ಮಾನಸಿಕ ಅಸ್ವಸ್ಥನ ಮುಖದ ಮೇಲೆ ಮೂತ್ರ ಮಾಡಿದ ಬಿಜೆಪಿ ಕಾರ್ಯಕರ್ತ!
ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಮೂತ್ರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರದೇಶ ವಿಡಿಯೋ ಇದಾಗಿದ್ದು, ವೈರಲ್ ಆದ ಬೆನ್ನಲ್ಲಿಯೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ನವದೆಹಲಿ (ಜು.4): ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಬುಡಕಟ್ಟು ಜನಾಂಗದ ಮಾನಸಿಕ ವಿಕಲಚೇತನನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕುಬ್ರಿ ಬಜಾರ್‌ನ ಈ ವೀಡಿಯೊ 9 ದಿನಗಳ ಹಳೆಯದು ಎಂದು ಹೇಳಲಾಗಿದೆ. ಆರೋಪಿ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಆತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಹಾಗೂ ಪ್ರತಿನಿಧಿ ಎಂದು ಹೇಳಲಾಗಿದೆ. ಸಿಧಿ ಎಸ್ಪಿ ರವೀಂದ್ರ ವರ್ಮಾ ಅವರು ಟ್ವೀಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ಪರಿಶೀಲಿಸಿದ ನಂತರ, ಆರೋಪಿ ಪ್ರವೇಶ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಪ್ರತಿಕ್ರಿಯೆ ನೀಡಿದ್ದು, ತಪ್ಪು ಯಾರೇ ಮಾಡಿರಲಿ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ರೀತಿಯ ದುರ್ವತನೆ ತೋರಿದ ವ್ಯಕ್ತಿಯ ವಿರುದ್ಧ ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಕಾಯ್ದೆ) ಆತನ ಮೇಲೆ ಹಾಕಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇಡೀ ಮಧ್ಯಪ್ರದೇಶ ತಲೆತಗ್ಗಿಸಿದೆ: ಈ ವಿಡಿಯೋ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್, ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನುಷ ಕೃತ್ಯದ ವಿಡಿಯೋವನ್ನು ಗಮನಿಸಿದ್ದೇನೆ. ಬುಡಕಟ್ಟು ಯುವಕನೊಂದಿಗೆ ಇಂತಹ ಹೇಯ ಮತ್ತು ಹೀನ ಕೃತ್ಯಕ್ಕೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಆದಿವಾಸಿಗಳ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಈಗಾಗಲೇ ಮೊದಲ ಸ್ಥಾನದಲ್ಲಿದೆ. ಈ ಘಟನೆ ಇಡೀ ಮಧ್ಯಪ್ರದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕು ಎಂದು ನಾನು ಮುಖ್ಯಮಂತ್ರಿಯಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಮಧ್ಯಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ವಿಕ್ರಾಂತ್ ಭೂರಿಯಾ ಮಾತನಾಡಿದ್ದು, ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರದಲ್ಲಿ ಆದಿವಾಸಿಗಳ ಮೇಲೆ ಗರಿಷ್ಠ ದೌರ್ಜನ್ಯ ನಡೆದಿದೆ. ಬಿಜೆಪಿ ನಾಯಕರೇ ಇವುಗಳಲ್ಲಿ ಹೆಚ್ಚಾಗಿ ಭಾಗಿಯಾಗಿರುವುದು ಏಕೆ? ಈ ಕೃತ್ಯವು ಆದಿವಾಸಿಗಳ ಬಗ್ಗೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕೆ ಮಾಡಿದ್ದಾರೆ.
ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ವಿಚ್ಛೇದನ
ಇನ್ನು ಶಾಸಕ ಕೇದಾರ್‌ನಾಥ್ ಶುಕ್ಲಾ ಮಾತನಾಡಿದ್ದು, ಪ್ರವೇಶ್ ನನ್ನ ಬೆಂಬಲಿಗನೂ ಅಲ್ಲ, ಪ್ರತಿನಿಧಿಯೂ ಅಲ್ಲ. ಅದಲ್ಲದೆ, ಪಲ್ಷದ ಕಾರ್ಯಕರ್ತನೂ ಅಲ್ಲ. ಆದರೆ, ನನಗೆ ಪರ್ವೇಶ್ ಶುಕ್ಲಾ ಅವರ ಪರಿಚಯವಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಈತ ಸಿದ್ದಿಯಿಂದ 20 ಕಿ.ಮೀ ದೂರದಲ್ಲಿರುವ ಕುಬರಿ ಗ್ರಾಮದ ನಿವಾಸಿ. ಹಾಗಿದ್ದರೆ, ಪ್ರವೇಶ್ ಶುಕ್ಲಾ ನಿಮಗೆ ಹೇಗೆ ಗೊತ್ತು ಎನ್ನುವ ಪ್ರಶ್ನೆಗೆ, ನಾನು ಈ ಪ್ರದೇಶದ ಶಾಸಕನಾಗಿದ್ದೇನೆ. ಹಾಗಾಗಿ ಪ್ರವೇಶ್ ಬಗ್ಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.
34 ಜನರಿಗೆ ಒಟ್ಟು 72 ಲಕ್ಷ ಮೋಸ ಮಾಡಿದ್ದ ವ್ಯಕ್ತಿಗೆ ಕೋರ್ಟ್ ನೀಡ್ತು ಡಿಫರೆಂಟ್ ಶಿಕ್ಷೆ!