ಈಗ ಲೋಕಸಭಾ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು? ಸಮೀಕ್ಷೆ ಹೇಳೋದೀಗೆ..

ಸಮೀಕ್ಷೆ ಅನ್ವಯ ಎನ್‌ಡಿಎ ಮೈತ್ರಿಕೂಟ 307 ಸ್ಥಾನ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 175 ಸ್ಥಾನ ಮತ್ತು ಇತರರು 52 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ.

lok sabha election 2024 times now etg survey nda will come to power again by defeating india alliance ash

ನವದೆಹಲಿ (ಅಕ್ಟೋಬರ್ 3, 2023): 2024ರ ಲೋಕಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳು ಸಜ್ಜಾಗಿರುವ ಹೊತ್ತಲ್ಲೇ ಇದೀಗ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಪ್ರಬಲ ಸ್ಪರ್ಧೆ ನೀಡಿದರೂ ಅಧಿಕಾರಕ್ಕೆ ಮರಳುವಲ್ಲಿ ವಿಫಲವಾಗಲಿದೆ ಎಂದು ಟೈಮ್ಸ್‌ ನೌ - ಇಟಿಜಿ ರಿಸರ್ಚ್ಸ್‌ ಸಮೀಕ್ಷಾ ವರದಿ ಹೇಳಿದೆ. 

ಸಮೀಕ್ಷೆ ಅನ್ವಯ ಎನ್‌ಡಿಎ ಮೈತ್ರಿಕೂಟ 307 ಸ್ಥಾನ, ವಿಪಕ್ಷಗಳ ಇಂಡಿಯಾ ಮೈತ್ರಿಕೂಟ 175 ಸ್ಥಾನ ಮತ್ತು ಇತರರು 52 ಸ್ಥಾನಗಳಲ್ಲಿ ಜಯ ಗಳಿಸಲಿದ್ದಾರೆ. ಜೊತೆಗೆ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮುನ್ನಡೆ ಗಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ. ಲೋಕಸಬೆ ಚುನಾವಣೆಗೆ ಬಹುತೇಕ 5 ತಿಂಗಳು ಬಾಕಿ ಇದ್ದು, ಸತತ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿರುವುದು ಖಚಿತ ಎಂದೂ ಟೈಮ್ಸ್‌ ನೌ - ಇಟಿಜಿ ರಿಸರ್ಚ್ಸ್‌ ಸಮೀಕ್ಷೆ ಹೇಳಿದೆ. 

ಇದನ್ನು ಓದಿ: ಜಾತಿ ಆಧಾರದಲ್ಲಿ ದೇಶ ವಿಭಜನೆಗೆ ಯತ್ನ: ಬಿಹಾರ ಜಾತಿ ಸಮೀಕ್ಷೆ ಬಿಡುಗಡೆ ಬೆನ್ನಲ್ಲೇ ಮೋದಿ ಸಿಡಿಮಿಡಿ

ಕರ್ನಾಟಕದಲ್ಲಿ ಬಿಜೆಪಿಗೆ 20 ಸ್ಥಾನ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 18 - 20 ಸ್ಥಾನಗಳಲ್ಲಿ ಜಯಗಳಿಸಲಿದೆ. ಕಾಂಗ್ರೆಸ್‌ 3 ರಿಂದ 9 ಸ್ಥಾನಗಳಲ್ಲಿ ಮತ್ತು ಜೆಡಿಎಸ್ 1 - 2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅಲ್ಲದೇ, ಬಿಜೆಪಿ ಶೇ. 46.1, ಕಾಂಗ್ರೆಸ್‌ 41.9, ಜೆಡಿಎಸ್‌ ಶೇ. 7.2 ಮತ್ತು ಇತರರು ಶೇ. 4.8 ರಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 

ಇದನ್ನು ಓದಿ: ಮೋದಿ ಕರೆಗೆ ಒಗ್ಗೂಡಿದ ಜನತೆ: ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ; ಆಂದೋಲನದಲ್ಲಿ ಭಾಗಿಯಾದ ಪ್ರಧಾನಿ

Latest Videos
Follow Us:
Download App:
  • android
  • ios