ಮೊದಲ ರಾತ್ರಿಯೇ ಬೀರ್‌ ಮಟನ್‌ ಜೊತೆಗೆ ಗಾಂಜಾಗೆ ಬೇಡಿಕೆ ಇಟ್ಟ ವಧು

ಮದುವೆಯ ಮೊದಲ ರಾತ್ರಿಯೇ ವಧುವೊಬ್ಬಳು ಗಾಂಜಾ, ಬಿಯರ್ ಮತ್ತು ಮಾಂಸಕ್ಕೆ ಬೇಡಿಕೆ ಇಟ್ಟ ಘಟನೆ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ವರನ ಕುಟುಂಬ ಗಾಬರಿಗೊಂಡು ಪೊಲೀಸರ ಮೊರೆ ಹೋಗಿದ್ದು, ವಧುವಿನ ಈ ವರ್ತನೆಯಿಂದ ಮದುವೆ ಮುರಿದು ಬಿದ್ದಿದೆ.

Ludhiana Bride demanded ganja along with beer and mutton on the first night

ಸಹ್ರಾನ್‌ಪುರ: ಮದುವೆಯ ಮೊದಲ ರಾತ್ರಿಯೇ ವಧುವೊಬ್ಬಳು, ಒಂದು ಬಾಟಲ್ ಬೀರು, ಮಟನ್ ಹಾಗೂ ಗಾಂಜಾದ ವ್ಯವಸ್ಥೆ ಮಾಡುವಂತೆ ವರನಿಗೆ ಬೇಡಿಕೆ ಇಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಇದರಿಂದ ಗಾಬರಿಯಾದ ವರ ಹಾಗೂ ವರನ ಮನೆಯವರು ಪೊಲೀಸರನ್ನು ಭೇಟಿಯಾಗಿದ್ದಾರೆ. ಮೊದಲಿಗೆ ವಧು ವರನ ಬಳಿ ತಮ್ಮ ಮೊದಲ ರಾತ್ರಿಯ ದಿನ ಬೀರು ಹಾಗೂ ಮಟನ್‌ಗೆ ವ್ಯವಸ್ಥೆ ಮಾಡುವಂತೆ ಹೇಳಿದ್ದಾಳೆ. ಇದಕ್ಕೆ ವರ ಒಪ್ಪಿಕೊಂಡಿದ್ದಾನೆ. ಆದರೆ ಮತ್ತೆ ಸ್ವಲ್ಪ ಹೊತ್ತಿನಲ್ಲೇ ವಧು ಗಾಂಜಾಕ್ಕೂ ವ್ಯವಸ್ಥೆ ಮಾಡುವಂತೆ ಯಾವುದೇ ಹಿಂಜರಿಕೆ ಇಲ್ಲದೇ ಹೇಳಿದಾಗ ವರ ಗಾಬರಿಯಾಗಿದ್ದಲ್ಲದೇ ವಧುವಿನ ಈ ಬೇಡಿಕೆಯನ್ನು ನಿರಾಕರಿಸಿದ್ದಾನೆ. 

ಮದುವೆ ದಿನ ರಾತ್ರಿ ನಡೆಯುವ ಸಂಪ್ರದಾಯವಾದ 'ದಿಖಾಯಿ' ಶಾಸ್ತ್ರದ ವೇಳೆ  ವಧು ಈ ವಿಚಿತ್ರ ಬೇಡಿಕೆಯನ್ನು ಇರಿಸಿದ್ದು, ಇದರಿಂದ ವರ ಹಾಗೂ ಆತನ ಮನೆಯವರು ಗಾಬರಿಯಾಗಿದ್ದಾರೆ. ಸಹರಾನ್‌ಪುರದಲ್ಲಿ ದಿಖಾಯಿ ಶಾಸ್ತ್ರದ ವೇಳೆ ಘಟನೆ ನಡೆದಿದೆ. ವರದಿಗಳ ಪ್ರಕಾರ, ವಧು ಪಂಜಾಬ್‌ನ ಲೂಧಿಯಾನ ಮೂಲದವಳಾಗಿದ್ದು, ಮೊದಲ ರಾತ್ರಿ ದಿನ ಪತಿಯ ಬಳಿ ತನಗೆ ಒಂದು ಬಟಲ್ ಬೀರ್ ಹಾಗೂ ಮಟನ್ ಬೇಕು ಎಂದು ಹೇಳಿದ್ದಾಳೆ ಇದಕ್ಕೆ ಒಪ್ಪಿದ ವರ ಅದನ್ನು ತರಲು ಮನೆಯಿಂದ ಹೊರಡುತ್ತಿದ್ದಂತೆ 'ಗಾಂಜಾ ಔರ್ ಮಟನ್ ಬೀ ಲೇತೆ ಆನಾ' ಎಂದು ಹೇಳಿದ್ದಾಳೆ. ಇದರಿಂದ ವರ ಗಾಬರಿಯಾಗಿದ್ದು, ಆಕೆಯ ಮನವಿಯನ್ನು ತಿರಸ್ಕರಿಸಿದ್ದಾಲೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. 

ಅಲ್ಲದೇ ವಧುವಿನ ಈ ಮಾತಿನಿಂದ ವರ ಹಾಗೂ ವಧು ಎರಡು ಕುಟುಂಬಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ ಎರಡು ಕುಟುಂಬದವರು ಕುಳಿತು ಮಾತುಕತೆ ನಡೆಸಿ ಇದಕ್ಕೊಂದು ಸುಖಾಂತ್ಯ ಹಾಡಲು ಮುಂದಾಗಿದ್ದಾರೆ. ಆದರೆ ವರ ಈ ಸಂಬಂಧವನ್ನು ತೊರೆದು ಬಿಡುವ ನಿರ್ಧಾರಕ್ಕೆ ಕಟಿಬದ್ಧನಾಗಿದ್ದ ಕಾರಣ ವಧುವನ್ನು ಮತ್ತೆ ಆಕೆಯ ಪೋಷಕರ ಮನೆಗೆ ಕಳುಹಿಸಲಾಗಿದೆ.  ವಧುವಿನ ಕುಟುಂಬದವರು ಆಕೆ ತಮಾಷೆಗಾಗಿ ಈ ಮಾತು ಹೇಳಿದ್ದಾಳೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದು ವರನ ಬಳಿ ಮನವಿ ಮಾಡಿದರೂ ವರ ಮಾತ್ರ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದಾನೆ. ಹೀಗಾಗಿ ಮದ್ವೆ ಮೊದಲ ರಾತ್ರಿ ದಿನವೇ ಮುರಿದು ಬಿದ್ದಿದ್ದು, ವಧುವನ್ನು ಪೋಷಕರ ಜೊತೆಗೆ ಆಕೆಯ ಊರಾದ ಲೂಧಿಯಾನಕ್ಕೆ ಕಳುಹಿಸಿಕೊಡಲಾಗಿದೆ.  ಅಲ್ಲದೇ ಆಕೆಯ ಕೆಲ ವರ್ತನೆಗಳು ತೃತೀಯ ಲಿಂಗಿಯಂತೆ ಇದ್ದವೂ ಎಂದು ವರನ ಕಡೆಯವರು ಆರೋಪ ಮಾಡಿದ್ದಾರೆ. ಹೀಗಾಗಿ ಕೊನೆಗೆ ವರ ಹಾಗೂ ಆತನ ಮನೆಯವರು ಮದ್ವೆ ಮುರಿದುಕೊಂಡು ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. 

Latest Videos
Follow Us:
Download App:
  • android
  • ios