ಅನಂತಪುರ(ಅ.20): 16 ವರ್ಷದ ಬಾಲಕಿಯೊಬ್ಬಳು ಒಂದು ದಿನದ ಮಟ್ಟಿಗೆ ಆಂಧ್ರಪ್ರದೇಶದ ಅನಂತಪುರದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ.

ಹೌದು 16 ವರ್ಷದ ಎಂ. ಶ್ರಾವಣಿ ಎಂಬಾಕೆಯೇ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಯುಆಗಿ ಅಕ್ಟೋಬರ್ 11 ರಂದು ಕಾರ್ಯ ನಿರ್ವಹಿಸಿದ್ದಾರೆ. ಶ್ರಾವಣಿಯ ತಂದೆ ಓರ್ವ ರೈತನಾಗಿದ್ದು, ತಾಯಿ ಕೂಲಿ ಮಾಡಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಮಾಹಿತಿ ಬಹಿರಂಗಪಡಿಸಿದ್ದು, ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಯ ಮುಖ್ಯಸ್ಥೆಯಾಗಿ ಒಂದು ದಿನ ಕಾರ್ಯ ನಿರ್ವಹಿಸುವ ಅವಕಾಶವನ್ನು ಈ ಬಾಲಕಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಒಂದು ದಿನದ ಜಿಲ್ಲಾಧಿಕಾರಿಯಾದ ಶ್ರಾವಣಿ ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ ಸಂತ್ರಸ್ತ ಬಾಲಕಿಯೊಬ್ಬಳಿಗೆ SC/ST  ದೌರ್ಜನ್ಯ ಕಾಯ್ದೆಯಡಿ 25 ಸಾವಿರ ರೂ. ಮಂಜೂರುಗೊಳಿಸಿದ್ದು. ಅಲ್ಲದೇ ಮಹಿಳಾ ಅಧಿಕಾರಿಗಳು ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಅಧಿಕಾರಿಗಳ ಕರೆಗಳನ್ನು ಸ್ವೀಕರಿಸುವುದರಿಂದ ವಿನಾಯಿತಿ ನೀಡುವ ಆದೇಶಕ್ಕೂ ಶ್ರಾವಣಿ ಸಹಿ ಹಾಕಿದ್ದಾರೆ. ಇದಾದ ಬಳಿಕ ನಗರ ಪ್ರದಕ್ಷಿಣೆಗೆ ಹೊರಟ ಡಿಸಿ ಶ್ರಾವಣಿ ನೀರು ನಿಂತು ಹದಗೆಟ್ಟಿದ್ದ ರಸ್ತೆಗಳನ್ನು ಕೂಡಲೇ ಸರಿ ಮಾಡುವಂತೆ ಆದೇಶಿಸಿದ್ದಾರೆ. 

ಜಿಲ್ಲಾಧಿಕಾರಿ ಗಂಧಮ್ ಚಂದ್ರುಡು ಅವರ ಅತ್ಯಂತ ಹಿಂದುಳಿದ ಹೆಣ್ಣು ಮಕ್ಕಳನ್ನು ಉತ್ತೇಜಿಸುವ ಶಿಕ್ಷಣ ಹಾಗೂ ವೃತ್ತಿ ಜೀವನದಲ್ಲಿ ಆತ್ಮವಿಶ್ವಾದ ಗಳಿಸುವ ಭಾಗವಾಗಿ ಹೆಣ್ಣು ಮಗುವೇ ನಮ್ಮ ಭವಿಷ್ಯ ಎಂಬ ಕಲ್ಪನೆಯಡಿ ಶ್ರಾವಣಿ ಒಂದು ದಿನದ ಜಿಲ್ಲಾಧಿಕಾರಿಯಾಗುವ ಅವಕಾಶ ಪಡೆದಿದ್ದರು ಎಂಬಬುವುದು ಉಲ್ಲೇಖನೀಯ.,