Asianet Suvarna News Asianet Suvarna News

ಮುಸ್ಲಿಮ್ ಮತ ಬೇಕು, ಅಭ್ಯರ್ಥಿ ಬೇಡ್ವಾ? ಕಾಂಗ್ರೆಸ್ ಪ್ರಶ್ನಿಸಿ ಪ್ರಚಾರ ಸಮಿತಿಗೆ ನಾಯಕ ರಾಜೀನಾಮೆ!

ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಮತಗಳು ಬೇಕು, ಆದರೆ ಮುಸ್ಲಿಮ್ ಅಭ್ಯರ್ಥಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲವೇ? ಎಂದು ಮಲ್ಲಿಕಾರ್ಜುನ್ ಖರ್ಗೆಯನ್ನೇ ಪ್ರಶ್ನಿಸಿದ ಪ್ರಮುಖ ನಾಯಕ ಪ್ರಚಾರ ಸಮಿತಿ ಸಭೆಗೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.
 

Lok Sabha Election 2024 Maharashtra congress Muslim leader resign from campaign committee ckm
Author
First Published Apr 27, 2024, 3:29 PM IST

ನವದೆಹಲಿ(ಏ.27) ಲೋಕಸಭೆ ಚುನಾವಣೆ ಜಿದ್ದಾಜಿದ್ದಿ ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಈಗಾಗಲೇ 2 ಹಂತದ ಮತದಾನ ಮುಕ್ತಾಯಗೊಂಡಿದೆ. ಬಾಕಿ ಉಳಿದ 5 ಹಂತದ ಮತದಾನದ ಕ್ಷೇತ್ರಗಳಲ್ಲಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಇದರ ನಡುೆ ಕಾಂಗ್ರೆಸ್‌ಗೆ ತಲೆನೋವು ಎದುರಾಗಿದೆ. ಕಾಂಗ್ರೆಸ್ ವಿರುದ್ದ ಮುಸ್ಲಿಮ್ ಸಮುದಾಯ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್‌ಗೆ ಮುಸ್ಲಿಮ್ ಮತಗಳು ಮಾತ್ರ ಬೇಕು, ಆದರೆ ಮುಸ್ಲಿಮ್ ಅಭ್ಯರ್ಥಿಗಳು ಬೇಡ, ಇದೆಲ್ಲಿಯ ನ್ಯಾಯ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಮೊಹಮ್ಮದ್ ಆರೀಫ್ ನಸೀಮ್ ಖಾನ್ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನೇ ಪ್ರಶ್ನಿಸಿರುವ ಆರೀಫ್, ಕಾಂಗ್ರೆಸ್ ಪ್ರಚಾರ ಸಮಿತಿಯಿಗೆ ರಾಜೀನಾಮೆ ನೀಡಿದ್ದಾರೆ.

Joshi on Congress: 4 ಪರ್ಸೆಂಟ್ ಮುಸ್ಲಿಮರನ್ನು ಒಬಿಸಿಗೆ ಸೇರಿಸಲು ಕಾಂಗ್ರೆಸ್‌ ಹೊರಟಿದೆ: ಪ್ರಲ್ಹಾದ್ ಜೋಶಿ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನಾ(ಉದ್ಧವ್ ಬಣ) ಹಾಗೂ ಎನ್‌ಸಿಪಿ(ಶರದ್ ಪವಾರ್ ಬಣ) ಮಹಾ ವಿಕಾಸ್ ಆಘಾಡಿ ಮೈತ್ರಿಯಲ್ಲಿದೆ. 48 ಲೋಕಸಭಾ ಸ್ಥಾನಗಳನ್ನು ಮೂರು ಪಕ್ಷಗಳು ಬಲಾಬಲದ ಆಧಾರದಲ್ಲಿ ಹಂಚಿಕೊಂಡು ಸ್ಪರ್ಧಿಸುತ್ತಿದೆ. ಆದರೆ 48 ಕ್ಷೇತ್ರದಿಂದಲೂ ಮಹಾ ವಿಕಾಸ್ ಅಘಾಡಿ ಒಬ್ಬನೇ ಒಬ್ಬ ಮುಸ್ಲಿಮ್ ನಾಯಕನಿಗೆ ಟಿಕೆಟ್ ನೀಡಿಲ್ಲ ಎಂದು ಮೊಹಮ್ಮದ್ ಆರೀಫ್ ನಸೀಮ್ ಖಾನ್ ಪ್ರಶ್ನಿಸಿದ್ದಾರೆ. ಇದೇ ವೇಳೆ ಲೋಕಸಭೆ ಚುನಾವಣೆಗೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದಿಲ್ಲ ಎಂದು ಪ್ರಚಾರ ಸಮಿತಿಗೂ ರಾಜೀನಾಮೆ ನೀಡಿದ್ದಾರೆ. 

ಅಸಮಾಧಾನಗೊಂಡಿರುವ ಆರೀಫ್ ನಸೀಮ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿದ್ದಾರೆ.  ಮಹಾ ವಿಕಾಸ್ ಅಘಾಡಿ ಮುಸ್ಲಿಮ್ ನಾಯಕರಿಗೆ ಮತ ನೀಡಿಲ್ಲ. ಕಾಂಗ್ರೆಸ್ ಎಲ್ಲಾ ಸಮುದಾಯಗಳನ್ನು ಸಮನಾಗಿ ನೋಡುತ್ತದೆ ಎಂದು ಹೇಳಿಕೆ ನೀಡಿ, ಮುಸ್ಲಿಮ್ ಸಮುದಾಯಕ್ಕೆ ಒಂದು ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಮತಗಳು ಮಾತ್ರ ಬೇಕು, ಮುಸ್ಲಿಮ್ ಅಭ್ಯರ್ಥಿ ಬೇಡವೇ? ಎಂದು ಆರೀಫ್ ಪತ್ರದಲ್ಲಿ ಖರ್ಗೆಯನ್ನು ಪ್ರಶ್ನಿಸಿದ್ದಾರೆ.

Reddy VS Tangadagi: ಮೋದಿ ಅಂದ್ರೆ ಶಿವರಾಜ್‌ ತಂಗಡಗಿ ಕಿವಿಯಲ್ಲಿ ಮುಳ್ಳು ಚುಚ್ಚಿದಂತಾಗುತ್ತೆ:ಜನಾರ್ದನ ರೆಡ್ಡಿ

ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರೀಫ್‌ ಟಿಕೆಟ್ ಕೈತಪ್ಪಿರುವುದು ಭಾರಿ ನಿರಾಸೆಯಾಗಿದೆ. ಇತ್ತ ಮುಸ್ಲಿಮ್ ಸಮುದಾಯ ಈ ಕುರಿತು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮ ಸಮುದಾಯಕ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಚುನಾವಣೆಯಲ್ಲಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸಮುದಾಯದ ನಾಯಕರು ಇರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಂದಾಳತ್ವ ವಹಿಸಬೇಕಿತ್ತು ಎಂದು ಆರೀಫ್ ಆರೋಪಿಸಿದ್ದಾರೆ.

Follow Us:
Download App:
  • android
  • ios