ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಕುರಿತು ಸುಳ್ಳು ಸುದ್ದಿ ಭಾರಿ ಗೊಂದಲ ಸೃಷ್ಟಿಸಿತ್ತು. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಇದೇ ಸಾವಿನ ಸುದ್ದಿಯನ್ನು ಟ್ವೀಟ್ ಮಾಡಿ ಬಳಿಕ ಕ್ಷಮೆ ಕೇಳಿದ್ದರು. ಸುಳ್ಳು ಸುದ್ದಿ ಕುರಿತು ಸ್ಪಷ್ಟನೆ ನೀಡಿದ್ ಸುಮಿತ್ರ ಇದೀಗ ಈ ರೀತಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ನವದೆಹಲಿ(ಏ.24): ಕೊರೋನಾ ವೈರಸ್ ಕಾರಣ ಹೊರಗೆಲ್ಲೂ ಕಾಣಿಸಿಕೊಳ್ಳದೆ ಮನೆಯೊಳಗೆ ಆರಾಮಾಗಿದ್ದ ಮಾಜಿ ಲೋಕಸಭಾ ಸ್ಪೀಕರ್ ಇತ್ತೀಚೆಗೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಕುಟುಂಬಸ್ಥರು, ಆಪ್ತರು, ಜನ ನಾಯಕರು ಸತತ ಕರೆಗಳನ್ನು ಮಾಡಿದ್ದರು. ಈ ವೇಳೆ ಸುಮಿತ್ರಾ ಮಹಾಜನ್ ಕುರಿತು ಸುಳ್ಳು ಸುದ್ದಿ ಹರಿದಾಡಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸುಮಿತ್ರಾ ಮಹಾಜನ್ ಸ್ಪಷ್ಟನೆ ನೀಡಿದ್ದರು. ಪ್ರಕರಣ ಇಲ್ಲಿಗೆ ಅಂತ್ಯವಾಗಲಿಲ್ಲ. ಇದೀಗ ಸುಮಿತ್ರ ಮಹಾಜನ್ ಈ ರೀತಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಷ್ಟ್ರಕ್ಕೆ ನಾವೇನು ಮಾಡಬೇಕೆಂದು ಧರ್ಮ ಕಲಿಸುತ್ತದೆ: ಸುಮಿತ್ರಾ ಮಹಾಜನ್.

ಈ ರಿತಿ ಸುಳ್ಳು ಸುದ್ದಿ ಹರಡೋ ಮೂಲಕ ಜನರಲ್ಲಿ ಗೊಂದಲ ಹಾಗೂ ಭಯದ ವಾತಾವರಣ ಸೃಷ್ಟಿಸುವವರ ಕುರಿತು ಕೇಂದ್ರ ಸರ್ಕಾರ ಹಾಗೂ ಲೋಕಸಭಾ ಸ್ವೀಕರ್ ಒಮ್ ಬಿರ್ಲಾ ಚಿತ್ತ ಹರಿಸಬೇಕು ಎಂದು ಸುಮಿತ್ರ ಮಹಾಜನ್ ಹೇಳಿದ್ದಾರೆ. ಜನರು ಯಾವುದೇ ಖಚಿತತೆ, ದೃಢೀಕರಣ ಇಲ್ಲದೆ ಸುಳ್ಳು ಸುದ್ದಿ ಹರಡಿದ್ದಾರೆ. ಕನಿಷ್ಠ ಇಂದೋರ್ ಜಿಲ್ಲಾಡಳಿತ ಬಳಿಕ ಈ ಕುರಿತು ಖಚಿತ ಪಡಿಸಿ ಮುಂದುವರಿಯಬೇಕಿತ್ತು ಎಂದು ಸುಮಿತ್ರಾ ಹೇಳಿದ್ದಾರೆ.

ಕೆಲ ಜನನಾಯಕರು ಹಾಗೂ ಮುಂಬೈನ ಸುದ್ದಿ ವಾಹಿನಿಗಳು ಯಾವುದೇ ಮಾಹಿತಿ ಇಲ್ಲದೆ ಈ ರೀತಿ ಸುಳ್ಳು ಸುದ್ದಿ ಯಾಕೆ ಹರಡಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಸಮಿತ್ರ ಮಹಾಜನ್ ಹೇಳಿದ್ದಾರೆ. 

Scroll to load tweet…

ಏಪ್ರಿಲ್ 22ರಂದು ಹಲವು ಜನಪ್ರತಿನಿದಿಗಳು, ಕಾಂಗ್ರೆಸ್ ನಾಯಕ ಶಶಿ ತರೂರ್ ಸುಮಿತ್ರಾ ಮಹಜಾನ್ ಸಾವಿನ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಸುಮಿತ್ರಾ ಮಹಾಜನ್ ಸ್ಪಷ್ಟನೆ ನೀಡಿದ್ದರು. ಯಾವುದೇ ಖಚಿತತೆ ಇಲ್ಲದೆ ಸುಳ್ಳು ಸುದ್ದಿಯನ್ನು ಹರಡುವ ಅವಶ್ಯಕತೆ ಹಾಗೂ ಆತುರ ಏನಿತ್ತು ಎಂದು ತರೂರ್ ಹಾಗೂ ಇತರರಿಗೆ ಪ್ರಶ್ನಿಸಿದ್ದರು.