Asianet Suvarna News Asianet Suvarna News

ಇದೆಂಥಾ ವಿಚಿತ್ರ... ಒಂದಿನ ಪ್ಯಾಂಟ್ ಹಾಕದೇ ಪ್ರಯಾಣಿಸಿದ ಲಂಡನ್ ಜನ

ಲಂಡನ್‌ನಲ್ಲಿ ಎಲ್ಲರೂ ಪ್ಯಾಂಟ್ ಇಲ್ಲದೇ ದೇಹದ ಮೇಲ್ಬಾಗಕ್ಕೆ ಮಾತ್ರ  ಉಡುಪು ಧರಿಸಿ ಕೆಳಭಾಗಕ್ಕೆ ಕೇವಲ ಒಳ ಉಡುಪು ಧರಿಸಿ ಸಾರ್ವಜನಿಕ ಸಾರಿಗೆಯಾದ ಸಬ್‌ವೇ ಮೆಟ್ರೋದಲ್ಲಿ ಸಂಚರಿಸುತ್ತಾರೆ. 

London people ride in Elizabeth Line subway wearing only underpants akb
Author
First Published Jan 10, 2023, 9:53 PM IST

ಲಂಡನ್: ಪೋಷಕರ ದಿನ, ಪ್ರೇಮಿಗಳ ದಿನ, ಪರಿಸರ ದಿನ ತಂದೆಯರ ದಿನ, ತಾಯಿಯರ ದಿನ, ಸಹೋದರರ ದಿನ ಮುಂತಾದ ಆಚರಣೆಗಳ ದಿನಗಳನ್ನು ನೋಡಿರ್ತೀರಾ ಕೇಳಿರ್ತೀರಾ, ಹಾಗೆಯೇ ಕಾಲೇಜು ದಿನಗಳಲ್ಲಿ ಎಥ್ನಿಕ್ ಡೇ, ಟ್ರೆಡಿಷನಲ್ ಡೇ ,  ಕಲರ್ ಡೇ ಮುಂತಾದ ಸೆಲೆಬ್ರೇಷನ್‌ಗಳಲ್ಲಿ ವಿವಿಧ ಸಂಪ್ರದಾಯಿಕ ಉಡುಪುಗಳನ್ನು ಧರಿಸಿ ಹೋಗಿರ್ತೀರಾ ಆದರೆ, ಯಾವತ್ತಾದರೂ ನೋ ಪ್ಯಾಂಟ್ ಡೇ ಎಂಬ ದಿನವನ್ನು ಆಚರಿಸಿದ್ದೀರಾ ಅಥವಾ ಕೇಳಿದ್ದೀರಾ ಇಲ್ಲ ಎಂದಾದರೆ ಇಲ್ಲಿ ಓದಿ..  ಇದು ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ ಲಂಡನ್‌ನಲ್ಲಿ ಆಚರಿಸುವ ಒಂದು ಡೇ ಆಗಿದೆ.  ನಮಗಿದು ಮುಜುಗರ ತರಿಸಿದರೂ ಅಲ್ಲಿಯ ಜನರಿಗೆ ಡೋಂಟ್ ಕೇರ್. ಈ ದಿನ ಇಲ್ಲಿ ಎಲ್ಲರೂ ಪ್ಯಾಂಟ್ ಇಲ್ಲದೇ ದೇಹದ ಮೇಲ್ಬಾಗಕ್ಕೆ ಮಾತ್ರ  ಉಡುಪು ಧರಿಸಿ ಕೆಳಭಾಗಕ್ಕೆ ಕೇವಲ ಒಳ ಉಡುಪು ಧರಿಸಿ ಸಾರ್ವಜನಿಕ ಸಾರಿಗೆಯಾದ ಸಬ್‌ವೇ ಮೆಟ್ರೋದಲ್ಲಿ ಸಂಚರಿಸುತ್ತಾರೆ. 

ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಆಚರಣೆಗಳಿರುತ್ತವೆ ಅಲ್ವಾ?  ಹಾಗೆಯೇ ಲಂಡನ್‌ನಲ್ಲಿ ಜನವರಿ 8 ರಂದು ಭಾನುವಾರ ಈ 'ನೋ ಪ್ಯಾಂಟ್ ಸಬ್ ವೇ ರೈಡ್ 'ಎಂಬ ಆಚರಣೆ ನಡೆಸಲಾಯ್ತು,  ಇದರ ಭಾಗವಾಗಿ ಯುವಕ ಯುವತಿಯರೆಲ್ಲಾ ಒಳ ಉಡುಪು ಧರಿಸಿ  ಪ್ಯಾಂಟ್  ಇಲ್ಲದೇ ಬೆನ್ನಿಗೆ ಬ್ಯಾಗ್ ಏರಿಸಿ ಮೆಟ್ರೋದಲ್ಲಿ ಸಂಚರಿಸಿದರು.  ಇದರಲ್ಲಿ ಭಾಗಿಯಾಗದ ಕೆಲ ಪ್ರಯಾಣಿಕರು ಹೀಗೆ ಪ್ಯಾಂಟ್ ಇಲ್ಲದೇ ಬಂದ ಜನರನ್ನು ನೋಡಿ ದಂಗಾಗಿದ್ದಾರೆ.  ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಈ ನೋ ಪ್ಯಾಂಟ್ ಸಬ್ ವೇ ರೈಡ್ ' ಅನ್ನು ಆಚರಿಸಲಾಗಿತ್ತು.  ಹೀಗಾಗಿ ಅನೇಕ ಉತ್ಸಾಹಿಗಳು ಈ ನೋ ಪ್ಯಾಂಟ್  ಡೇಯಲ್ಲಿ ಭಾಗಿಯಾಗಿದ್ದರು.

ಈ ಪ್ಯಾಂಟ್ ಇಲ್ಲದೆ ಪಯಣವೂ ಲಂಡನ್‌ ಸಾರ್ವಜನಿಕ ಸಾರಿಗೆ ಟ್ಯೂಬ್ ರೈಡ್ (Tube ride) ಎಲಿಜಬೆತ್ ಲೈನ್‌ನಲ್ಲಿ ನಡೆದಿದ್ದು, ಇದರಲ್ಲಿ ಭಾಗವಹಿಸುವವರಿಗೆ ಯಾವುದೇ ಸದಸ್ಯತ್ವ ಇರಲಿಲ್ಲ  ಎಂದು ವರದಿಯಾಗಿದೆ.  ಹಾಗಂತ ಪ್ಯಾಂಟ್ ಇಲ್ಲದೇ ಓಡಾಡುವುದಕ್ಕೆ ಯಾವುದೇ ಹಿನ್ನೆಲೆಗಳಿಲ್ಲ. ಕೇವಲ ಪ್ಯಾಂಟ್ ಇಲ್ಲದೇ ಟ್ಯೂಬ್ ಸವಾರಿಯನ್ನು ಆನಂದಿಸುವುದು ಅಷ್ಟೇ ಇದರ ಉದ್ದೇಶ ಎಂದು ಈ ಕಾರ್ಯಕ್ರಮದ ಆಯೋಜಕರಾದ ದಿ ಸ್ಟಿಫ್ ಅಪ್ಪರ್ ಲಿಪ್ ಸೊಸೈಟಿಯ ಸಂಸ್ಥಾಪಕ ಇವಾನ್ ಮಾರ್ಕೊವಿಕ್ (Ivan Markovic) ಮೈಲಂಡನ್‌ ಎಂಬ ವೆಬ್‌ಸೈಟ್‌ಗೆ ತಿಳಿಸಿದ್ದಾರೆ. ಇದು ಕೇವಲ ಜನರನ್ನು ನಗಿಸುವುದಕ್ಕಾಗಿ ಆಯೋಜಿಸಲಾಗಿದೆ.  ಅಪರಿಚಿತ ಜನರನ್ನು ನಗಿಸುವುದಕ್ಕಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಹೊರತು ಬೇರೆ ಯಾವ ಉದ್ದೇಶವೂ ಈ ಕಾರ್ಯಕ್ರಮದ ಹಿಂದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಮೂಲಕ ಯಾವುದೇ ಕಾರ್ಯಕ್ರಮಕ್ಕೂ ಹಣ ಸಂಗ್ರಹಣೆ ಮಾಡಲಾಗುತ್ತಿಲ್ಲ ಎಂದು ಅವರು ಹೇಳಿದರು. 

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ದೇಹದ ಮೇಲ್ಭಾಗವನ್ನು ಸಂಪೂರ್ಣ ಉಡುಪುಗಳಿಂದ ಮುಚ್ಚಿ ಕೆಳಭಾಗ ಕೇವಲ ಒಳಉಡುಪು ಮಾತ್ರ ಧರಿಸಿ  ಪ್ಯಾಂಟ್ ಇಲ್ಲದೇ ಓಡಾಡುವ ಜನರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟಿದ್ದು ನೋಡಿದ ಕೂಡಲೇ ನಗು ಮೂಡಿಸುತ್ತಿದೆ.  ಈ ವಿಡಿಯೋ ನೋಡಿದ ಅನೇಕರು ಇದು ವರ್ಕ್ ಫ್ರಮ್ ಹೋಂ ಸ್ಟೈಲ್ ಎಂದು ಹಾಸ್ಯ ಮಾಡಿದ್ದಾರೆ.  ಅಂದಹಾಗೆ ಇದು 12ನೇ ವರ್ಷದ ನೋ ಪ್ಯಾಂಟ್ ಸಬ್ ವೇ ರೈಡ್ ಅಂತೆ ಅದೇನೆ ಇರಲಿ ಪ್ಯಾಂಟ್  ಇಲ್ಲದೇ ಪ್ರಯಾಣಿಸುವವರು ನೋಡುಗರ ಮೊಗದಲ್ಲಿ ನಗು ಮೂಡಿಸಿದ್ದಂತು ನಿಜ. 

 

Follow Us:
Download App:
  • android
  • ios