Asianet Suvarna News Asianet Suvarna News

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪಘಾತ ತಡೆಗೆ 500 ರೋಡ್ ಹಂಪ್ಸ್

ಹೆಚ್ಚುತ್ತಿರುವ ಅಪಘಾತ ತಡೆಗೆ ಬೆಂಗಳೂರು ಸಂಚಾರಿ ಪೊಲೀಸರು 500 ರೋಡ್ ಹಂಪ್ಸ್ ನಿರ್ಮಿಸುವ ಪ್ರಸ್ತಾವನೆಯನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ.

prevent accidents Bengaluru traffic police wrote a letter to BBMP to create road humps  gow
Author
First Published Oct 17, 2022, 4:32 PM IST

ಬೆಂಗಳೂರು (ಅ.17): ಹೆಚ್ಚುತ್ತಿರುವ ಅಪಘಾತ ತಡೆಗೆ ಬೆಂಗಳೂರು ಸಂಚಾರಿ ಪೊಲೀಸರು 500 ರೋಡ್ ಹಂಪ್ಸ್ ನಿರ್ಮಿಸುವ ಪ್ರಸ್ತಾವನೆಯನ್ನು ಬಿಬಿಎಂಪಿಗೆ ಸಲ್ಲಿಸಿದ್ದಾರೆ. ವೈಟ್‌ಫೀಲ್ಡ್, ಕೆಂಗೇರಿ, ಜಯನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಂಪ್ಸ್ ನಿರ್ಮಿಸಲು ಬೇಡಿಕೆ ಇದ್ದು, ಈ ಹಿನ್ನೆಲೆಯಲ್ಲಿ ಸಿಟಿಯ ರಸ್ತೆಗೆ ಪಾಲಿಕೆ ಹೊಸದಾಗಿ ಇನ್ನೂ 500 ಕ್ಕೂ ಅಧಿಕ ರೋಡ್ ಹಂಪ್ಸ್ ಹಾಕಲಿದೆ. ಸುಗಮ ಸಂಚಾರಕ್ಕೆ ಅನುವು ಮಾಡುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ಹೊಸ ಹಂಪ್ಸ್ ಗೆ ಪ್ರಸ್ತಾಪ ಇಟ್ಟಿದ್ದಾರೆ. ಅಪಘಾತ ಸಂಭವಿಸುವ 524 ಕಡೆ ರೋಡ್ ಹಂಪ್ ಅಳವಡಿಕೆಗೆ ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ  ಒಟ್ಟು 39 ಸಂಚಾರಿ ಪೊಲೀಸ್ ಠಾಣೆಗಳಿಂದ ಪ್ರತ್ಯೇಕವಾಗಿ ಈ ಪ್ರಸ್ತಾವನೆಗಳು ಸಲ್ಲಿಕೆಯಾಗಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಈಗಾಗಲೇ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಹದಗೆಟ್ಟ ರಸ್ತೆಗಳು, ಕಳಪೆ ಕಾಮಾಗಾರಿ, ಅಧಿಕಾರಿಗಳ ನಿರ್ಲಕ್ಷ್ಯ ಇದೆಲ್ಲವೂ ಕಾರಣ. ಇದೀಗ ಸಂಚಾರಿ ಪೊಲೀಸರು ವಾಹನ ಸವಾರರ ಸ್ಪೀಡ್ ಗೆ ಬ್ರೇಕ್ ಹಾಕಲು ರೋಡ್ ಹಂಪ್ಸ್ ನಿರ್ಮಿಸುವ ಪ್ರಸ್ತಾವನೆಯನ್ನು ಬಿಬಿಎಂಪಿ ಮುಂದಿಟ್ಟಿದ್ದಾರೆ.

ಎಲ್ಲೆಲ್ಲಿ ಹೊಸ ರೋಡ್ ಹಂಪ್ಸ್ ಇಲ್ಲಿದೆ ವಿವರ
- ವೈಟ್ ಫೀಲ್ಡ್ ಸಂಚಾರಿ ಪೊಲೀಸರು 49 ಕಡೆ ಹಂಪ್ಸ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ.
- ಜಯನಗರ - 47
- ಕೆಂಗೇರಿ - 44
- ಹುಳಿಮಾವು - 33
- ಆರ್.ಟಿ.ನಗರ - 32
-  ಬಾನಸವಾಡಿ - 21
- ಹೂಡಿ - 22
- ಮಹದೇವರ ಹಾಗೂ ಜೆಪಿನಗರ ತಲಾ - 19
- ಹಲಸೂರು ಗೇಟ್,  ಜಾಲಹಳ್ಳಿ - 17
- ರಾಜಾಜಿನಗರ - 16
- ಮಲ್ಲೇಶ್ವರ -  14
- ವಿವಿಪುರ - 12
- ದೇವನಹಳ್ಳಿ - 11
- ಯಶವಂತಪುರ - 10
- ವಾರ್ಡ್ ರಸ್ತೆಗಳಲ್ಲಿ - 9
- ಚಿಕ್ಕಪೇಟೆ - 8
-ಯಲಹಂಕ - 6
- ಹಲಸೂರು, ಮೈಕೋ ಲೇಔಟ್, ಪುಲಕೇಶಿನಗರ,  ವಿಜಯ ನಗರ ಹಾಗೂ ಎಚ್‌.ಎಸ್. ಆರ್ ಲೇಔಟ್ - 4 

 ಪಶ್ಚಿಮ ಸಂಚಾರಿ ಪೊಲೀಸರು 3 ಕಡೆ ಹಂಪ್ಸ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದಾರೆ.
- ಚಿಕ್ಕಜಾಲ, ಎಚ್‌ಎಎಲ್, ಹೆಬ್ಬಾಳೆ, ಉಪ್ಪಾರು ಪೇಟೆ ಹಾಗೂ ವಿಲ್ಸನ್ ಗಾರ್ಡನ್ ತಲಾ -  2.
- ಶಿವಾಜಿ ನಗರ, ಪೀಣ್ಯ, ಹೈಗೌಂಡ್ಸ್, ಕೆಆರ್‌ಪುರ ಹಾಗೂ ಹೂಡಿ ಪೊಲೀಸರು - 1 

ಇನ್ನು ನಗರದ ಅವೈಜ್ಞಾನಿಕ ಹಂಪ್ಸ್  ನಿಂದ ಮೂರು ವರ್ಷದಲ್ಲಿ ಅಪಘಾತಗಳ ವಿವರ!
ವರ್ಷ -   ಅಪಘಾತ ಸಂಖ್ಯೆ - ಸಾವು
• 2019 - 832- 819 
• 2020 - 656 - 632 
• 2021 - 652 - 618

Bengaluru: ಬಿಬಿಎಂಪಿಯ ಯಮಸ್ವರೂಪಿ ರಸ್ತೆ ಗುಂಡಿಗೆ ಮಹಿಳೆ ಬಲಿ!

ಅವೈಜ್ಞಾನಿಕ ರಸ್ತೆ ಹಂಪ್ ನಿರ್ಮಾಣ, ಬೆಂಗಳೂರು ವಿವಿಗೆ ಬಿಬಿಎಂಪಿ ಪತ್ರ: 
ಬೆಂಗಳೂರು ವಿಶ್ವವಿದ್ಯಾಲಯ  ಆವರಣದಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿವಿ ರಿಜಿಸ್ಟ್ರಾರ್ ಗೆ ಬಿಬಿಎಂಪಿ ಯಿಂದ ಪತ್ರ ಬರೆಯಲಾಗಿದೆ.ಅವೈಜ್ಞಾನಿಕ ರಸ್ತೆ ಉಬ್ಬುಗಳಿಂದ ರಸ್ತೆ ಅಪಘಾತ ಎಂದು ಪತ್ರ ಬರೆದ ಬಿಬಿಎಂಪಿ. ಈ ಉಬ್ಬುಗಳನ್ನು ನೀವೇ ನಿರ್ಮಾಣ ಮಾಡಿ ಅಪಘಾತಕ್ಕೆ ಕಾರಣವಾಗುತ್ತಿದ್ದೀರಿ. ರಸ್ತೆ ಹಂಪ್ ನಿರ್ಮಿಸಿದ ಕಾರಣಕ್ಕಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ಅದನ್ನು ಸರಿಪಡಿಸುವಂತೆ ಕುಲಸಚಿವರಿಗೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯಸಿಂಹ ಪತ್ರ ಬರೆದಿದ್ದಾರೆ.

ಹಂಪ್ಸ್‌ಗಳು ಮಾಯ, ಪ್ರಧಾನಿ ಮೋದಿ ಬಂದು ಹೋದ ರಸ್ತೆ ಈಗ ಆಕ್ಸಿಡೆಂಟ್‌ ಝೋನ್!

ಕಳೆದ ಅ.9ರಂದು ಬೆಂಗಳೂರು ವಿವಿ ಆವರಣದಲ್ಲಿ ನಡೆದ ಸರಣಿ ಅಪಘಾತ ಹಿನ್ನೆಲೆ ಈ ಪತ್ರ ರವಾನೆಯಾಗಿದೆ. ನಂತರ ಆವರಣದ ಹಲವು ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ರಸ್ತೆ ಹಂಪ್‌ಗಳ  ನಿರ್ಮಾಣವಾಗಿದೆ. ರಸ್ತೆ ಉಬ್ಬುಗಳು ಭಾರತೀಯ ರಸ್ತೆ ಕಾಂಗ್ರೆಸ್‌ನ ನಿಯಮದಂತೆ ನಿರ್ಮಾಣವಾಗಿಲ್ಲ. ಹೀಗಾಗಿ ಬೆಂಗಳೂರು ವಿವಿ ಆವರಣದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಈ ಕೂಡಲೇ ಅವೈಜ್ಞಾನಿಕ ರಸ್ತೆ ಹಂಪ್‌ಗಳನ್ನು ತೆರವು ಮಾಡಿ, ವೈಜ್ಞಾನಿಕವಾಗಿ ಉಬ್ಬುಗಳನ್ನು ನಿರ್ಮಿಸಬೇಕು. ಜತೆಗೆ ಬೆಂಗಳೂರು ವಿವಿ ಆವರಣದಲ್ಲಾಗುತ್ತಿರುವ ಅಪಘಾತಕ್ಕೆ ಬೆಂಗಳೂರು ವಿವಿ ಆಡಳಿತವೇ ಕಾರಣ ಹೊರತು  ಬಿಬಿಎಂಪಿ ಕಾರಣವಲ್ಲ ಎಂದು ಪತ್ರದಲ್ಲಿ ಬಿಬಿಎಂಪಿ ಉಲ್ಲೇಖಿಸಿದೆ.

Follow Us:
Download App:
  • android
  • ios