ಲಕ್ನೋ ವಿಶ್ವವಿದ್ಯಾನಿಲಯದ ಅತ್ಯುತ್ತಮ ವಿದ್ಯಾರ್ಥಿನಿ ಗಜಾಲಾ ಸಂಸ್ಕೃತದಲ್ಲಿ ಐದು ಚಿನ್ನದ ಪದಕ ಗಳಿಸಿದ ಮುಸ್ಲಿಂ ವಿದ್ಯಾರ್ಥಿನಿ ಮುಂದೆ ವೈದಿಕ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡುವ ಆಸೆ
ಲಕ್ನೋ(ಫೆ.11): ಉತ್ತರಪ್ರದೇಶದ ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ಅತ್ಯುತ್ತಮ ಸಂಸ್ಕೃತ ವಿದ್ಯಾರ್ಥಿಯಾಗಿ ಮುಸ್ಲಿಂ ಹುಡುಗಿ 5 ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಗಜಾಲಾ ಹೆಸರಿನ ಈ ವಿದ್ಯಾರ್ಥಿನಿ ಕ್ಯಾಂಪಸ್‌ನಲ್ಲಿ ಜನಪ್ರಿಯವಾಗಿದ್ದು, ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಶ್ಲೋಕಗಳು, ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನಾವನ್ನು ಪಠಿಸುತ್ತಾಳೆ. ಗಜಾಲಾ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದು,ಐದು ಪದಕಗಳನ್ನು ಗೆದ್ದಿದ್ದಾಳೆ. ನವೆಂಬರ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಗಜಾಲಾ ಅವರ ಹೆಸರನ್ನು ಅತ್ಯುತ್ತಮ ವಿದ್ಯಾರ್ಥಿನಿ ಎಂದು ಘೋಷಿಸಲಾಯಿತು, ಆದರೆ ಕೋವಿಡ್ -19 ಕಾರಣದಿಂದ ಸಮಾರಂಭದಲ್ಲಿ ಕೆಲವೇ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಗಿತ್ತು.
ಗುರುವಾರ, ಅಧ್ಯಾಪಕರ ಮಟ್ಟದ ಪದಕ ವಿತರಣಾ ಸಮಾರಂಭದಲ್ಲಿ ಕಲಾ ವಿಭಾಗದ ಡೀನ್ ಪ್ರೊ.ಶಶಿ ಶುಕ್ಲಾ ಅವರು ಗಜಾಲಾ ಅವರಿಗೆ ಪದಕಗಳನ್ನು ಪ್ರದಾನ ಮಾಡಿದರು. ಗಜಾಲಾ ದಿನಗೂಲಿ ಮಾಡುವವರ ಪುತ್ರಿಯಾಗಿದ್ದು, ಇಂಗ್ಲಿಷ್, ಹಿಂದಿ, ಉರ್ದು, ಅರೇಬಿಕ್ ಮತ್ತು ಸಂಸ್ಕೃತ ಸೇರಿ ಐದು ಭಾಷೆಗಳಲ್ಲಿ ಪ್ರವೀಣಳಾಗಿದ್ದಾಳೆ. ಗಜಾಲಾ 10 ನೇ ತರಗತಿಯಲ್ಲಿದ್ದಾಗ ಆಕೆಯ ತಂದೆ ನಿಧನರಾಗಿದ್ದರು ಹೀಗಾಗಿ ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ಹೆಣಗಾಡಿದ್ದಳು.
ಸಂಸ್ಕೃತ ಮಾತ್ರ ದೇವಭಾಷೆಯಲ್ಲ, ತಮಿಳು ಮಂತ್ರವೂ ಪಠಣವಾಗಬೇಕು: ಮದ್ರಾಸ್ ಹೈಕೋರ್ಟ್!
ಈ ಪದಕಗಳನ್ನು ನಾನು ಗೆದ್ದಿಲ್ಲ ನನ್ನ ಸಹೋದರರಾದ ಶಾದಾಬ್(Shadab) ಮತ್ತು ನಯಾಬ್(Nayab)ಗೆದ್ದಿದ್ದು, ಅವರು ಶಾಲೆಯನ್ನು ತೊರೆದು ಕ್ರಮವಾಗಿ 13 ಮತ್ತು 10 ನೇ ವಯಸ್ಸಿನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಇದರಿಂದ ನಾನು ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಯಿತು ಎಂದು ಗಜಾಲಾ ಹೇಳಿದರು.
ಆಕೆಯ ಅಕ್ಕ ಯಾಸ್ಮೀನ್ (Yasmeen) ಕೂಡ ಪಾತ್ರೆಗಳ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು, ಆಕೆಯ ತಾಯಿ ನಸ್ರೀನ್ ಬಾನು (Nasreen Banu) ಅವರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ತನ್ನ ಕುಟುಂಬದೊಂದಿಗೆ ಒಂದು ಕೋಣೆಯ ಮನೆಯಲ್ಲಿ ವಾಸಿಸುವ ಗಜಾಲಾ , ನಮಾಜ್ ಮಾಡಲು ಬೆಳಗ್ಗೆ 5 ಗಂಟೆಗೆ ಏಳುತ್ತಾಳೆ, ಎಲ್ಲಾ ಮನೆಕೆಲಸಗಳನ್ನು ಮಾಡುತ್ತಾಳೆ ಮತ್ತು ದಿನಕ್ಕೆ ಸುಮಾರು ಏಳು ಗಂಟೆಗಳ ಕಾಲ ಸಂಸ್ಕೃತವನ್ನು ಅಧ್ಯಯನ ಮಾಡುತ್ತಾಳೆ. ಆಕೆಗೆ ಸಂಸ್ಕೃತ ಪ್ರಾಧ್ಯಾಪಕಿಯಾಗುವ ಹಂಬಲವಿದೆ.
Magadi Karnataka Sanskrit University: ಮಾಗಡಿಯಲ್ಲಿ ಸಂಸ್ಕೃತ ವಿವಿ, 320 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್
ಗಜಾಲಾ ಕ್ಯಾಂಪಸ್‌ನಲ್ಲಿ ಜನಪ್ರಿಯಳಾಗಿದ್ದುವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಸ್ಕೃತ ಶ್ಲೋಕಗಳು, ಗಾಯತ್ರಿ ಮಂತ್ರ ಮತ್ತು ಸರಸ್ವತಿ ವಂದನಾವನ್ನು ಪಠಿಸುತ್ತಾಳೆ. ನೀವು ಸಂಸ್ಕೃತವನ್ನು ಏಕೆ ಆರಿಸಿದ್ದೀರಿ ಎಂದು ಆಕೆಯನ್ನು ಕೇಳಿದಾಗ ಎಲ್ಲಾ ಭಾಷೆಗಳಲ್ಲಿ, ದೇವರ ಸ್ವಂತ ಭಾಷೆ ಸಂಸ್ಕೃತವು ತಾಯಿಯಾಗಿದೆ. ಇದು ದೈವಿಕ, ಮತ್ತು ಅತ್ಯಂತ ಭಾವಗೀತಾತ್ಮಕವಾಗಿದೆ. ಸಂಸ್ಕೃತದಲ್ಲಿ ಕಾವ್ಯವು ಹೆಚ್ಚು ಮಧುರವಾಗಿದೆ ಎಂದು ಗಜಾಲಾ ಹೇಳುತ್ತಾಳೆ.
ಅವರ ಪ್ರಕಾರ, ಸಂಸ್ಕೃತದ ಮೇಲೆ ಅವಳ ಆಸಕ್ತಿಯು ನಿಶಾತ್‌ಗಂಜ್‌ನ ( Nishatganj) ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಪ್ರಾರಂಭವಾಯಿತು, ಅಲ್ಲಿಆಕೆಯ ಶಿಕ್ಷಕರು 5 ನೇ ತರಗತಿಯಲ್ಲಿ ಸಂಸ್ಕೃತವನ್ನು ಕಲಿಸಿದರು. ಮುಸ್ಲಿಂ ಆಗಿ ನನ್ನ ಸಂಸ್ಕೃತ ಜ್ಞಾನ ಮತ್ತು ಆಸಕ್ತಿಯನ್ನು ನೋಡಿ ಕೆಲವರು ಅಚ್ಚರಿಗೊಳ್ಳುತ್ತಾರೆ. ಇದನ್ನಿಟ್ಟುಕೊಂಡು ನಿನೇನು ಮಾಡುತ್ತೀಯಾ ಎಂದು ಕೇಳುತ್ತಾರೆ. ಆದರೆ ನನ್ನ ಕುಟುಂಬ ಯಾವಾಗಲೂ ನನ್ನನ್ನು ಬೆಂಬಲಿಸುತ್ತ ಬಂದಿದೆ ಎಂದು ಗಜಾಲಾ ಹೇಳಿದರು. ಮುಂದೆ ಗಜಾಲಾ ವೈದಿಕ ಸಾಹಿತ್ಯದಲ್ಲಿ ಪಿಎಚ್‌ಡಿ ಮಾಡಲು ಬಯಸಿದ್ದಾರೆ.