ದೇಶವನ್ನೇ ಕತ್ತಲಲ್ಲಿಟ್ಟ ಇಂದಿರಾ ನಮ್ಮನ್ನೂ ಜೈಲಿಗೆ ಹಾಕಿದ್ದರು, ರಾಹುಲ್ ಗಾಂಧಿಗೆ ಪಿಣರಾಯಿ ತಿರುಗೇಟು!

ನಿಮ್ಮ ಅಜ್ಜಿ ಇಂದಿರಾ ಗಾಂಧಿ ದೇಶವನ್ನೇ ಕತ್ತಲಲ್ಲಿಟ್ಟಿದ್ದರು. ಈ ವೇಳೆ ನಮ್ಮನ್ನೂ ಒಂದೂವರೆ ವರ್ಷ ಜೈಲಿಗಟ್ಟಿದ್ದರು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್, ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ಇಂಡಿಯಾ ಒಕ್ಕೂಟದಲ್ಲಿರುವ ಈ ಪಕ್ಷಗಳು ಕೇರಳದಲ್ಲಿ ಮಾತ್ರ ಕಚ್ಟಾಟ ತೀವ್ರಗೊಳಿಸಿದೆ.
 

Indira Gandhi jailed us more than 1 year Kerala CM Pinarayi Vijayan slams Rahul Gandhi ckm

ತಿರುವನಂತಪುರಂ(ಏ.19) ಲೋಕಸಭಾ ಚುನಾವಣೆ ವಾಕ್ಸಮರ ಜೋರಾಗಿದೆ. ಒಂದೆಡೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಮತ್ತೊಂದೆಡೆ ನಾಯಕರು ವಾಗ್ವಾದಗಳು ಹೆಚ್ಚಾಗಿದೆ. ಇಡೀ ದೇಶದಲ್ಲಿ ಇಂಡಿಯಾ ಒಕ್ಕೂಟ ಮಾಡಿಕೊಂಡಿರುವ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಡುತ್ತಿದೆ. ಆದರೆ ಆದರೆ ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಬದ್ಧವೈರಿಗಳು. ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದ ರಾಹುಲ್ ಗಾಂಧಿಗೆ ಇದೀಗ ತಿರುಗೇಟು ನೀಡಲಾಗಿದೆ. ನಿಮ್ಮ ಅಜ್ಜಿ ಇಂದಿರಾ ಗಾಂಧಿ ನಮ್ಮನ್ನು ಒಂದೂವರೆ ವರ್ಷ ಜೈಲಿಗಟ್ಟಿದ್ದರು. ಇಡೀ ದೇಶವನ್ನೇ ಕತ್ತಲಲ್ಲಿ ಇಟ್ಟಿದ್ದರು ಎಂದು ಪಿಣರಾಯಿ ವಿಜಯನ್ ತುರ್ತು ಪರಿಸ್ಥಿತಿಯನ್ನು ರಾಹುಲ್ ಗಾಂಧಿಗೆ ನೆನಪಿಸಿದ್ದಾರೆ.

ದೇಶದಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ, ಬಿಜೆಪಿಯನ್ನು ಪ್ರಶ್ನಿಸುತ್ತಿದೆ. ಹೀಗೆ ಪ್ರಶ್ನಿಸಿದ ಮುಖ್ಯಮಂತ್ರಿಗಳು ಜೈಲು ಸೇರುತ್ತಿದ್ದಾರೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಕೇಂದ್ರ ಸರ್ಕಾರ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇತ್ತ ಪಿಣರಾಯಿ ವಿಜಯನ್ ಕೂಡ ಮೋದಿಯನ್ನು ಪ್ರಶ್ನಿಸುತ್ತಿಲ್ಲ. ಕಾರಣ ಪಿಣರಾಯಿ ಪುತ್ರಿಯ ಹಗರಣ, ಚಿನ್ನದ ಹಗರಣಗಳು ಎಲ್ಲಿ ಕುಣಿಕೆಯಾಗುತ್ತೋ ಅನ್ನೋ ಭಯ ಪಿಣರಾಯಿ ವಿಜಯನ್‌ಗೆ ಇದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ರಾಹುಲ್‌ ಗಾಂಧಿ ಮುಂದಿನ ಪ್ರಧಾನಮಂತ್ರಿ: ಜಮೀರ್ ಅಹಮ್ಮದ್

ಕಣ್ಣೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ರಾಹುಲ್ ಗಾಂಧಿ ಮಾಡಿದ ಆರೋಪಕ್ಕೆ ಇದೀಗ ಪಿಣರಾಯಿ ವಿಜಯನ್ ಕೋಝಿಕೋಡ್‌ನಲ್ಲಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ಕೇರಳ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಬಿಜೆಪಿ ಕ್ರಮ ಕೈಗೊಂಡಿಲ್ಲ ಯಾಕೆ ಅನ್ನೋ ಕುರಿತು ಚಿಂತೆಯಾಗಿದೆ. ಆದರೆ ನಾನಿನಲ್ಲಿ ರಾಹುಲ್ ಗಾಂಧಿಗೆ ನೆನಪಿಸಲು ಬಯಸುತ್ತಿರುವುದು ನಿಮ್ಮ ಅಜ್ಜಿ ಇಂದಿರಾ ಗಾಂಧಿ ನಮ್ಮನ್ನು ಒಂದೂವರೆ ವರ್ಷ ಜೈಲಿಗಟ್ಟಿದ್ದರು. ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿ ವೇಳೆ ಇಡೀ ದೇಶವನ್ನೇ ಕತ್ತಲಲ್ಲಿ ಇಟ್ಟಿದ್ದರು ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ನಡುವಿನ ಜಿದ್ದಾಟ ಹೆಚ್ಚಾಗುತ್ತಿದೆ. ಲೋಕಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಈ ಬಾರಿ ಬಿಜೆಪಿ ಕೂಡ ಹಲವು ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆ ನೀಡುತ್ತಿದೆ. ಹೀಗಾಗಿ ಸಿಪಿಎಂ ಹಾಗೂ ಕಾಂಗ್ರೆಸ್ ಹೋರಾಟ ಬಿಜೆಪಿಗೆ ಕೆಲ ಕ್ಷೇತ್ರದಲ್ಲಿ ವರವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಲೋಕಸಭಾ ಚುನಾವಣೆ 2024: ಬಿಜೆಪಿ 150 ಸೀಟು ಗೆಲ್ಲೋದು ಕಷ್ಟ, ರಾಹುಲ್‌ ಗಾಂಧಿ
 

Latest Videos
Follow Us:
Download App:
  • android
  • ios