ಜಾರ್ಖಂಡ್‌ ವಿಧಾನಸಭೆಯಲ್ಲಿ ನಮಾಜ್‌ ಮಾಡಲು ಜಾಗ ಕಲ್ಪಿಸುವ ಸಂಬಂಧ ವರದಿ ನೀಡಲು 7 ಜನರ ತಂಡ ರಚಿಸಿರುವುದಾಗಿ ಜಾರ್ಖಂಡ್‌ ವಿಧಾನಸಭೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಂಚಿ: ಜಾರ್ಖಂಡ್‌ ವಿಧಾನಸಭೆಯಲ್ಲಿ ನಮಾಜ್‌ ಮಾಡಲು ಜಾಗ ಕಲ್ಪಿಸುವ ಸಂಬಂಧ ವರದಿ ನೀಡಲು 7 ಜನರ ತಂಡ ರಚಿಸಿರುವುದಾಗಿ ಜಾರ್ಖಂಡ್‌ ವಿಧಾನಸಭೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಈಗಾಗಲೇ ಜಾಗ ಕಲ್ಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಮಾಹಿತಿ ನೀಡಿದ ವಿಧಾನಸಭೆ, ಈ ಬಗ್ಗೆ ವರದಿ ನೀಡಲು ಸಮಿತಿ ರಚಿಸಲಾಗಿದೆ. ಅದು ವಿವಿಧ ರಾಜ್ಯಗಳಲ್ಲಿನ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲಿದೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದೆ. 2021ರಲ್ಲಿ ಜಾರ್ಖಂಡ್‌ ಸರ್ಕಾರ, ಕೊಠಡಿಯೊಂದನ್ನು ನಮಾಜ್‌ಗೆ ನೀಡಿತ್ತು. ಇದನ್ನು ವಿರೋಧಿಸಿದ್ದ ಬಿಜೆಪಿ ಹನುಮಂತನ ದೇಗುಲ ನಿರ್ಮಾಣಕ್ಕೆ ಅವಕಾಶ ಕೋರಿತ್ತು.

ಈದ್‌ ದಿನ ರಸ್ತೆಯಲ್ಲಿ ನಮಾಜ್‌, 1700 ಎಫ್‌ಐಆರ್‌ ದಾಖಲಿಸಿದ ಉತ್ತರ ಪ್ರದೇಶ ಪೊಲೀಸ್!

ಪೊಲೀಸರ ಸೂಚನೆಯನ್ನು ಮೀರಿ ರಂಜಾನ್‌ ದಿನ ರಸ್ತೆಯಲ್ಲಿ ನಮಾಜ್‌ ಮಾಡಿದ 1700 ಜನರ ವಿರುದ್ಧ ಉತ್ತರ ಪ್ರದೇಶದ ಕಾನ್ಪುರದ ಮೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ರಸ್ತೆಯಲ್ಲಿ ನಮಾಜ್‌ ಮಾಡಲು ನಿಷೇಧವಿತ್ತು. ಇದನ್ನು ಸ್ಪಷ್ಟವಾಗಿ ತಿಳಿಸಿದ್ದೆವು. ಹಾಗಿದ್ದರೂ ಜಜಮೌ, ಬಾಬುಪುರ್ವಾ ಹಾಗೂ ಬಡಿ ಈದ್ಗಾ ಬೆನಾಜ್‌ಬರ್‌ ಪ್ರದೇಶದ ರಸ್ತೆಯ ಬಳಿ ಏಪ್ರಿಲ್‌ 22 ರಂದು ನಮಾಜ್‌ ಮಾಡಲಾಗಿದೆ. ಜಜ್ಮೌನಲ್ಲಿ 200 ರಿಂದ 300 ಜನರ ವಿರುದ್ಧ, ಬಾಬುಪುರ್ವಾದಲ್ಲಿ 40 ರಿಂದ 50, ಬಜಾರಿಯಾದಲ್ಲಿ 1500 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇವರಲ್ಲಿ ಈದ್ಗಾ ಸಮಿತಿಯ ಸದಸ್ಯರು ಸೇರಿದ್ದಾರೆ. ಬೇಗಂಪುರವಾ ಚೌಕಿ ಉಸ್ತುವಾರಿ ಬ್ರಿಜೇಶ್ ಕುಮಾರ್ ಈ ಕುರಿತಾಗಿ ಮಾತನಾಡಿದ್ದು, ಈದ್ ಮೊದಲು ಶಾಂತಿ ಸಮಿತಿಯ ಸಭೆ ಇತ್ತು. ಇದರಲ್ಲಿ ರಸ್ತೆಯಲ್ಲಿ ನಮಾಜ್ ಮಾಡುವುದಿಲ್ಲ ಎಂದು ಆ ಭಾಗದ ಜನರಿಗೆ ತಿಳಿಸಲಾಗಿತ್ತು. ಈದ್ಗಾ ಮತ್ತು ಮಸೀದಿಯ ಒಳಗೆ ಮಾತ್ರ ಈದ್ ಪ್ರಾರ್ಥನೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಜನಸಂದಣಿಯಿಂದಾಗಿ ಯಾವುದೇ ವ್ಯಕ್ತಿ, ನಮಾಜ್‌ ತಪ್ಪಿದರೆ, ನಂತರ ಅವರ ನಮಾಜ್‌ ಅನ್ನು ಪುನಃ ಸಲ್ಲಿಸಲು ಪೊಲೀಸರಿಂದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು.

ಮಸೀದಿಯಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ, ಮುಸ್ಲಿಮ್ ಬೋರ್ಡ್!

ಸೆಕ್ಷನ್-144 ಜಾರಿಯಲ್ಲಿತ್ತು, ಅದನ್ನು ಪಾಲಿಸಿಲ್ಲ: ಈದ್ ದಿನದಂದು, ಏಪ್ರಿಲ್ 22 ರಂದು ಬೆಳಿಗ್ಗೆ 8 ಗಂಟೆಗೆ, ಈದ್ಗಾದಲ್ಲಿ ಪ್ರಾರ್ಥನೆ ಪ್ರಾರಂಭವಾಗುವ ಮುನ್ನ, ಇದ್ದಕ್ಕಿದ್ದಂತೆ ಈದ್ಗಾ ಮುಂಭಾಗದ ರಸ್ತೆಯಲ್ಲಿ ಸಾವಿರಾರು ಜನರು ಜಮಾಯಿಸಿದರು. ನಿಷೇಧಾಜ್ಞೆ ನಡುವೆಯೂ ಎಲ್ಲರೂ ರಸ್ತೆಯಲ್ಲಿ ಚಾಪೆ ಹಾಸಿ ನಮಾಜ್ ಮಾಡಲು ಆರಂಭಿಸಿದರು. ಪೊಲೀಸರು ತಡೆಯಲು ಯತ್ನಿಸಿದರೂ ಯಾರೂ ಮಾತು ಕೇಳಲಿಲ್ಲ. ಈ ವೇಳೆ ಜಿಲ್ಲೆಯಲ್ಲಿ ಸೆಕ್ಷನ್-144 ಕೂಡ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊರಠಾಣೆ ಪ್ರಭಾರಿ ದೂರಿನ ಮೇರೆಗೆ ಪೊಲೀಸರು ಈದ್ಗಾ ಸಮಿತಿ ಸದಸ್ಯರು ಹಾಗೂ ಅಲ್ಲಿ ನಮಾಜ್ ಮಾಡುವವರ ವಿರುದ್ಧ ಗಂಭೀರ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವವರನ್ನು ಸಿಸಿಟಿವಿ ದೃಶ್ಯಗಳಿಂದ ಗುರುತಿಸಲಾಗುತ್ತಿದೆ.

ಬಾಬುಪುರ್ವಾ ಪೊಲೀಸರು ಸೆಕ್ಷನ್-186 (ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು), ಸೆಕ್ಷನ್-188 (ಸೆಕ್ಷನ್-144 ಅನ್ನು ಉಲ್ಲಂಘಿಸಿ ಗುಂಪನ್ನು ಒಟ್ಟುಗೂಡಿಸುವುದು), ಸೆಕ್ಷನ್-283 (ಜನಸಂದಣಿಯನ್ನು ಒಟ್ಟುಗೂಡಿಸಿ ದಾರಿಯನ್ನು ತಡೆಯುವುದು) ಅಡಿಯಲ್ಲಿ ಪೂಜಾರ ವಿರುದ್ಧ ಈ ಸೆಕ್ಷನ್‌ಗಳ ಅಡಿಯಲ್ಲಿ ವರದಿಯನ್ನು ದಾಖಲಿಸಿದ್ದಾರೆ. ಕಲಂ- 341 (ತಪ್ಪಾದ ಅಡಚಣೆ) ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿಪಡಿಸುವುದು ಮತ್ತು ಕಲಂ-353 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂಸ್ಕೃತಿ ವಿವಿಯಲ್ಲಿ ಕಾಶ್ಮೀರದ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್: ವಿಡಿಯೋ ವೈರಲ್

ಬಜಾರಿಯಾ ಪೊಲೀಸ್ ಠಾಣೆಯಲ್ಲಿ 1500 ಜನರ ವಿರುದ್ಧ ಎಫ್‌ಐಆರ್: ಮಾರ್ಕ್‌ಜಿ ಈದ್ಗಾ ಬೆನಜಾಬರ್‌ನಲ್ಲಿ ನಿಷೇಧಾಜ್ಞೆ ನಡುವೆಯೂ ರಸ್ತೆಯಲ್ಲಿ ನಮಾಜ್ ಮಾಡಿದ ಈದ್ಗಾ ಸಮಿತಿ ಮತ್ತು ಅದರ ಸದಸ್ಯರು ಸೇರಿದಂತೆ 1500 ಜನರ ವಿರುದ್ಧ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ನಿರಾಕರಿಸಿದ ನಂತರವೂ ಜನರು ರಸ್ತೆಯಲ್ಲೇ ಕುಳಿತು ನಮಾಜ್ ಮಾಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.