Asianet Suvarna News Asianet Suvarna News

ಬಿಜೆಪಿ ಜಯ ನಿರೀಕ್ಷೆ: ಇಂದು ಷೇರುಪೇಟೆ ಭರ್ಜರಿ ಏರಿಕೆ ಸಾಧ್ಯತೆ!

ಪ್ರಸಕ್ತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರೀ ಬಹುಮತಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷಾ ವರದಿಗಳು ಷೇರುಪೇಟೆಗೆ ಭರ್ಜರಿ ಬಲ ತುಂಬುವ ಸಾಧ್ಯತೆ ಇದೆ.

Lok Sabha Election Results 2024  Expectation of BJP victory today rise in the stock market rav
Author
First Published Jun 3, 2024, 6:10 AM IST | Last Updated Jun 3, 2024, 6:10 AM IST

ಮುಂಬೈ (ಜೂ.3): ಪ್ರಸಕ್ತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಭಾರೀ ಬಹುಮತಗಳಿಸಲಿದೆ ಎಂಬ ಚುನಾವಣೋತ್ತರ ಸಮೀಕ್ಷಾ ವರದಿಗಳು ಷೇರುಪೇಟೆಗೆ ಭರ್ಜರಿ ಬಲ ತುಂಬುವ ಸಾಧ್ಯತೆ ಇದೆ. ಸೋಮವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಎರಡೂ ಭಾರೀ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟುವ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈಗಾಗಳೇ ಸೆನ್ಸೆಕ್ಸ್‌ 76 ಸಾವಿರದ ಗಡಿ ತಲುಪಿತ್ತು. ಇದು ಜೂ.4ರಂದು ಬಿಜೆಪಿ ಗೆದ್ದರೆ 80 ಸಾವಿರದವರೆಗೆ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ರಾಹುಲ್ ಗಾಂಧಿ ಸೇರಿ ಇಂಡಿಯಾ ಕೂಟ ಚುನಾವಣೋತ್ತರ ಸಮೀಕ್ಷೆ ತಿರಸ್ಕರಿಸಿದ್ದು ಏಕೆ?

ಚುನಾವಣೆ ವೇಳೆ, ‘ಕೆಲವು ರಾಜ್ಯಗಳಲ್ಲಿ ಕಂಡುಬಂದ ತುರುಸಿನ ಸ್ಪರ್ಧೆ ಏರ್ಪಟ್ಟಿದೆ’ ಎಂಬ ಅಂಶ ಮತ್ತು ‘ಮತದಾನ ಪ್ರಮಾಣದಲ್ಲಿನ ಇಳಿಕೆಯಿಂದ ಬಿಜೆಪಿ ಮತ್ತು ಎನ್‌ಡಿಎ ನಿರೀಕ್ಷಿತ ಸ್ಥಾನ ಪಡೆಯದೇ ಹೋಗಬಹುದು’ ಎಂಬ ಆತಂಕವು ಷೇರುಪೇಟೆ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಷೇರುಪೇಟೆಯಲ್ಲಿ ಭಾರೀ ಏರಿಳಿಕೆ ಕಂಡುಬಂದಿತ್ತು.

MLC Election 2024: ಇಂದು ಮೇಲ್ಮನೆ 6 ಸ್ಥಾನಕ್ಕೆ ಮತದಾನ

ಆದರೆ ಇದೀಗ ಬಿಜೆಪಿ ಸ್ಪಷ್ಟ ಬಹುತಮದೊಂದಿಗೆ ಆಯ್ಕೆಯಾಗುವ ಸಾಧ್ಯತೆಯು, ಹೊಸ ಸರ್ಕಾರ ಆರ್ಥಿಕತೆಗೆ ಚೇತರಿಕೆ ನೀಡಬಲ್ಲ ಕ್ರಮಗಳನ್ನು ಅನುವು ಮಾಡಿಕೊಡಲಿದೆ ಎಂಬ ಖಚಿತ ನಂಬಿಕೆಗೆ ಕಾರಣವಾಗಿದೆ. ಹೀಗಾಗಿ ಮುಂದಿನ 2- 3 ದಿನಗಳ ಕಾಲ ಸೂಚ್ಯಂಕ ಭಾರೀ ಏರಿಕೆ ಕಾಣುವ ನಿರೀಕ್ಷೆ ಇದೆ.

Latest Videos
Follow Us:
Download App:
  • android
  • ios