Asianet Suvarna News Asianet Suvarna News

ಪನ್ನಾದಲ್ಲಿ ಮಹಿಳೆಗೆ ಸಿಕ್ತು ರತ್ನ: ಗಣಿಯಲ್ಲಿ ಹೊಳೆದ 2.08 ಕ್ಯಾರೆಟ್ ವಜ್ರ

  • ಮಹಿಳೆಗೆ ಖುಲಾಯಿಸಿದ ಅದೃಷ್ಟ
  • ಪನ್ನಾದಲ್ಲಿ ಸಿಕ್ತು 2.08 ಕ್ಯಾರೆಟ್ ವಜ್ರ
  • ಹರಾಜಿನಲ್ಲಿ ಸಿಕ್ಕ ಹಣದಿಂದ ಮನೆ ಖರೀದಿಸುವ ಆಶಯ
Luck Shines on MP Woman As She Finds 2.08 carat Diamond Worth Rs 10 Lakh in Panna Mine akb
Author
Panna, First Published May 25, 2022, 4:16 PM IST

ಪನ್ನಾ: ಒಬ್ಬರ ಜೀವನ ರಾತ್ರೋರಾತ್ರಿ ಹೇಗೆ ಬದಲಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ. ಹಲವರ ಜೀವನ ರಾತ್ರೋರಾತ್ರಿ ಬದಲಾದ ಹಲವು ಉದಾಹರಣೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ  ಮಧ್ಯಪ್ರದೇಶದ (Madhya Pradesh) ಹಳ್ಳಿಯ ಮಹಿಳೆಯೊಬ್ಬರಿಗೆ ಪನ್ನಾ ಜಿಲ್ಲೆಯ (Panna district) ಆಳವಿಲ್ಲದ ಗಣಿಯಲ್ಲಿ 2.08 ಕ್ಯಾರೆಟ್ ವಜ್ರ ಸಿಕ್ಕಿದ್ದು, ಅದೃಷ್ಟ ಖುಲಾಯಿಸಿದಂತಾಗಿದೆ. ಚಮೇಲಿ ಬಾಯಿ (Chameli Bai) ಎಂಬವರೇ ಈ ಅದೃಷ್ಟವಂತ ಮಹಿಳೆಯಾಗಿದ್ದಾರೆ. 

ಪಿಟಿಐ ವರದಿ ಪ್ರಕಾರ, ಈ ವಜ್ರದ ಕಲ್ಲು ಉತ್ತಮ ಗುಣಮಟ್ಟದ್ದಾಗಿದ್ದು, ಹರಾಜು ಹಾಕಿದ್ದಲ್ಲಿ 10 ಲಕ್ಷ ರೂ. ಸಿಗುವ ಸಾಧ್ಯತೆ ಇದೆ. ಇದರಿಂದ ಮಹಿಳೆ ಖುಷಿಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಾಮಾನ್ಯ ರೈತನಾಗಿರುವ(farmer) ಮಹಿಳೆಯ ಪತಿ ವಜ್ರಕ್ಕೆ ಹರಾಜಿನ ವೇಳೆ ಉತ್ತಮ ಬೆಲೆ ಸಿಕ್ಕರೆ ಪನ್ನಾ ನಗರದಲ್ಲಿ ಮನೆ ಖರೀದಿಸಲು ಬಯಸುತ್ತೇವೆ ಎಂದು ಹೇಳಿದ್ದಾರೆ. 

ಇಟ್ಟಿಗೆ ಗೂಡು ನಿರ್ವಾಹಕನಿಗೆ ಖುಲಾಯಿಸಿದ ಅದೃಷ್ಟ... ಸಿಕ್ತು ಒಂದು ಕೋಟಿಗೂ ಅಧಿಕ ಮೌಲ್ಯದ ವಜ್ರ
 

ಇಟ್ವಾಕಲಾ (Itwakala) ಗ್ರಾಮದಲ್ಲಿ ವಾಸಿಸುತ್ತಿರುವ ಗೃಹಿಣಿ ಚಮೇಲಿ ಬಾಯಿ ಅವರು ಇತ್ತೀಚೆಗೆ ಜಿಲ್ಲೆಯ ಕೃಷ್ಣ ಕಲ್ಯಾಣಪುರ ಪತಿ (Krishna Kalyanpur Pati) ಪ್ರದೇಶದಲ್ಲಿ ಗುತ್ತಿಗೆ ಪಡೆದಿದ್ದ ಗಣಿಯಲ್ಲಿ 2.08 ಕ್ಯಾರೆಟ್ ವಜ್ರವನ್ನು ಕಂಡುಕೊಂಡಿದ್ದಾರೆ ಎಂದು ಪನ್ನಾ ಜಿಲ್ಲೆಯ ವಜ್ರದ ಕಚೇರಿಯ ಅಧಿಕಾರಿ ಅನುಪಮ್ ಸಿಂಗ್ (Anupam Singh) ತಿಳಿಸಿದ್ದಾರೆ. ಮಂಗಳವಾರ ವಜ್ರದ ಕಚೇರಿಯಲ್ಲಿ ಚಮೇಲಿ ಬಾಯಿ ಅವರು ಅಮೂಲ್ಯವಾದ ಈ ಕಲ್ಲನ್ನು ಠೇವಣಿ ಮಾಡಿದರು.ಮುಂಬರುವ ಹರಾಜಿನಲ್ಲಿ ವಜ್ರವನ್ನು ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಸರ್ಕಾರದ ರಾಯಧನ ಮತ್ತು ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಆದಾಯವನ್ನು ಮಹಿಳೆಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಪ್ರದೇಶದ ರೈತನಿಗೆ ಒಲಿದ ಅದೃಷ್ಟ, ಗುತ್ತಿಗೆ ಗಣಿಯಲ್ಲಿ ಸಿಕ್ತು 12 ಕ್ಯಾರಟ್ ವಜ್ರ!
 

ಮಹಿಳೆಯ ಪತಿ ಅರವಿಂದ್ ಸಿಂಗ್ (Arvind Singh), ಮಾತನಾಡಿ ತಾವು ವಜ್ರ ಗಣಿಗಾರಿಕೆಯಲ್ಲಿ ತಮ್ಮ ಅದೃಷ್ಟವನ್ನು ನೋಡಲು ನಿರ್ಧರಿಸಿದ್ದೆವು. ಹೀಗಾಗಿ ಈ ವರ್ಷದ ಮಾರ್ಚ್‌ನಲ್ಲಿ ಕೃಷ್ಣ ಕಲ್ಯಾಣಪುರ ಪಾಟಿ ಪ್ರದೇಶದಲ್ಲಿ ಸಣ್ಣ ಗಣಿಯೊಂದನ್ನು ಗುತ್ತಿಗೆ ಪಡೆದಿದ್ದೆವು ಎಂದು ಹೇಳಿದರು. ಈಗ ಸಿಕ್ಕಿರುವ ವಜ್ರದಿಂದ ಬಂದ ಹರಾಜಿನ ಹಣದಿಂದ ಪನ್ನಾ ನಗರದಲ್ಲಿ ಮನೆ ಖರೀದಿಸಲು ಯೋಜಿಸಲಾಗಿದೆ ಎಂದು ಅವರು ಹೇಳಿದರು. ಮಧ್ಯಪ್ರದೇಶದ ಪನ್ನಾ ಜಿಲ್ಲೆ ವಜ್ರದ ಹೇರಳ ನಿಕ್ಷೇಪಕ್ಕೆ ಖ್ಯಾತಿ ಗಳಿಸಿದ್ದು, ಇಲ್ಲಿ 12 ಲಕ್ಷ ಕ್ಯಾರೆಟ್ ವಜ್ರ ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ. ಪನ್ನಾದಲ್ಲಿ ಈ ಹಿಂದೆಯೂ ಅನೇಕರು ಮಣ್ಣಿನಿಂದ ವಜ್ರ ತೆಗೆದ ಪರಿಣಾಮ ಶ್ರೀಮಂತರಾದ ಉದಾಹರಣೆ ಇದೆ. 

ಕೆಲ ದಿನಗಳ ಹಿಂದಷ್ಟೇ ವಜ್ರದ ಗಣಿಗಳಿಗೆ (Diamond Mines) ಹೆಸರುವಾಸಿಯಾದ ಪನ್ನಾದಲ್ಲಿ ರೈತರೊಬ್ಬರಿಗೆ 11.88 ಕ್ಯಾರೆಟ್ ಉತ್ತಮ ಗುಣಮಟ್ಟದ ವಜ್ರ ಸಿಕ್ಕಿತ್ತು. ಕೂಲಿ ಕೆಲಸ ಮಾಡುತ್ತಿರುವ ಸಣ್ಣ ರೈತ ಪ್ರತಾಪ್ ಸಿಂಗ್ ಯಾದವ್ (Pratap Singh Yadav) ಅವರು ಜಿಲ್ಲೆಯ ಪಟ್ಟಿ ಪ್ರದೇಶದ ಗಣಿಯಿಂದ ಈ ವಜ್ರವನ್ನು ಕಂಡುಕೊಂಡಿದ್ದಾರೆ ಎಂದು ವಜ್ರದ ಅಧಿಕಾರಿ ರವಿ ಪಟೇಲ್  ಸುದ್ದಿಗಾರರಿಗೆ ತಿಳಿಸಿದ್ದರು. ಈ ಬಗ್ಗೆ ಮಾತನಾಡಿದ ಯಾದವ್‌, ನಾನು ಸಣ್ಣ ಕೃಷಿ ಭೂಮಿ ಹೊಂದಿರುವ ಬಡ ವ್ಯಕ್ತಿ, ನಾನು ಕೂಡ ಕೂಲಿ ಕೆಲಸ ಮಾಡುತ್ತೇನೆ, ನಾನು ಕಳೆದ ಮೂರು ತಿಂಗಳಿನಿಂದ ಈ ಗಣಿಯಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇನೆ. ನನಗೆ ಸಿಕ್ಕಿರುವ ಈ ವಜ್ರವನ್ನು ಠೇವಣಿ ಮಾಡಿದ್ದೇನೆ  ಈ ವಜ್ರದ ಹರಾಜಿನಿಂದ ಬಂದ ಹಣವನ್ನು ವ್ಯಾಪಾರ ಸ್ಥಾಪಿಸಲು ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಿದ್ದರು.
 

Follow Us:
Download App:
  • android
  • ios