Asianet Suvarna News Asianet Suvarna News

ರೆಮ್ಡೆಸಿವಿರ್ ಕೊರೋನಾ ಲಸಿಕೆ ರಫ್ತು ನಿಷೇಧಿಸಿದ ಕೇಂದ್ರ ಸರ್ಕಾರ!

ಕೊರೋನಾ ಲಸಿಕೆ ರಫ್ತು ವಿಚಾರದಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೊರೋನಾ ಲಸಿಕೆಗೆ ಪರಿಣಾಮಕಾರಿಯಾಗಿರುವ ರೆಮ್ಡೆಸಿವಿರ್ ಲಸಿಕೆಯನ್ನು ವಿದೇಶಕ್ಕೆ ರಫ್ತು ಮಾಡುವುದನ್ನು ಭಾರತ ನಿಷೇಧಿಸಿದೆ. ಈ ನಿರ್ಧಾರಕ್ಕೆ ಕಾರಣವೇನು? ಇಲ್ಲಿದೆ ವಿವರ.

Coronavirus 2nd wave India imposed ban on export of Remdesivir medicine ckm
Author
Bengaluru, First Published Apr 11, 2021, 7:57 PM IST

ನವದೆಹಲಿ(ಏ.11): ದೇಶದಲ್ಲಿ ಕೊರೋನ ವೈರಸ್ ಪ್ರಕರಣ ಸಂಖ್ಯೆ ರಾಕೆಟ್ ವೇಗದಲ್ಲಿ ಸಂಚರಿಸುತ್ತಿದೆ.  ಬಹುತೇಕ ರಾಜ್ಯಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಪ್ರಕರಣ ವರದಿಯಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಕೊರೋನಾ ಲಸಿಕೆ ಅಭಾವ ಕೂಡ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ರೆಮ್ಡೆಸಿವಿರ್ ಕೊರೋನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡುವುದನ್ನು ನಿಷೇಧಿಸಿದೆ.

ಭಾರತದಲ್ಲಿ ಹೊಸ ಡಬಲ್ ರೂಪಾಂತರಿ ವೈರಸ್ ಪತ್ತೆ; ಅಪಾಯದ ಪ್ರಮಾಣ ಮತ್ತಷ್ಟು ಹೆಚ್ಚು!.

ದೇಶದಲ್ಲಿ ಲಸಿಕೆ ಅಭಾವ ಕಾಡುತ್ತಿದೆ. ರೆಮ್ಡೆಸಿವರ್ ಕೊರೋನಾ ಸೋಂಕಿಗೆ ಪರಿಣಾಮಕಾರಿಯಾಗಿದೆ. ಹೀಗಾಗಿ ರೆಮ್ಡೆಸಿವಿರ್ ಇಂಜೆಕ್ಷನ್ ಹಾಗೂ ರೆಮ್ಡೆಸಿವಿರ್ ಆ್ಯಕ್ಟೀವ್ ಫಾರ್ಮಾಸ್ಯುಟಿಕಲ್ ವಿದೇಶಕ್ಕೆ ರಫ್ತು ಮಾಡುವುದನ್ನು ಬ್ಯಾನ್ ಮಾಡಲಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣ ನಿಯಂತ್ರಣಕ್ಕೆ ಬರುವ ವರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ವಿದೇಶಕ್ಕೆ ರೆಮ್ಡಿಸಿವಿರ್ ಲಸಿಕೆ ನಿಷೇಧಿಸಿದೆ, ಇದೀಗ ಭಾರತದ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಈ ಲಸಿಕೆ ಸುಲಭವಾಗಿ ಸಿಗುವಂತೆ ಮಾಡಲು ಕೇಂದ್ರ ನಿರ್ಧರಿಸಿದೆ. ದೇಶದಲ್ಲಿ ತ್ವರಿತಗತಿಯಲ್ಲಿ ಲಸಿಕೆಯನ್ನು ವಿಸ್ತರಿಸಲು ಹಾಗೂ ಹೆಚ್ಚಿನ ಮಂದಿಗೆ ಲಸಿಕೆ ನೀಡಲು ಈ ಕ್ರಮ ಕೈಗೊಂಡಿದೆ.
 

Follow Us:
Download App:
  • android
  • ios