Asianet Suvarna News Asianet Suvarna News

ಸಮ್ಮತಿಯ ಮದುವೆಗೆ ಲವ್‌ ಜಿಹಾದ್‌ ಕಾಯ್ದೆ ಅನ್ವಯ ಆಗಲ್ಲ

  • ಬಲವಂತವಲ್ಲದ ಅಂತರ್‌ ಧರ್ಮೀಯ ವಿವಾಹಗಳ ಮೇಲೆ ಗುಜರಾತ್‌ ಹೈ ಕೋರ್ಟ್ ಮಹತ್ವದ ತೀರ್ಪು
  • ಬಲವಂತವಲ್ಲದ ಅಂತರ್‌ ಧರ್ಮೀಯ ವಿವಾಹಗಳ ಮೇಲೆ ಗುಜರಾತ್‌ನ 
love jihad Wont Apply To Inter Faith Marriages Without Force snr
Author
Bengaluru, First Published Aug 20, 2021, 7:11 AM IST

ಅಹಮದಾಬಾದ್‌ (ಆ.20): ಬಲವಂತವಲ್ಲದ ಅಂತರ್‌ ಧರ್ಮೀಯ ವಿವಾಹಗಳ ಮೇಲೆ ಗುಜರಾತ್‌ನ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ)-2021ರ (ಲವ್‌ ಜಿಹಾದ್‌ ತಡೆ) ಕಾಯ್ದೆ ಅನ್ವಯಿಸುವುದಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಹೇಳಿದೆ.

 ಹಾಗೂ ಕಾಯ್ದೆಯ 6 ಅಂಶಗಳಿಗೆ ತಡೆ ನೀಡಿದೆ. ಅಂತರ್‌ ಧರ್ಮೀಯ ವಿವಾಹದ ಕುರಿತಾಗಿ ಮಧ್ಯಂತರ ಆದೇಶ ಹೊರಡಿಸಿದ ಗುಜರಾತ್‌ ಕೋರ್ಟ್‌, ಈ ಪ್ರಕರಣದಲ್ಲಿ ಸಿಲುಕಿದ್ದ ನವ ಜೋಡಿಯ ನೆರವಿಗೆ ಬಂದಿದೆ. 

ಹಿಂದು ಯುವಕ ಹಿಂದು ಯುವತಿಗೆ ಸುಳ್ಳು ಹೇಳಿದ್ರೂ ಅದು ಜಿಹಾದ್..!

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಪೀಠ ಬಲವಂತವಲ್ಲದ, ಅನ್ಯಾಯ ಅಲ್ಲದ ರೀತಿ ಮದುವೆ ಆಗದ ಜೋಡಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದಿದೆ.

ಅನೇಕ ಅಂತರ್‌ಧರ್ಮೀಯ ವಿವಾಹಗಳನ್ನು ಕೆಲವು ಸಂದರ್ಭದಲ್ಲಿ ಲವ್ ಜಿಹಾದ್ ಎಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆ ಈ ಮಹತ್ವದ  ತೀರ್ಪು ನೀಡಲಾಗಿದೆ.
 

Follow Us:
Download App:
  • android
  • ios