ಲಖನೌ(ನ.08): ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಜಿಲ್ಲೆಗಳಲ್ಲಿ ಲವ್‌ ಜಿಹಾದ್‌ ನಿಷೇಧದ ಚರ್ಚೆ ನಡೆದಿರುವ ನಡುವೆಯೇ, ‘ಲವ್‌ ಜಿಹಾದ್‌ ಪಸರಿಸಲು ಅರಬ್‌ ದೇಶಗಳಿಂದ ಹಣ ಬರುತ್ತದೆ’ ಎಂದು ವಿಶ್ವ ಹಿಂದೂ ಪರಿಷತ್‌ ನಾಯಕಿ ಸಾಧ್ವಿ ಪ್ರಾಚಿ ಹೇಳಿದ್ದಾರೆ.

ಶನಿವಾರ ಮಾತನಾಡಿದ ಪ್ರಾಚಿ, ‘ಅರಬ್‌ ದೇಶಗಳಿಂದ ಲವ್‌ ಜಿಹಾದ್‌ ನಡೆಸಲು ಹಣ ಬರುತ್ತದೆ. ಬ್ರಾಹ್ಮಣ, ವೈಶ್ಯ ಹಾಗೂ ಶೂದ್ರ ಹೆಣ್ಣುಮಕ್ಕಳನ್ನು ಮುಸ್ಲಿಂ ಧರ್ಮೀಯರನ್ನು ಮದುವೆಯಾಗಲು ಪ್ರೇರೇಪಿಸಿ 10 ಲಕ್ಷ ರು.ನಿಂದ 25 ಲಕ್ಷ ರು. ಹಣದ ಆಮಿಷ ಒಡ್ಡಲಾಗುತ್ತದೆ. ಇಂಥ ಕೃತ್ಯ ನಡೆಸುವವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು’ ಎಂದು ಹೇಳಿದರು.

ಲವ್‌ ಜಿಹಾದ್‌ ವಿರುದ್ಧ ಕಾಯ್ದೆ: ಬಿಎಸ್‌ವೈ ವಿರುದ್ಧ ಸಿದ್ದ​ರಾ​ಮಯ್ಯ ಕಿಡಿ

ಆದರೆ ಸಾಧು-ಸಂತರ ಪರಮೋಚ್ಚ ಸಂಘಟನೆಯಾದ ಅಖಿಲ ಭಾರತ ಅಖಾಡಾ ಪರಿಷತ್ತು ಪ್ರಾಚಿ ಹೇಳಿಕೆಯನ್ನು ಖಂಡಿಸಿದೆ. ‘ಇಂಥ ಪ್ರಚೋದಕ ಹೇಳಿಕೆಯನ್ನು ಪ್ರಾಚಿ ನೀಡಬಾರದು’ ಎಂದು ಪರಿಷತ್ತಿನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ. ಆದರೆ ‘ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.