ಲಕ್ನೋ(ನ.22): ಪ್ರೇಮ ಮತ್ತು ಅಂತರ್ಜಾತೀಯ ವಿವಾಹದ ಕಟ್ಟಾ ವಿರೋಧಿಗಳಾದ ಖಾಪ್ ಪಂಚಯತ್, ಯಾವುದೇ ಕಾರಣಕ್ಕೂ ಮಕ್ಕಳು ಪ್ರೇಮ ವಿವಾಹವಾಗುವುದನ್ನು ಬಿಡುವುದಿಲ್ಲ ಎಂದು ಘೋಷಿಸಿದೆ.

ಹೆಣ್ಣು ಮಗುವಿನ ಜನನವನ್ನೇ ತಡೆಯುವುದಾಗಿ ಸುಪ್ರೀಂಕೋರ್ಟ್‌ಗೇ ಬೆದರಿಕೆ

ಈ ಕುರಿತು ಮಾತನಾಡಿರುವ ಖಾಪ್ ನಾಯಕ ನರೇಶ್ ತಿಕೈಟ್, 20-30 ಲಕ್ಷ ರೂ. ಖರ್ಚು ಮಾಡಿ ಹೆಣ್ಣು ಮಕ್ಕಳನ್ನು ಓದಿಸುವುದು ಪ್ರೇಮ ವಿವಾಹವಾಗುವುದಕ್ಕಲ್ಲ ಎಂದು ಹೇಳಿದ್ದಾರೆ.

ಹೆಣ್ಣು ಮಕ್ಕಳು ಪ್ರೇಮ ವಿವಾಹ ಅಥವಾ ಅಂತರ್ಜಾತೀಯ ವಿವಾಹವಾದರೆ ಅವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ನರೇಶ್ ತಿಕೈಟ್ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ವಯಸ್ಕರ ಮದುವೆ ನಿಲ್ಲಿಸಲು ನೀವು ಯಾರು: ಖಾಪ್ ಪಂಚಾಯಿತಿಗಳಿಗೆ ಸುಪ್ರೀಂ ಖಡಕ್ ಪ್ರಶ್ನೆ