದಿನಕ್ಕೆ 2 ಲಕ್ಷ ಕೇಸ್ ದಾಟಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡ ಗಣನೀಯ ಹೆಚ್ಚಾಗಿದೆ. ಇದರ ನಜುವೆ ಕೊರೋನಾ ಹೆಸರಿನಲ್ಲಿ ಜನರಿಂದ ಸುಲಿಗೆ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೆ ಇದರು ನಡುವೆ ಕೆಲವರು ಹೊಸ ಹೊಸ ದಾರಿ ಮೂಲಕ ದಂಧೆ ನಡೆಸುತ್ತಿದ್ದಾರೆ. ಇದೀಗ ರೆಮ್ಡಿಸಿವಿರ್ ಕೊರೋನಾ ಔಷಧ ಎಂದು ನಕಲಿ ಔಷಧ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶದ ಔಷಧಿ ಕಂಪನಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

ರೆಮ್ಡೆಸಿವಿರ್ ಕೊರೋನಾ ಲಸಿಕೆ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ!

ಪೊಲೀಸರ ಅತಿಥಿಯಾಗಿರುವ ಔಷಧಿ ಕಂಪನಿ ಮಾಲೀಕ ವಿನಯ್ ಶಂಕರ್ ತ್ರಿಪಾಠಿ, ಇಂದೋರ್‌ನ ರಾಣಿ ಭಾಗ್ ನಿವಾಸಿಯಾಗಿದ್ದಾನೆ. ಈತನಿಂದ 400ಕ್ಕೂ ಹೆಚ್ಚು ನಕಲಿ ರೆಮ್ಡಿಸಿವಿರ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಕಲಿ ಔಷಧಿ ವಶಕ್ಕೆ ಪಡೆದಿದ್ದಾರೆ. ಬಳಿಕ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇದು ನಕಲಿ ಎಂದು ಸಾಬೀತಾಗಿದೆ.

ಭಾರತದಲ್ಲಿ ಕೊರೋನಾ ಔಷಧ ರೆಮ್ಡಿಸಿವಿರ್ ಔಷಧ ಅಲಭ್ಯತೆಯಾಗಿತ್ತು. ಹೀಗಾಗಿ ರೆಮ್ಡಿಸಿವಿರ್ ವಿದೇಶಕ್ಕೆ ರಫ್ತು ಮಾಡುವುದನ್ನು ಸರ್ಕಾರ ನಿಷೇಧಿಸಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ವಿನಯ್ ಶಂಕರ್, ಹಣ ಮಾಡಲು ನಕಲಿ ರೆಮ್ಡಿಸಿವಿರ್ ಔಷಧ ಮಾರಾಟ ಮಾಡುತ್ತಿದ್ದ. ಈತನ ವಿರುದ್ಧ ಹಲವು ವಂಚನೆ ಪ್ರಕರಣ ದಾಖಲಾಗಿದೆ.

ಆರೋಪಿ 20 ಲಕ್ಷ ರೂಪಾಯಿಗೆ ಈ ನಕಲಿ ಔಷಧಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ. ಈ ನಕಲಿ ರೆಮ್ಡಿಸಿವಿರ್ ಔಷಧಿ ಹಿಮಾಚಲ ಪ್ರದೇಶದಲ್ಲಿ ತಯಾರಿಸಲಾಗಿದೆ.