Asianet Suvarna News Asianet Suvarna News

ರೀಲ್ಸ್‌ಗಾಗಿ ದೇವಸ್ಥಾನದ ಒಳಗೆ ಮುನ್ನಿ ಬದ್ನಾಮ್ ಹಾಡಿಗೆ ನೃತ್ಯ, ಯುವತಿ ವಿರುದ್ಧ ದೂರು!

ದೇವಸ್ಥಾನದ ಒಳಗೆ ಫೋಟೋ ತೆಗೆಯುವುದು, ವಿಡಿಯೋ ಚಿತ್ರೀಕರಿಸುವುದು ನಿಷಿದ್ಧ. ಹೀಗಿರುವಾಗ ಯುವತಿಯೊಬ್ಬಳು ಇನ್‌ಸ್ಟಾಗ್ರಾಂ ರೀಲ್ಸ್‌ಗಾಗಿ ದೇವಸ್ಥಾನದ ಒಳಗೆ ಮುನ್ನಿ ಬದ್ನಾಮ್ ಐಟಂ ಸಾಂಗ್‌‌ಗೆ ನೃತ್ಯ ಮಾಡಿದ್ದಾಳೆ. ಹಿಂದೂ ಭಕ್ತರನ್ನು ಕೆರಳಿಸಿದೆ. ಇದೀಗ ಸರ್ಕಾರ ತನಿಖೆಗೆ ಆದೇಶಿಸಿದೆ. 

Madhya Pradesh home minister sought action against woman for Instagram reel with Munni Badnam Hui songs ckm
Author
First Published Oct 4, 2022, 4:46 PM IST | Last Updated Oct 4, 2022, 4:46 PM IST

ಇಂದೋರ್(ಅ.04): ಯುವ ಸಮೂಹದಲ್ಲಿ ರೀಲ್ಸ್ ಹುಚ್ಚು ಹೆಚ್ಚಾಗುತ್ತಿದೆ. ಪ್ರಾಣ ಹೋಗುತ್ತಿದ್ದರೂ ರೀಲ್ಸ್ ಮಾತ್ರ ಬಿಡಲ್ಲ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ತಲುಪಿದೆ. ಹೀಗೆ ಯುವತಿಯೊಬ್ಬಳು ಬಾಲಿವುಡ್ ಐಟಂ ಸಾಂಗ್ ಮುನ್ನಿ ಬದ್ನಾಮ್ ಹಾಡಿಗೆ ದೇವಸ್ಥಾನದ ಒಳಗೆ ನೃತ್ಯ ಮಾಡಿ ಇನ್‌ಸ್ಟಾಗ್ರಾಂ ರೀಲ್ಸ್ ಚಿತ್ರೀಕರಿಸಿದ್ದಾಳೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಮಾತಾ ಬುಂಬರಬೈನಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನೇಹಾ ಮಿಶ್ರಾ ಅನ್ನೋ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಯುವತಿ ದೇವಸ್ಥಾನದ ಒಳ ಪ್ರವೇಶಿಸಿ ಐಟಂ ಸಾಂಗ್ ರೀಲ್ಸ್ ಮಾಡಿದ್ದಾಳೆ.  ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದ ಒಳಗೆ ಈ ರೀತಿಯ ರೀಲ್ಸ್ ಮಾಡಿ ಭಕ್ತರ ಭಾವನೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ಯುವತಿ ವಿರುದ್ಧ ಕ್ರಮಕ್ಕೆ ಆದೇಶಿಸಿದೆ.

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತಕ್ಷಣವೇ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಇಷ್ಟೇ ಅಲ್ಲ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಯುವತಿ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಇತ್ತ ವಿವಾದ ಹೆಚ್ಚಾಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.  ಆದರೆ ಹಿಂದೂ ಸಂಘಟನೆಗಳ ಯುವತಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

 

ಟಿಕ್‌ಟಾಕ್‌ನಲ್ಲಿ ಅರಳಿದ ಪ್ರೇಮ: ಪ್ರೀತಿಸಿದಾಕೆಯ ಜೊತೆ ಪತಿಗೆ ಮದುವೆ ಮಾಡಿಸಿದ ಪತ್ನಿ

ಕದ್ದ ಬೈಕ್‌ಗಳಲ್ಲಿ ವ್ಹೀಲಿಂಗ್‌ ರೀಲ್ಸ್‌ ಮಾಡುತ್ತಿದ್ದ ಕಳ್ಳ!
ಕದ್ದ ಬೈಕ್‌ಗಳಲ್ಲಿ ವ್ಹೀಲಿಂಗ್‌ ‘ರೀಲ್ಸ್‌’ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಚಾಲಾಕಿ ಖದೀಮನೊಬ್ಬ ಬೆಂಗಳೂರಿನ ಮೈಕೋಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬನ್ನೇರುಘಟ್ಟರಸ್ತೆಯ ಅರೆಕೆರೆ ನಿವಾಸಿ ಸೈಯದ್‌ ಸುಹೈಲ್‌ ಬಂಧಿತನಾಗಿದ್ದು, ಆರೋಪಿಯಿಂದ 50 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇತ್ತೀಚೆಗೆ ಮೈಕೋ ಲೇಔಟ್‌ ವ್ಯಾಪ್ತಿಯಲ್ಲಿ ಸರಣಿ ಬೈಕ್‌ ಕಳ್ಳತನಗಳಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

 

 

ರೀಲ್ಸ್‌ ಮಾಡಹೋಗಿ ಕೆರೆಯಲ್ಲಿ ಮುಳುಗಿದ್ದ ಬಾಲಕರ ಶವ ಪತ್ತೆ
ಈಜಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಉದ್ದೇಶದಿಂದ ದೊಡ್ಡಗುಬ್ಬಿ ಕೆರೆಗೆ ಈಜಲು ಹೋಗಿದ್ದಾಗ ಮುಳುಗಿ ಮೃತಪಟ್ಟಿದ್ದ ಮೂವರು ಬಾಲಕರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್‌ ಸಿಬ್ಬಂದಿ ಶುಕ್ರವಾರ ಹೊರತೆಗೆದಿದ್ದಾರೆ. ಸಾರಾಯಿ ಪಾಳ್ಯ ನಿವಾಸಿಗಳಾದ ಇಮ್ರಾನ್‌ ಪಾಷಾ (17), ಮುಬಾರಕ್‌ (17), ಸಾಹಿಲ್‌ (15) ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್‌ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರ ಸುಪರ್ದಿಗೆ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಐವರು ಬಾಲಕರು ಗುರುವಾರ ಮಧ್ಯಾಹ್ನ ದೊಡ್ಡಗುಬ್ಬಿ ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಅಬ್ದುಲ್‌ ರೆಹಮಾನ್‌ ಮತ್ತು ಶಾಹಿದ್‌ ಎಂಬುವವರು ಈಜು ಬಾರದ ಹಿನ್ನೆಲೆಯಲ್ಲಿ ಕೆರೆಗೆ ಇಳಿಯದೆ ದಡದಲ್ಲಿ ಇದ್ದರು. ಉಳಿದ ಮೂವರು ಕೆರೆಗೆ ಹಾರಿದ್ದರು. ಈ ವೇಳೆ ಕೆಲ ಕಾಲ ಈಜಾಡಿ ಬಳಿಕ ಸುಸ್ತಾಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರು.

ರೀಲ್ಸ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವತಿ!

Latest Videos
Follow Us:
Download App:
  • android
  • ios