Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ, 15 ಮಂದಿ ಸ್ಥಳದಲ್ಲೇ ಸಾವು!

ಶುಕ್ರವಾರ ತಡರಾತ್ರಿ ಮಧ್ಯಪ್ರದೇಶದ ರೇವಾದಲ್ಲಿ ಟ್ರೇಲರ್‌ ಹಾಗೂ ಬಸ್‌ನ ನಡುವ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.
 

madhya pradesh collision between bus and trolley near Suhagi Hill in Rewa feared dead san
Author
First Published Oct 22, 2022, 8:43 AM IST

ಭೋಪಾಲ್‌ (ಅ. 21): ಮಧ್ಯಪ್ರದೇಶದ ರೇವಾ ಬಳಿ ರಾಷ್ಟ್ರೀಯ ಹೆದ್ದಾರಿ-30 ರಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದೆ. ಸೊಹಗಿ ಬೆಟ್ಟದಿಂದ ಇಳಿಯುತ್ತಿದ್ದಾಗ ಮುಂದೆ ಹೋಗುತ್ತಿದ್ದ ಟ್ರೇಲರ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 15 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸೋಹಗಿ ಪೊಲೀಸರು ಸ್ಥಳಕ್ಕಾಗಮಿಸಿ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ತಯೋಂಥರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು .ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಬೆಟ್ಟದ ಕಣಿವೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಹೈದರಾಬಾದ್‌ನಿಂದ ರೇವಾ ಮೂಲಕ ಗೋರಖ್‌ಪುರಕ್ಕೆ ಹೋಗುತ್ತಿತ್ತು. ಬೆಟ್ಟದಿಂದ ಇಳಿಯುವಾಗ ಅಪಘಾತಕ್ಕೆ ಸಂಭವಿಸಿದೆ. ಬಸ್ಸಿನ ಕ್ಯಾಬಿನ್‌ನಲ್ಲಿ 3-4 ಜನರು ಕೂಡ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿತ್ತು. ಗಾಯಗೊಂಡವರಲ್ಲಿ ಹೆಚ್ಚಿನವರು ಕಾರ್ಮಿಕರು. ಎಲ್ಲರೂ ದೀಪಾವಳಿ ಆಚರಿಸಲು ಮನೆಗೆ ಮರಳುತ್ತಿದ್ದರು. ತಡರಾತ್ರಿ 1 ಗಂಟೆ ವೇಳೆಗೆ 55 ಮಂದಿ ತಯೋಂಥರ್ ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದೆ.


ಟ್ರಾಲಿ ಟ್ರಕ್ ತನ್ನ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿತ್ತು ಎಂದು ಕಾಣುತ್ತದೆ. ಇದರಿಂದಾಗಿ ಅದರ ಮುಂಭಾಗಕ್ಕೂ ಹಾನಿಯಾಗಿದೆ. ಚಾಲಕ ಬ್ರೇಕ್ ಹಾಕಿದಾಗ, ಅದರ ಹಿಂದಿನ ಬಸ್ ಡಿಕ್ಕಿ ಹೊಡೆದಿದೆ. ಪೊಲೀಸ್ ಆಡಳಿತ ಮತ್ತು ಸ್ಥಳೀಯ ಜನರು ಇಲ್ಲಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರೇವಾ ಜಿಲ್ಲಾಧಿಕಾರಿ ಮನೋಜ್ ಪುಷ್ಪ್  ತಿಳಿಸಿದ್ದಾರೆ. ಕೆಲವು ಗಾಯಾಳುಗಳಿಗೆ ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣಕ್ಕಾಗಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದು,  ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ 500 ರೋಡ್ ಹಂಪ್ಸ್

ಸದ್ಯದ ಮಾಹಿತಿ ಪ್ರಕಾರ ಬಸ್ ನಲ್ಲಿ ಸುಮಾರು 70 ಮಂದಿ ಪ್ರಯಾಣಿಕರಿದ್ದರು. ದೀಪಾವಳಿ ಆಚರಿಸಲು ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದರು. ಮೃತರಲ್ಲಿ ಹೆಚ್ಚಿನವರು ಯುಪಿ ನಿವಾಸಿಗಳು. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಸ್ ಹೈದರಾಬಾದ್‌ನಿಂದ (Hyderabad)ಗೋರಖ್‌ಪುರಕ್ಕೆ ತೆರಳುತ್ತಿತ್ತು. ರೇವಾದ ಸೊಹಗಿ ಬೆಟ್ಟದ ಬಳಿ ಅಪಘಾತ ಸಂಭವಿಸಿದೆ.

ಹಾಸನ: ಬಾಣಾವರ ಬಳಿ ಭೀಕರ ಅಪಘಾತ: 2 ಕಂದಮ್ಮ ಸೇರಿ ಸ್ಥಳದಲ್ಲೇ 9 ಜನರ ದುರ್ಮರಣ

ಅಪಘಾತವನ್ನು ದೃಢಪಡಿಸಿದ ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ (Navneet Bhasin), ರೇವಾದ (Rewa) ಸೊಹಗಿ ಬೆಟ್ಟದ (Suhagi Hill) ಬಳಿ ಬಸ್ ಮತ್ತು ಟ್ರೇಲರ್‌ ಟ್ರಕ್ ನಡುವೆ ಡಿಕ್ಕಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಅಪಘಾತದಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 40 ಮಂದಿಯಲ್ಲಿ 20 ಮಂದಿಯನ್ನು ಪ್ರಯಾಗರಾಜ್ (ಉತ್ತರ ಪ್ರದೇಶ) ಆಸ್ಪತ್ರೆಗೆ (Uttar Pradesh) ದಾಖಲಿಸಲಾಗಿದೆ. ಅಲ್ಲಿ, ಇಲ್ಲಿಯೇ ಕೆಲವು ಚಿಕಿತ್ಸೆ ನಡೆಯುತ್ತಿದೆ. ಬಸ್ ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿದ್ದವರೆಲ್ಲರೂ ಯುಪಿ ನಿವಾಸಿಗಳು ಎಂದಿದ್ದಾರೆ.

ಅಪಘಾತದ ಪ್ರಮಾಣ ಎಷ್ಟು ಭೀಕರವಾಗಿತ್ತೆಂದರೆ, ಕೆಲವರ ಮೃತದೇಹಗಳು ಬಸ್‌ನ ಕ್ಯಾಬಿನ್‌ನಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದವು. ಅವುಗಳನ್ನು ತೆಗೆಯಲು ಸ್ಥಳೀಯ ಜನರು ಹರಸಾಹಸ ಪಟ್ಟಿದ್ದಾರೆ. ಬಸ್‌ನಲ್ಲಿ 70ಕ್ಕೂ ಅಧಿಕ ಜನರಿದ್ದರು ಎಂದು ಹೇಳಲಾಗುತ್ತದೆ. ಸೊಹಗಿ ಬೆಟ್ಟದ ಬಳಿ ಬಸ್‌ ಬರುವ ವೇಳೆ, ಬಸ್‌ನ ಮುಂದಿದ್ದ ಟ್ರಕ್‌, ಅನಾಮಿಕ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಈ ಟ್ರೇಲರ್‌ ಟ್ರಕ್‌ಗೆ ಬಸ್‌ ವೇಗವಾಗಿ ಬಂದು ಡಿಕ್ಕಿಯಾಗಿದೆ. ಬಸ್‌ಅನ್ನು ನಿಯಂತ್ರಿಸಲು ಚಾಲಕ ಬ್ರೇಕ್‌ ಹಾಕಿದ್ದರೂ ಯಾವುದೇ ಪ್ರಯೋಜನವಾಗದೇ ಭೀಕರವಾಗಿ ಅಪಘಾತವಾಗಿದೆ.  ರೇವಾ ಬಸ್-ಟ್ರಾಲಿ ಟ್ರಕ್ ಡಿಕ್ಕಿಯಲ್ಲಿ ಮೃತಪಟ್ಟವರ ನಿಧನಕ್ಕೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ (Madhya Pradesh Home Minister Narottam Mishra) ಸಂತಾಪ ಸೂಚಿಸಿದ್ದಾರೆ.

 

Follow Us:
Download App:
  • android
  • ios