ಭಗವಾನ್ ಹನುಮಾನ್ ಆದಿವಾಸಿ ಎಂದು ಕಾಂಗ್ರೆಸ್ ನಾಯಕ ಹೊಸ ವಾದ ಮುಂದಿಟ್ಟಿದ್ದಾರೆ. ಶ್ರೀರಾಮನಿಗೆ ಲಂಕಾಗೆ ತೆರಳಲು ನೆರವು ನೀಡಿದ್ದು ಇದೇ ಆದಿವಾಸಿ ಎಂದಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಭೋಪಾಲ್(ಜೂ.10): ಶ್ರೀರಾಮನನ್ನು ಶ್ರೀಲಂಕಾಗೆ ತೆರಳಲು ದಾರಿ ತೋರಿಸಿದ್ದು ಆದಿವಾಸಿ ಹನುಮಾನ್. ಭಜರಂಗಿ ಆದಿವಾಸಿ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಉಮಂಗ್ ಸಿಂಘಾರ್ ಹೇಳಿದ್ದಾರೆ. ಬಡುಕಟ್ಟ ಸಮುದಾಯದ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ 123ನೇ ಪುಣ್ಯತಿಥಿ ಸಮಾರಂಭದ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ. ನಮ್ಮ ನಾಯಕ ಬಿರ್ಸಾ ಮುಂಡಾ, ಹನುಮಾನ್ ನಮಗೆ ಪ್ರೇರಣೆಯಾಗಿದ್ದಾರೆ. ನಾವು ಹೆಮ್ಮೆಯಿಂದ ಆದಿವಾಸಿ ಎಂದು ಹೇಳಿಕೊಳ್ಳಬೇಕು ಎಂದು ಉಮಂಗ್ ಸಿಂಘಾರ್ ಹೇಳಿದ್ದಾರೆ.

ಕೆಲವರು ರಾಮಾಯಣದಲ್ಲಿ ಬರೆದಿದ್ದಾರೆ. ಶ್ರೀರಾಮ ಲಂಕೆಗೆ ತೆರಳಲು ವಾನರ ಸೇನೆ ನೆರವು ನೀಡಿತು. ಈ ವಾನರ ಸೇನೆ ಎಂದರೆ ವನದಲ್ಲಿರುವ ಸೇನೆ. ಅಂದರೆ ಆದಿವಾಸಿ ಸಮುದಾಯ. ಶ್ರೀರಾಮನು ಲಂಕೆಗೆ ತೆರಳಲು ದಾರಿ ತೋರಿಸಿದ್ದು, ಲಂಕೆಯಲ್ಲಿ ಸೀತಾಮಾತೆಯನ್ನು ಸುರಕ್ಷಿತವಾಗಿ ಕರೆ ತರಲು ನೆರವು ನೀಡಿದ್ದು ಆದಿವಾಸಿ ನಾಯಕ ಹನುಮಾನ್ ಎಂದು ಉಮಂಗ್ ಸಿಂಘಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಮಾಜ್‌ ಮಾಡಲು ಜಾಗ: ವರದಿಗೆ 7 ಜನರ ಸಮಿತಿ

ಆದರೆ ಕಾಂಗ್ರೆಸ್ ನಾಯಕ ಈ ಹೇಳಿಕೆಯನ್ನು ಬಿಜೆಪಿ ವಿರೋಧಿಸಿದೆ. ಹನುಮಾನ್ ಹಿಂದೂಗಳಿಗೆ ದೇವರು. ಹಿಂದೂಗಳ ಕೋಟ್ಯಾಂತರ ನಂಬಿಕೆ, ಭಕ್ತಿ ಹಾಗೂ ಶಕ್ತಿಯಾಗಿರುವ ಹನುಮಾನ್ ನಿಮಗೆ ಒಬ್ಬ ಸಮುದಾಯದ ನಾಯಕನಾಗಿ ಕಂಡಿರುವುದು ಶೋಚನೀಯ. ಎಲ್ಲಾ ಹಿಂದೂಗಳಿಗೆ ಹನುಮಾನ್ ದೇವರು. ನಿಮ್ಮ ಭಾಷಣದ ಸರಕಿಗೆ, ಚಪ್ಪಾಳೆಗೆ, ಸಮುದಾಯವನ್ನು ಒಲೈಸಲು ಈ ರೀತಿಯ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದೀರಿ ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ಹಿತೇಶ್ ಬಾಜ್‌ಪೈ ಹೇಳಿದ್ದಾರೆ.

ನಾಯಕ ಉಮಂಗ್ ಸಿಂಘಾರ್, ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯ ಮಂತ್ರಿಯಾಗಿದ್ದರು. ಇದೇ ಮಾಜಿ ಮಂತ್ರಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಇದೀಗ ಹಿಂದೂಗಳ ಭಕ್ತಿ, ಶ್ರದ್ಧೆ ಹಾಗೂ ಆರಾದ್ಯ ದೇವರ ಕುರಿತು ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಹೀತೇಶ್ ಬಾಜ್‌ಪೈ ಹೇಳಿದ್ದಾರೆ. ಕಾಂಗ್ರೆಸ್ ಕ್ಯಾಥೋಲಿಕ್ ಪಾದ್ರಿಯ ರೀತಿ ಮಾತನಾಡುತ್ತಿದೆ ಎಂದಿದ್ದಾರೆ.

Hanuman Mantra: ರಾಶಿ ಪ್ರಕಾರ ಜಪಿಸಿ ಹನುಮ ಮಂತ್ರ; ಗ್ರಹಬಲದ ಜೊತೆ ಸಿಗಲಿದೆ ಆಂಜನೇಯನ ಅನುಗ್ರಹ

ಹನುಮಾನ್ ಆದಿವಾಸಿ ಹೇಳಿಕೆ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ ಮಧ್ಯಪ್ರದೇಶದ ಬುಡಕಟ್ಟು ಸಮುದಾಯದ ಕಾಂಗ್ರೆಸ್ ಶಾಸಕ ಅರ್ಜುನ್ ಸಿಂಗ್ ಕಕೋಡಿಯಾ ಇದೇ ರೀತಿ ಹೇಳಿಕೆ ನೀಡಿದ್ದರು. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಸೇರಿದಂತೆ ಹಲವು ಹಿರಿಯ ನಾಯಕರ ಸಮ್ಮುಖದಲ್ಲೇ ಹನುಮಾನ್ ಆದಿವಾಸಿ ಎಂಬ ಹೇಳಿಕೆ ನೀಡಿದ್ದರು. ಇದೀಗ ಉಮಂಗ್ ಸಿಂಘಾರ್ ಇದೇ ಹೇಳಿಕೆ ನೀಡಿದ್ದಾರೆ.