ಬೇಗುಸರಾಯ್‌ (ಬಿಹಾರ): ಸಂಗೀತ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ಮಾಡುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು, ಆ ಇಬ್ಬರನ್ನೂ ಥಳಿಸಿ ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಬಿಹಾರದ ಬೇಗುಸರಾಯ್‌ಯಲ್ಲಿ ನಡೆದಿದೆ. 

ಬೇಗುಸರಾಯ್‌ (ಬಿಹಾರ): ಸಂಗೀತ ಶಿಕ್ಷಕ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆ ಮಾಡುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು, ಆ ಇಬ್ಬರನ್ನೂ ಥಳಿಸಿ ವಿವಸ್ತ್ರಗೊಳಿಸಿ ಥಳಿಸಿದ ಘಟನೆ ಬಿಹಾರದ ಬೇಗುಸರಾಯ್‌ಯಲ್ಲಿ ನಡೆದಿದೆ. ಕಿಶನ್‌ ದೇವ್‌ ಚೌರಾಸಿಯಾ ಎಂಬ ಶಿಕ್ಷಕ ಸಂಗೀತ ಪಾಠ ಮಾಡುವಾಗಿ ವಿದ್ಯಾರ್ಥಿನಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದನ್ನು ಜನರು ಕಂಡಿದ್ದಾರೆ. ಬಳಿಕ ದೇವ್‌ ಹಾಗೂ ವಿದ್ಯಾರ್ಥಿನಿಯನ್ನು ಎಲ್ಲರೆದುರು ಥಳಿಸಿ, ಬಟ್ಟೆ ಹರಿದು ಥಳಿಸಿದ್ದಾರೆ. ಅಲ್ಲಿರುವವರು ಘಟನೆಯ ವಿಡಿಯೋ ಮಾಡಿದ್ದಾರೆ. 

ಘಟನೆ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಸಂಬಂಧ ಪೊಲೀಸರು ಪ್ರಮುಖ ಮೂರು ಆರೋಪಿಗಳಿಗೆ ಬಲೆ ಬೀಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇದಕ್ಕೆ ಕಿಡಿಕಾರಿರುವ ಬಿಜೆಪಿ ಮುಖಂಡ ಅರವಿಂದ್‌ ಕುಮಾರ್‌ ಸಿಂಗ್‌,‘ತೇಜಸ್ವಿ ಯಾದವ್‌ ಅವರು ರಾಹುಲ್‌ ಗಾಂಧಿ ಅವರಿಗೆ ಬಿಹಾರದ ಬೇಗುಸರಾಯ್‌ಗೂ ಬರಲು ಆಹ್ವಾನ ನೀಡಲಿ ಎಂದು ಚಾಟಿ ಬೀಸಿದ್ದಾರೆ.

ಎಲ್ಲ ಗಲಭೆಗಳಿಗೂ ಬೇಕು ಹೆಣ್ಣು ಮತ್ತು ಆಕೆಯ ದೇಹ!

ಘಟನೆಯ ವಿವರ: 

ತೆಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪಖ್ತೊಲ್ ಗ್ರಾಮದ ನಿವಾಸಿಯಾದ ಶಿಕ್ಷಕ ಕಿಶನ್ ದೇವ್ ಚೌರಾಸಿಯಾಗೆ ನೆರಮನೆಯ ವಿದ್ಯಾರ್ಥಿನಿ ಜೊತೆ ಪ್ರೇಮ ಸಂಬಂಧವಿತ್ತು. ಈ ಬಗ್ಗೆ ಊರಿನಲ್ಲಿ ಗುಲ್ಲಿತ್ತು. ಈ ಮಧ್ಯೆ ಇವರಿಬ್ಬರು ಕಾಣಬಾರದ ಸ್ಥಿತಿಯಲ್ಲಿ ಗ್ರಾಮಸ್ಥರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಕಿಶನ್ ದೇವ್ ಭಜನೆ, ಕೀರ್ತನೆ ಮುಂತಾದವುಗಳನ್ನು ನಡೆಸುವ ಹವ್ಯಾಸ ಹೊಂದಿದ್ದು, ಜೊತೆಗೆ ಹಾರ್ಮೋನಿಯಂ ಅನ್ನು ಕೂಡ ನುಡಿಸಲು ಆತನಿಗೆ ತಿಳಿದಿತ್ತು. ಈ ಹಿನ್ನೆಲೆ ಕಿಶನ್ ದೇವ್ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಯುವತಿಗೆ ಕಿಶನ್ ಮೇಲೆ ಪ್ರೇಮಾಂಕರುವಾಗಿದೆ. ಹೀಗಾಗಿ ಆಕೆ ಹಾರ್ಮೋನಿಯಂ ಕಲಿಯುವ ನೆಪದಲ್ಲಿ ಪ್ರತಿದಿನ ಸಂಜೆ ಕಿಶನ್ ದೇವ್ ಮನೆಗೆ ಬರುತ್ತಿದ್ದಳು. ಜುಲೈ 20 ರಂದು ಕೂಡ ಆಕೆ ಇದೇ ನೆಪದಲ್ಲಿ ಕಿಶನ್ ದೇವ್ ಮನೆಗೆ ಬಂದಿದ್ದಾಳೆ. 

ಈ ವೇಳೆ ಇವರಿಬ್ಬರ ಚಲನವಲನಗಳನ್ನು ಹಲವು ದಿನಗಳಿಂದ ಗಮನಿಸಿದ್ದ ಗ್ರಾಮಸ್ಥರಿಗೆ ಇಲ್ಲಿ ಸಂಗೀತಾದ ಬದಲು ಬೇರೇನೋ ನಡೆಯುತ್ತಿದೆ ಎಂಬ ಶಂಕೆ ಮೂಡಿದೆ. ಹೀಗಾಗಿ ಗ್ರಾಮಸ್ಥರು ಅವರ ಮನೆಗೆಹೋಗಿ ಇಣುಕಿದ್ದು, ಈ ವೇಳೆ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದರೂ ಎಂದು ತಿಳಿದು ಬಂದಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು, ಕಾನೂನು ಕೈಗೆ ಪಡೆದು ಇಬ್ಬರನ್ನು ಹಿಗ್ಗಾಮುಗ್ಗಾ ಥಳಿಸಲಾರಂಭಿಸಿದ್ದಾರೆ. ಇಬ್ಬರ ಬಟ್ಟೆಯನ್ನು ಹರಿದು ಅವರನ್ನು ಬೆತ್ತಲೆಗೊಳಿಸಿದ ಗ್ರಾಮಸ್ಥರು ನಂತರವೂ ಅವರಿಗೆ ಥಳಿಸಿದ್ದಾರೆ. 

ಇದೇ ವೇಳೆ ಅಲ್ಲಿ ಇದ್ದ ಕೆಲವರು ಘಟನೆಯ ವೀಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದಾರೆ. ಅಲ್ಲದೇ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅವರ ಮಾನ ಹರಾಜು ಮಾಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಗ್ರಾಮಸ್ಥರ ಕ್ರೌರ್ಯ ಸೆರೆ ಆಗಿದೆ. ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅಮಾನವೀಯ ಘಟನೆ: ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪುಂಡರು..!

ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಯೋಗೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದು, ಮಧ್ಯವಯಸ್ಕ ವ್ಯಕ್ತಿ ಹಾಗೂ ಯುವತಿ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವೀಡಿಯೋ ವೈರಲ್ ಆಗಿದ್ದು, ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ಥರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಗೆ ವೈದ್ಯಕೀಯ ತಪಾಸಣೆಯನ್ನು ಕೂಡ ಮಾಡಲಾಗಿದೆ. ನಂತರ ಆಕೆಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಇವರ ಮೇಲೆ ಹಲ್ಲೆ ಮಾಡಿದವರ ಗುರುತನ್ನು ಪತ್ತೆ ಮಾಡಲಾಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಎಸ್ಪಿ ಹೇಳಿದ್ದಾರೆ.