ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸೀಟ್ ಗೆದ್ದಿದೆ ಗೊತ್ತಾ?
Loksabhab Election 2024: 18ನೇ ಲೋಕಸಭಾ ಚುನಾವಣೆಯಲ್ಲಿ 240 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ (BJP) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ (Congress) 99 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ಪ್ರಯತ್ನಿಸುತ್ತಿದೆ.
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ (Loksabha Election Results 2024) ಪ್ರಕಟವಾಗಿದ್ದು, ದೇಶದ ಮತದಾರ ಪ್ರಭು ಯಾವ ಪಕ್ಷಕ್ಕೂ ಬಹುಮತವನ್ನು ನೀಡಿಲ್ಲ. ಭಾರತೀಯ ಚುನಾವಣಾ ಆಯೋಗದ (Election Commission Of India) ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಕೂಟಕ್ಕೆ 292, ಐಎನ್‌ಡಿಐಎ (INDIA) ಕೂಟಕ್ಕೆ 234 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ. ಹೀಗಾಗಿ ಎರಡೂ ಒಕ್ಕೂಟಗಳು ಕೇಂದ್ರದಲ್ಲಿ ಸರ್ಕಾರ ರಚನೆಗೆ ಪ್ರಯತ್ನಿಸುತ್ತಿವೆ. 18ನೇ ಲೋಕಸಭಾ ಚುನಾವಣೆಯಲ್ಲಿ 240 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ (BJP) ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ (Congress) 99 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲು ಪ್ರಯತ್ನಿಸುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ ಎಂಬುದರ ಮಾಹಿತಿ ಇಲ್ಲಿದೆ.
ಯಾವ ಪಕ್ಷಕ್ಕೆ ಎಷ್ಟು ಸೀಟ್?
ಭಾರತೀಯ ಜನತಾ ಪಕ್ಷ (ಬಿಜೆಪಿ): 240, ಕಾಂಗ್ರೆಸ್: 99,, ಸಮಾಜವಾದಿ ಪಕ್ಷ: 37, ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಟಿಎಂಸಿ): 29, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ): 22, ತೆಲುಗು ದೇಶಂ (ಟಿಡಿಪಿ): 16, ಜನತಾದಳ (ಯು):12, ಶಿವಸೇನಾ-ಉದ್ಧವ್ ಠಾಕ್ರೆ ಬಣ: 9, ಎನ್‌ಸಿಪಿಎಸ್‌ಪಿ-ಶರದ್‌ಚಂದ್ರಪವಾರ್: 8, ಶಿವಸೇನಾ-ಎಸ್‌ಹೆಚ್‌ಎಸ್: 7, ಲೋಕ್ ಜನಶಕ್ತಿ ಪಕ್ಷ-ರಾಮ್ ವಿಲಾಸ್: 5, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ-YSRCP: 4, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 4, ಕಮ್ಯುನಿಷ್ಟ ಪಾರ್ಟಿ ಇನ್ ಇಂಡಿಯಾ-ಸಿಪಿಐ (ಎಂ): 4,
ಸರ್ಕಾರ ರಚನೆ ಕಸರತ್ತು : ಸಂಜೆ ಉಭಯ ಮೈತ್ರಿಕೂಟಗಳ ಪ್ರತ್ಯೇಕ ಸಭೆ: ಬೆಂಬಲ ಪತ್ರ ನೀಡಲಿರುವ ಮಿತ್ರಪಕ್ಷಗಳು
ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್, ಆಮ್ ಆದ್ಮಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಪಕ್ಷೇತರರು ಏಳು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ.
ಜನತಾದಳ (ಎಸ್), ಸಿಪಿಐ (ಎಂಎಲ್) (ಎಲ್), ವಿದುಥಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ), ರಾಷ್ಟ್ರೀಯ ಲೋಕದಳ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
ಪಿಎಂ ಮೋದಿ, ಎನ್‌ಡಿಎ ಕೂಟಕ್ಕೆ ಪ್ರಧಾನಿ ಮೆಲೋನಿ ಸೇರಿದಂತೆ ವಿದೇಶಿ ಗಣ್ಯರ ಶುಭಾಶಯ
ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್, ಅಸೋಂ ಗಾನಾ ಪರಿಷದ್, ಹಿಂದೂಸ್ತಾನಿ ಆವಂ ಮೋರ್ಚಾ, ಕೇರಳ ಕಾಂಗ್ರೆಸ್, ರೆವ್ಯುಲಷನರಿ ಸೋಶಿಯಲಿಸ್ಟ್ ಪಾರ್ಟಿ, ನ್ಯಾಷನಲ್ ಕಾಂಗ್ರೆಸ್ ಪಾರ್ಟಿ, ವಾಯ್ಸ್ ಆಫ್ ದಿ ಪೀಪಲ್ನ ಪಾರ್ಟಿ, ಜೋರಮ್ ಪೀಪಲ್ಸ್ ಮೂವಮೆಂಟ್, ಶಿರೋಮಣಿ ಅಕಾಲಿದಳ, ರಾಷ್ಟ್ರೀಯ ಲೋಕತಂತ್ರಿಕ ಪಕ್ಷ, ಭಾರತ ಆದಿವಾಸಿ ಪಾರ್ಟಿ, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ - ಎಂಡಿಎಂಕೆ, ಅಜಾದ್ ಸಮಾಜ್ ಪಾರ್ಟಿ, ಅಪ್ನಾಮ ದಳ, ಎಜೆಎಸ್‌ಯು, ಎಐಎಂಐಎಂ ತಲಾ ಒಂದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿವೆ.