ಭೋಪಾಲ್(ಸೆ.22): ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆಯಾಗಿ ಆರು ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಮಧ್ಯಪ್ರದೇಶದಲ್ಲಿ ಸಿಮಧಿಯಾರನ್ನು ಬಿಜೆಪಿಯ ಪ್ರಮುಖ ನಾಯಕರಲ್ಲಿ ಎಣಿಸಲಾಗುತ್ತದೆ. ಆದರೀಗ ಮಧ್ಯಪ್ರದೇಶದ ರಾಯ್‌ಸೇನ್ ಜಿಲ್ಲೆಯಲ್ಲಿ ಹಾಕಲಾದ ಪೋಸ್ಟರ್‌ನಿಂದ ಜ್ಯೋತಿರಾದಿತ್ಯ ಸಿಂಧಿಯಾರ ಮಗ, ಮಹಾಆರ್ಯಮನ್‌ ಸಿಂಧಿಯಾ ಕೂಡಾ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರಾ ಎಂಬ ಚರ್ಚೆ ಹುಟ್ಟಿಕೊಂಡಿದೆ.

400 ಕೋಣೆಯ ಈ ಭವ್ಯ ಅರಮನೆಯಲ್ಲಿ 'ರಾಜ'ನಂತಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ!

ಮಹಾಆರ್ಯಮನ್ ಸಿಂಧಿಯಾ ಈ ಹಿಂದೆ ತನ್ನ ತಂದೆಯ ಚುನಾವಣಾ ಕ್ಷೇತ್ರದಲ್ಲಿ ಕಂಡು ಬಂದಿದ್ದರು. ಇಷ್ಟೇ ಅಲ್ಲದೇ ಅವರು ಗ್ವಾಲಿಯರ್‌ನಲ್ಲೂ ಕೆಲವೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಾರೆ. ಹೀಗಿದ್ದರೂ ರಾಜಕೀಯದಲ್ಲಿ ಅವರು ಸಕ್ರಿಯವಾಗಿ ಈವರೆಗೆ ತೊಡಗಿಸಿಕೊಂಡಿರಲಿಲ್ಲ. 

ಆದರೀಗ ರಾಯ್ಸೇನಾದ ಸಾಂಚೀ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವ ಮೋರ್ಚಾ ಪರವಾಗಿ ಯುವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇಲ್ಲಿ ಜ್ಯೋತಿರಾದಿತ್ಯರ ಆಪ್ತ ಪ್ರಭುರಾಮ್ ಚೌಧರಿ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಹೀಗಿರುವಾಗ ಈ ಯುವ ಸಮ್ಮೇಳನ ಆಯೋಜನೆಯನ್ನೂ ಪ್ರಭುರಾಮ್‌ಗಾಗೇ ಮಾಡಲಾಗಿತ್ತು. ನಗರಾದ್ಯಂತ ಹಾಕಲಾದ ದೊಡ್ಡ ದೊಡ್ಡ ಪೋಸ್ಟರ್‌ಗಳ ಅನ್ವಯ ಸಮ್ಮೇಳನದಲ್ಲಿ ಮಹಾಆರ್ಯನ್ ಸಿಂಧಿಯಾ ಕೂಡಾ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು..

ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?

ಮೂವರು ಯುವ ನಾಯಕರಿಗೆ ಸಿಕ್ಕಿತ್ತು ಅವಕಾಶ

ಯುವ ಸಮ್ಮೇಳನ ಸಂಬಂಧ ರಾಯ್‌ಸೇನಾದಲ್ಲಿ ಹಾಕಲಾದ ಪೋಸ್ಟರ್‌ಗಳಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಅಭಿಲಾಷ್ ಪಾಂಡೆ, ಸಿಎಂ ಯುವರಾಜ್ ಸಿಂಗ್ ಚೌಹಾಣ್ ಮಗ ಕಾರ್ತಿಕೇಯ್ ಸಿಂಗ್ ಚೌಹಾಣ್ ಹಾಗೂ ಜ್ಯೋತಿರಾದತ್ಯರ ಮಗ ಮಹಾಆರ್ಯನ್‌ ಸಿಂಧಿಯಾ ಫೋಟೋ ಇತ್ತು. ಹೀಗಿರುವಾಗ ಮಹಾಆರ್ಯನ್ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಖಚಿತ ಎನ್ನಲಾಗಿತ್ತು. ಆದರೆ ಅವರು ಮಾತ್ರ ರಾಯ್‌ಸೇನ್‌ಗೆ ತಲುಪಿರಲಿಲ್ಲ. 

ಹೊಸ ಚರ್ಚೆಗಳು

ಹೀಗಿರುವಾಗ ಜ್ಯೋತಿರಾದಿತ್ಯ ಸಿಂಧಿಯಾರ ಮಗ ರಾಜಕೀಯಕ್ಕೆ ಎಂಟ್ರಿ ನಿಡುತ್ತಾರಾ ಎಂಬ ಚರ್ಚೆ ಗ್ವಾಲಿಯರ್‌ನಲ್ಲಿ ಭಾರೀ ಸದ್ದು ಮಾಡಿದೆ. ಈವರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳದ ಮಹಾಆರ್ಯಮನ್ ಕರಲವೇ ಕೆಲವು ಬಾರಿ ತನ್ನ ತಂದೆಯೊಂದಿಗೆ ಚುನಾಣಾ ಪ್ರಚಾರದ ವೇಳೆ ಕಾಣಿಸಿಕೊಂಡಿದ್ದಾರೆ. ಇನ್ನು ಆರ್ಯಮನ್‌ಗೆ ಸಂಗೀತ ಎಂದರೂ ಬಲು ಅಚ್ಚುಮೆಚ್ಚು. ಆದರೀಗ ಉಚುನಾವಣೆ ಮೂಲಕ ಮಹಾಆರ್ಯಮನ್ ಮಧ್ಯಪ್ರದೇಶದ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆನ್ನಲಾಗಿದೆ.

ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

ಆದರೆ ಈ ಸಂಬಂಧ ಅಧಿಕೃತವಾಗಿ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ ರಾಯ್‌ಸೇನಾದಲ್ಲಿ ಹಾಕಲಾದ ಪೋಸ್ಟರ್‌ಗಳು ಚುನಾವಣಾ ಅಖಾಡದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಜ್ಯೋತಿರಾದಿತ್ಯ ಯಾವಾಗ ಕಾಂಗ್ರೆಸ್ ಬಿಡುವ ನಿರ್ಧಾರ ತೆಗೆದುಕೊಂಡಿದ್ದರೋ ಆ ವೇಳೆ ಅವರ ಮಗ ಮಹಾಆರ್ಯಮನ್ ಅವರೊಂದಿಗೆ ನಿಂತಿದ್ದರು. ಅನೇಕ ಟ್ವೀಟ್‌ಗಳನ್ನು ಮಾಡಿ ಅವರು ವಿರೋಧಿಗಳನ್ನು ಟೀಕಿಸಿದ್ದರು.

ಯಾರು ಮಹಾ ಆರ್ಯಮನ್? 

ಕಾಂಗ್ರೆಸ್‌ ತೊರೆದ ತಂದೆ ಬಗ್ಗೆ ತನಗೆ ಹೆಮ್ಮೆ ಇದೆ ಎಂದು ಮಹಾಆರ್ಯಮನ್ ಹೇಳಿದ್ದರು. 24 ವರ್ಷದ ಮಹಾಆರ್ಯಮನ್ ಸಿಂಧಿಯಾ ಗ್ವಾಲಿಯರ್ ರಾಜಮನೆತನದ ಉತ್ತರಾಧಿಕಾರಿ. ಅವರು ತನ್ನ ತಂದೆಯ ಚುನಾವಣಾ ಕ್ಷೇತ್ರದಿಂದಲೇ ರಾಜಕೀಯದ ಪಾಠ ಕಲಿಯುತ್ತಿದ್ದಾರೆ. ತನ್ನ ತಾಯಿ ಯೊಂದಿಗೆ ಅವರು ಸಾಮಾನ್ಯವಾಗಿ ಗುನಾ ಹಾಗೂ ಶಿವಪುರಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ತಂದೆಯಂತೆ ಮಹಾಆರ್ಯಮನ್ ಕೂಡಾ ದೂನ್ ಸಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇದಾದ ಬಳಿಕ ವಿದೇಶಕ್ಕೆ ತೆರಳಿದರು. ತನ್ನ ತಂದೆಯನ್ನು ಬಾಬಾ ಹಾಗೂ ತಾಯಿಯನ್ನು ಅಮ್ಮಾ ಎಂದು ಕರೆಯುತ್ತಾರೆ. ಅವರು ಅಮೆರಿಕದ ಯೆಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ.