Asianet Suvarna News Asianet Suvarna News

ಲುಧಿಯಾನ ವಿಷಾನಿಲ ಸೋರಿಕೆಯಿಂದ ಅನಾಥವಾದ 8 ತಿಂಗಳ ಮಗುವಿನಿಂದ ಪೋಷಕರ ಅಂತ್ಯಸಂಸ್ಕಾರ!

ಲುಧಿಯಾನದಲ್ಲಿ ಇತ್ತೀಚೆಗೆ ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಮೃತರಲ್ಲಿ ಪೋಷಕರು ಮೃತಪಟ್ಟು 8 ತಿಂಗಳ ಮಗು ಅನಾಥವಾದ ಕರಳು ಹಿಂಡುವ ಘಟನೆ ನಡೆದಿದೆ. 8 ತಿಂಗಳ ಮಗುವಿನಿಂದ ಪೋಷಕರ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ.

Ludhiana gas leak tragedy 8 month old baby perform last rite of his parents who died in incident ckm
Author
First Published May 3, 2023, 4:28 PM IST

ಲುಧಿಯಾನ(ಮೇ.03): ಲುಧಿಯಾನದಲ್ಲಿ ಸಂಭವಿಸಿದ ಭೀಕರ ವಿಷಾನಿಲ ಸೋರಿಕೆ ಘಟನೆಯ ಒಂದೊಂದೆ ಮನಕಲುಕವ ಘಟನೆಗಳು ಹೊರಬರುತ್ತಿದೆ. ಈ ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಗಿಯಾಸಪುರ ಏರಿಯಾದ 35 ವರ್ಷದ ಸೌರವ್ ಗೋಯಲ್ ಹಾಗೂ ಪತ್ನಿ 31 ವರ್ಷದ ಪ್ರೀತಿ ಮೃತಪಟ್ಟಿದ್ದಾರೆ. ಇನ್ನು ಸೌರವ್ ಗೋಯಲ್ ತಾಯಿ ಕಮಲೇಶ್ ಗೋಯಲ್ ಕೂಡ ಮೃತಪಟ್ಟಿದ್ದಾರೆ. ಇದರಿಂದ ಇವರ 8 ತಿಂಗಳ ಮಗು ಅನಾಥವಾಗಿದೆ. ನಿನ್ನೆ ಮೂವರ ಅಂತ್ಯಸಂಸ್ಕಾರ ನಡೆಸಲಾಗಿದೆ. 8 ತಿಂಗಳ ಮಗುವಿನ ಕೈಯಿಂದ ಪೋಷಕರ ಅಂತ್ಯಸಂಸ್ಕಾರ ನಡೆಸಲಿದೆ. ಈ ಕರಳು ಹಿಂಡುವ ಘಟನೆ ನೋಡಿ ಕುಟುಂಬಸ್ಥರು, ಆಪ್ತರ ಆಕ್ರಂದನ ಮುಗಿಲು ಮುಟ್ಟಿದೆ.

ಪೋಷಕರ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು 8 ತಿಂಗಳ ಮಗುವನ್ನು ಕರೆತಂದಿದ್ದಾರೆ. ಬಳಿಕ ಮಗುವಿನಿಂದ ಕರ್ಮಗಳನ್ನು ಮಾಡಿಸಿದ್ದಾರೆ. ಈ ದೃಶ್ಯ ನೋಡಿದ ಜನ ಕಣ್ಣೀರಿಟ್ಟಿದ್ದಾರೆ. ಏನೂ ಅರಿಯದ ಮುಗ್ದ ಮಗು ಅನಾಥವಾಗಿದೆ. ಗೋಯಲ್ ಕುಟುಂಬಸ್ಥರು ಮಗುವಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

Gas leak in Ludhiana: 9 ಜನರ ಸಾವು, 11 ಮಂದಿ ಗಂಭೀರ, 1 ಕಿಲೋಮೀಟರ್‌ ವ್ಯಾಪ್ತಿ ಸೀಲ್‌ಡೌನ್‌!

ಸೌರವ್ ಗೋಯಲ್ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ವಿಷಾನಿಲ ಸೋರಿಕೆಯಿಂದ ಸೌರವ್ ಗೋಯಲ್ ಅಂಗಡಿಯಲ್ಲಿ ಅಸ್ವಸ್ಥರರಾಗಿ ಪ್ರಾಣಬಿಟ್ಟಿದ್ದಾರೆ. ಇತ್ತ ಪತ್ನಿ ಕೂಡ ವಿಷಾನಿಲ ಸೋರಿಕೆಯಿಂದ ಪ್ರಾಣಬಿಟ್ಟಿದ್ದಾರೆ. ವಿಷಾನಿಲ ಸೋರಿಕೆ ವಲಯದಿಂದ ಕೊಂಚ ದೂರದಲ್ಲಿದ್ದ ಗೋಯಲ್ ಮನೆಯಲ್ಲಿ 8 ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಗೋಯಲ್ ತಾಯಿ ಮೃತಪಟ್ಟಿದ್ದಾರೆ. ಹೀಗಾಗಿ 8 ತಿಂಗಳ ಮಗು ಅನಾಥವಾಗಿದೆ. ಇನ್ನು ಸೌರವ್ ಗೋಯಲ್ ಸಹೋದರ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಗಿಯಾಸ್‌ಪುರ ಜನದಟ್ಟಣೆಯ ಪ್ರದೇಶದಲ್ಲಿ ಅನಿಲ ಸೋರಿಕೆಯಿಂದ ಜನರು ಸಾವಿಗೀಡಾಗುತ್ತಿದ್ದಂತೆ ಆ ಬಡಾವಣೆಯಲ್ಲಿನ ಎಲ್ಲ ಜನರನ್ನೂ ಸ್ಥಳಾಂತರಿಸಲಾಗಿತ್ತು. ಮ್ಯಾನ್‌ಹೋಲ್‌ನಿಂದ ಮಾದರಿ ಸಂಗ್ರಹಿಸಲಾಗುತ್ತಿದೆ. ಮೃತಪಟ್ಟ11 ಮಂದಿಯಲ್ಲಿ ಐವರು ಮಹಿಳೆಯರು ಹಾಗೂ 6 ಮಂದಿ ಪುರುಷರು ಇದ್ದಾರೆ. ಅದರಲ್ಲಿ 10 ಮತ್ತು 13 ವರ್ಷದ ಇಬ್ಬರು ಬಾಲಕರೂ ಇದ್ದಾರೆ. ಗಮನಾರ್ಹ ಎಂದರೆ, ವಿಷಾನಿಲ ಸೋರಿಕೆ ಬಳಿಕ ಮೃತರಲ್ಲಿ ಯಾರಲ್ಲೂ ಉಸಿರಾಟದ ಸಮಸ್ಯೆ ಕಂಡುಬಂದಿಲ್ಲ. ನರಮಂಡಲಕ್ಕೇ ಘಾಸಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೋವಿಡ್‌ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ 5 ಲಕ್ಷ ರೂ ವಿಮೆ; ಮೋದಿ ಯೋಜನೆ ಜಾರಿ!

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಗಳು ಸ್ಥಳದಲ್ಲೇ ಬೀಡುಬಿಟ್ಟಿವೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಇಡೀ ಬಡಾವಣೆಯನ್ನು ಬಂದ್‌ ಮಾಡಿದ್ದಾರೆ. ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸೋರಿಕೆಯಾದ ವಿಷಾನಿಲದ ತೀವ್ರತೆ ಈಗ ತಗ್ಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಘಟನೆ ಕುರಿತು ಟ್ವೀಟ್‌ ಮಾಡಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌, ಈ ದುರಂತ ಅತ್ಯಂತ ನೋವಿನದ್ದಾಗಿದೆ. ಪೊಲೀಸರು, ಜಿಲ್ಲಾಡಳಿತ ಹಾಗೂ ಎನ್‌ಡಿಆರ್‌ಎಫ್‌ ತಂಡಗಳು ಸ್ಥಳದಲ್ಲೇ ಇವೆ. ಸಾಧ್ಯವಿರುವ ಎಲ್ಲ ನೆರವನ್ನೂ ನೀಡಲಾಗುತ್ತದೆ ಎಂದಿದ್ದಾರೆ.
 

Latest Videos
Follow Us:
Download App:
  • android
  • ios