ಮಾಸ್ಟರ್‌ ಆನಂದ್‌ ಪುತ್ರಿ ವಂಶಿಕಾ ಹೆಸರಲ್ಲಿ ಪೋಷಕರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ವಂಚಿಸಿದ ಆರೋಪದಲ್ಲಿ ಜೈಲು ಪಾಲಾಗಿದ್ದ ನಿಶಾ ನರಸಪ್ಪ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದರ ಬೆನ್ನಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಇದೆಲ್ಲವೂ ನನ್ನ ಮೇಲಿನ ಸಂಚಿನ ಭಾಗ ಎಂದಿದ್ದಾರೆ. 

ಬೆಂಗಳೂರು (ಜು.29): ಕಿರುತೆರೆ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಜನಪ್ರಿಯವಾಗಿರುವ ಮಾಸ್ಟರ್‌ ಆನಂದ್‌ ಅವರ ಪುತ್ರಿ 6 ವರ್ಷದ ವಂಶಿಕಾ ಹೆಸರಲ್ಲಿ ಪೋಷಕರಿಗೆ 40 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿದ ಆರೋಪದಲ್ಲಿ ಎನ್‌ವಿ ಪ್ರೊಡಕ್ಷನ್‌ ಕಂಪನಿಯ ಸಂಸ್ಥಾಪಕಿ ನಿಶಾ ನರಸಪ್ಪ ಜೈಲು ಪಾಲಾಗಿದ್ದರು. ಜುಲೈ 21 ರಂದು ಜಾಮೀನು ಪಡೆದು ಹೊರಬಂದಿದ್ದ ನಿಶಾ ನರಸಪ್ಪ, ಜೈಲಿನಿಂದ ಹೊರಬಂದಮೇಲೆ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಶನಿವಾರ ಎಂಎಸ್‌ ಪಾಳ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದ ನಿಶಾ ನರಸಪ್ಪ, ತಮ್ಮ ಮೇಲಿನ ಸಂಚು ಹಾಗೂ ವಂಶಿಕಾ ಅವರ ತಾಯಿ ಯಶಸ್ವಿನಿ ಬಗ್ಗೆ ನೇರಾನೇರ ಆರೋಪಗಳನ್ನು ಮಾಡಿದ್ದಾರೆ. ಮಾಸ್ಟರ್‌ ಆನಂದ್‌ ಅವರ ಮಗಳಿಂದ ನಾನೇನು ಬದುಕಿಲ್ಲ, ಇನ್ನು ವಂಶಿಕಾ ಅವರ ತಾಯಿ ಯಶಸ್ವಿನಿ ಯಾವ ಕಾರ್ಯಕ್ರಮಕ್ಕೂ ಮಗಳನ್ನು ಪುಗ್ಸಟ್ಟೆ ಕಳಿಸಲ್ಲ ಎಂದು ಹೇಳಿದ್ದಾರೆ.

ಯಶಸ್ವಿನಿಗೂ ನಮ್ಮ ಕಂಪನಿಗೂ ಒಂದು ವರ್ಷದಿಂದ ಪರಿಚಯವಿದೆ. ಅವರು ಪ್ರಮೋಷನ್‌ಗಾಗಿ ನನ್ನ ಬಳಿ ಬರುತ್ತಿದ್ದರು. ಅವರಿಗೆ ಸ್ವಲ್ಪ ಹಣ ಕೊಡಬೇಕಿದೆ. ಈಗಾಗಲೇ ಸ್ವಲ್ಪ ಪ್ರಮಾಣದ ಹಣವನ್ನು ಕೊಟ್ಟಿದ್ದೇನೆ. ಇದಕ್ಕೆ ಸಂಬಂಧಿಸಿದ ಪೋಟೋಗಳು ನನ್ನ ಬಳಿ ಇದೆ. ಆದರೆ, ಇಡೀ ಮಾಧ್ಯಮ ಹಾಗೂ ಪೊಲೀಸರ ಮುಂದೆ ಆಕೆ ನನಗೂ-ಅವರಿಗೂ ಪರಿಚಯವೇ ಇಲ್ಲ ಎನ್ನುವಂತೆ ತೋರಿಸಿಕೊಂಡಿದ್ದಾರೆ. ಯಶಸ್ವಿನಿಯವರು ಪುಗ್ಸಟ್ಟೆ ಯಾವುದೇ ಈವೆಂಟ್‌ಗೂ ಬರೋದಿಲ್ಲ. ಪ್ರತಿಯೊಂದಕ್ಕೂ ಅಮೌಂಟ್ ಪಡೆದೇ ಬಂದಿದ್ದಾರೆ. ಇದನ್ನ ನಾನು ಹೊರಗೆ ಹೇಳಬಾರಾದಾ? ನನ್ನ ಪ್ರೊಡಕ್ಷನ್ ಗೆ ಏಳು ವರ್ಷವಾಗಿದೆ. ಆದರೆ, ವಂಶಿಕಾಗೆ ಐದು ವರ್ಷ. ಇವರು ಹೇಳೋ ಪ್ರಕಾರ, ನಾನು ಇವರ ಮಗಳಿಂದಲೆನಾ ಬದುಕಿರೋದಾ?. ಅವರು ಪ್ರತಿಯೊಂದು ವಾಹಿನಿಯಲ್ಲೂ ಹಣ ಪಡೆದೆ ಭಾಗವಹಿಸುತ್ತಿರೋದು. ಇದೊಂದು ಕಂಪ್ಲೀಟ್ ಬ್ಯುಸಿನೆಸ್ ಅಷ್ಟೇ. ಯಶಸ್ವಿನಿ ಎಲ್ಲರಿಗೂ ರಿಫಂಡ್ ಮಾಡ್ತೀನಿ ಅಂತಾ ಹೇಳ್ತಿದ್ದಾರೆ. ಹಣ ರೀಫಂಡ್‌ ಮಾಡೋಕೆ ಇವರು ಯಾರು ಎಂದು ನಿಶಾ ನರಸಪ್ಪ ಪ್ರಶ್ನೆ ಮಾಡಿದ್ದಾರೆ.


ಯಶಸ್ವಿನಿ ಆ ದಿನ ಠಾಣೆಗೆ ಬಂದು ಏನೂ ಪರಿಚಯ ಇಲ್ಲಾ ಅನ್ನೋ ರೀತಿ ತೋರಿಸಿಕೊಂಡು, ಕಿರುಚಾಡಿ ಕೂಗಾಡಿದ್ದರು. ನಂತರ ಅವರು ಎಲ್ಲರಿಗೂ ರೀಫಂಡ್ ಕೊಡ್ತೀನಿ ಅಂತಾ ಹೇಳಿದರು. ಅವರು ನನ್ನ ಕಂಪನಿಯಲ್ಲ ಆದ್ರೂ ಏನೇನೋ ಹೇಳಿದರು. ಇದು ಆರು ತಿಂಗಳ ಕಂಪ್ಲೀಟ್ ಪ್ಲಾನ್ ಮಾಡಿ ನನ್ನನ್ನು ಹೀಗೆ ನೂಕಿದ್ದಾರೆ. ನನ್ನ ಮೇಲೆ‌ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು.

ಎನ್ ಎನ್‌ ಪ್ರೊಡಕ್ಷನ್ ಕಂಪನಿ‌ ನಾನು ಆರಂಭಿಸಿರುವ ಕಂಪನಿ. ನಾನು ಏಳು ವರ್ಷದಿಂದ ಈ ಕಂಪನಿಯನ್ನು ನೋಡಿಕೊಂಡಿದ್ದೇನೆ. ನಾನು ಸಾಕಷ್ಟು ಈವೆಂಟ್ ಮಾಡಿದ್ದಿನಿ, ನನ್ನ ಕಂಪನಿಗೆ ಸಣ್ಣ ಬ್ಲ್ಯಾಕ್‌ ಮಾರ್ಕ್‌ ಕೂಡ ಇದ್ದಿರಲಿಲ್ಲ. ಒಂದು ವರ್ಷದಿಂದ ಕಂಪನಿ ಉತ್ತಮ ಲಾಭದಲ್ಲೂ ಇದೆ. ಇತ್ತೀಚೆಗೆ ಹರ್ಷಿತಾ ಅಂತ ಒಂದು ಹುಡುಗಿಯನ್ನ ನಾನು ಕೆಲಸಕ್ಕೆ ತೆಗೆದುಕೊಂಡೆ. ಅವರ ಫ್ಯಾಮಿನಿ ನನಗೆ ಕ್ಲೋಸ್‌ ಆಗಿತ್ತು. ಅವರು ಸುಮಾರು ಎರಡು ವರ್ಷ ಅವರು ನನ್ನ ಜೊತೆ ಇದ್ದರು. ಈ ವೇಳೆ ಆಕೆಗೆ ನನ್ನ ಬ್ಯಾಂಕ್‌ ಡೀಟೇಲ್‌ ಎಲ್ಲಾ ಮಾಹಿತಿ ಇತ್ತು. ನನ್ನ ಕಂಪನಿ ಉತ್ತಮವಾಗಿ ಹೋಗುತ್ತಿದೆ ಎಂದು ಗೊತ್ತಾದಾಗ ಕಂಪನಿಯಲ್ಲಿ ಶೇರ್ ಕೇಳಿದ್ದರು. ಇದಕ್ಕೆ ನಾನು ಒಪ್ಪಲಿಲ್ಲ. ಆದರೆ ಆಕೆಯ ಐಫೋನ್‌ನಲ್ಲಿ ನನ್ನ ಇನ್ಸ್ಟಾಗ್ರಾಂ ಓಪನ್ ಮಾಡಿದ್ದರು. ಇದನ್ನ ನಾನು ಪ್ರಶ್ನೆ ಮಾಡಿದ್ದೆ ಎಂದು ನಿಶಾ ಹೇಳಿದ್ದಾರೆ.

Bengaluru: ಮಾಸ್ಟರ್‌ ಆನಂದ್‌ ಪುತ್ರಿ ವನ್ಷಿಕಾ ಹೆಸರಲ್ಲಿ ವಂಚಿಸಿದ್ದ ನಿಶಾ ನರಸಪ್ಪ ಜೈಲಿಂದ ರಿಲೀಸ್‌..

ಇದಾದ ಬಳಿಕ ಆಕೆ ಕೆಲಸ ಬಿಟ್ಟಿದ್ದರು. ಇದಾದ ಮೇಲೆ ನನಗೆ ತೊಂದರೆ ಶುರುವಾಯ್ತು. ನನ್ನ ಕ್ಲೈಂಟ್ಸ್ ಮನೆ ಹತ್ತಿರ ಬರೋಕೆ ಶುರು ಮಾಡಿದರು. ಹರ್ಷಿತಾ ಅವರನ್ನ ಬ್ಯಾಗ್ರೌಂಡ್ ನಲ್ಲಿ ಕಳಿಸುತ್ತಿದ್ದರು. ರೀತು ಅನ್ನೋರು ಗಲಾಟೆ ವಿಡೀಯೋ ನೀಡಿದ್ದಾರೆ. ಅವರ ಬಾಯ್ ಫ್ರೆಂಡ್ ಬಂದು ಗಲಾಟೆ ಮಾಡಿದ್ದಾರೆ. ಈ ಟೈಮಲ್ಲಿ ಅವರು ಇದನ್ನ ಬಳಸಿಕೊಂಡಿದ್ದಾರೆ. ಅದಲ್ಲದೆ, ಹರ್ಷಿತ ಗ್ರೂಪ್ ಮಾಡಿ ನನ್ನ ಬಗ್ಗೆ ನೆಗಟಿವ್ ವಿಚಾರ ಪ್ರಚಾರ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Bengaluru: ಮಿಸ್‌ ಇಂಡಿಯಾ ನಿಶಾ ನರಸಪ್ಪ, ಈಗ ವಂಚನೆ ಆರೋಪಿ