400 ಕೋಣೆಯ ಈ ಭವ್ಯ ಅರಮನೆಯಲ್ಲಿ 'ರಾಜ'ನಂತಿದ್ದಾರೆ ಜ್ಯೋತಿರಾದಿತ್ಯ ಸಿಂಧಿಯಾ!

First Published 12, Mar 2020, 5:14 PM IST

ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ನಿವಾಸ ಅಂದರೆ ಜಯ್ ವಿಲಾಸ್ ಪ್ಯಾಲೇಸ್ ಐಷಾರಾಮಿತನಕ್ಕೆ ಬಲು ಫೇಮಸ್. ಈ ಭವ್ಯ ಅರಮನೆಯ ಚರ್ಚೆ ಎಲ್ಲೆಲ್ಲೂ ಕೇಲಿ ಬರುತ್ತದೆ. 150 ವರ್ಷ ಹಳೆಯ ಈ ಅರಮನೆಯಲ್ಲಿ ಗ್ವಾಲಿಯರ್ ಬಗೆ ಬರುವ ಪ್ರವಾಸಿಗರೂ ಭೇಟಿ ನೀಡುತ್ತಾರೆ. ಯಾಕೆಂದರೆ ಈ ಅರಮನೆಯ ಒಂದು ಭಾಗವನ್ನು ಮ್ಯೂಸಿಯಂ ಆಗಿ ಮಾರ್ಪಾಡು ಮಾಡಿದ್ದಾರೆ.

ಸದ್ಯ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ಜ್ಯೋತಿರಾದಿತ್ಯ ಸಿಂಧಿಯಾ ದೇಶದಾದ್ಯಂತ ಸೌಂಡ್ ಮಾಡುತ್ತಿದ್ದಾರೆ. ಮಧ್ಯಪ್ರದೇಶ ರಾಜಕೀಯದಲ್ಲಿ ಕೇಂದ್ರ ಬಿಂದುವಾಗಿರುವ ಸಿಂಧಿಯಾ ರಾಜೀನಾಮೆಯಿಂದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವ ಭೀತಿ ಎದುರಿಸುತ್ತಿದೆ.

ಸಿಂಧಿಯಾ ಕುಟುಂಬ ಹಲವಾರು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಜ್ಯೋತಿರಾದಿತ್ಯ ಸಿಂಧಿಯಾ ಕೇವಲ ರಾಜಮನೆತನದ ಉತ್ತರಾಧಿಕಾರಿಯಷ್ಟೇ ಅಲ್ಲದೇ, ಅದೇ ರೀತಿಯ ಐಷಾರಾಮಿ ಜೀವನವನ್ನೂ ಸಾಗಿಸುತ್ತಿದ್ದಾರೆ.

ಯಾವ ರೀತಿಯ ಮನೆಯಲ್ಲಿ ಸಿಂಧಿಯಾ ನೆಲೆಸುತ್ತಾರೋ ಅಂತಹ ಐಷಾರಾಮಿ ಹಾಗೂ ವಿಶೇಷ ಸೌಲಭ್ಯಗಳುಳ್ಳ ಮನೆಯಲ್ಲಿ ಬೇರೊಬ್ಬ ರಾಜಕಾರಣಿ ಇದ್ದಾರೆ ಎಂಬುವುದು ಅನುಮಾನ.

ಗ್ವಾಲಿಯರ್ ನಲ್ಲಿ ಸಿಂಧಿಯಾರ ಅಧಿಕೃತ ನಿವಾಸ ಜಯ್ ವಿಲಾಸ್ ಮಹಲ್ ಕಲೆ ಹಾಗೂ ನಿರ್ಮಾಣದ ನಿಟ್ಟಿನಲ್ಲಿ ಅತ್ಯಂತ ಸುಂದರವಾಗಿದೆ.

ಗ್ವಾಲಿಯರ್ ನ ಪ್ರವಾಸೀ ಸ್ಥಳಗಳನ್ನು ಹುಡುಕಾಡಿದಾಗ ಸಿಂಧಿಯಾರ ಅರಮನೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ.

400 ಕೋಣೆಗಳ ಸಿಂಧಿಯಾರ ಜಯ್ ವಿಲಾಸ್ ಪ್ಯಾಲೆಸ್ ಸುಮಾರು 150 ವರ್ಷ ಹಳೆಯದಾಗಿದೆ. ಇದರ ಪ್ರಸ್ತುತ ಬೆಲೆ ಸುಮಾರು 4 ಸಾವಿರ ಕೋಟಿ ಇದೆ.

ಈ ಅರಮನೆಯ ಒಂದು ಭಾಗದಲ್ಲಿ ಸಿಂಧಿಯಾ ರಾಜವಂಶದ ಕುರಿತು ಮಾಹಿತಿ ನೀಡುವ ಮ್ಯೂಸಿಯಂ ಕೂಡಾ ಇದೆ. ಅಲ್ಲದೇ ಇದರೊಳಗೆ ಉಷಾ ಕಿರಣ್ ಪ್ಯಾಲೇಸ್ ಹೆಸರಿನ ಪಂಚತಾರಾ ಹೋಟೆಲ್ ಕೂಡಾ ಇದೆ.

ಇಷ್ಟೇ ಅಲ್ಲದೇ ಈ ಅರಮನೆಯಲ್ಲಿ ಮಾಧವರಾವ್ ಸಿಂಧಿಯಾ ಕುರಿತು ಮಾಹಿತಿ ನೀಡುವ ಬಹುದೊಡ್ಡ ಕೋಣೆ ಇದೆ.

ಈ ಅರಮನೆಯನ್ನು ಮರಾಠಾ ನಾಯಕ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾರ ಪೂರ್ವಜರಾದ ಮಹಾರಾಜಾ ಜಯ್ ಜೀ ರಾವ್ ಸಿಂಧಿಯಾ ಸುಮಾರು 150ವರ್ಷದ ಹಿಂದೆ ನಿರ್ಮಿಸಿದ್ದರು.

ಈ ಅರಮನೆಯ ವಿನ್ಯಾಸ ಬ್ರಿಟಿಷ್ ಆರ್ಕಿಟೆಕ್ಟ್ ಸರ್ ಮೈಕಲ್ ಫಿಲೋಸ್ ಮಾಡಿದ್ದು, ಅಂದು ಇದನ್ನು ನಿರ್ಮಿಸಲು ಸುಮಾರು 1 ಕೋಟಿ ರೂ. ಮೊತ್ತ ತಗುಲಿತ್ತು.

loader