Asianet Suvarna News Asianet Suvarna News

ಫೆ.29ಕ್ಕೆ ಬಿಜೆಪಿಯ 100 ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ!

ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ಇಂಡಿಯಾ ಮೈತ್ರಿಯಲ್ಲಿ ಸೀಟು ಹಂಚಿಕೆ ಮಾತುಕತೆಯಗಳು ಯಶಸ್ವಿಯಾಗುವತ್ತಾ ಸಾಗುತ್ತಿದೆ. ಇತ್ತ ಬಿಜೆಪಿ ಫೆ.29ಕ್ಕೆ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತಯಾರಿ ಮಾಡಿದೆ.

Lok sabha Election 2024 BJP Likely to announce 100 candidate list on feb 29th ckm
Author
First Published Feb 24, 2024, 9:12 PM IST

ನವದೆಹಲಿ(ಫೆ.24) ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇಂಡಿಯಾ ಮೈತ್ರಿ ಮತ್ತೆ ಹೊಸ ಹುರುಪಿನಲ್ಲಿ ಸಾಗುತ್ತಿದೆ. ಇತ್ತ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದೊಂದಿಗೆ ಅಖಾಡಕ್ಕಿಳಿದಿದೆ. ಇದೀಗ ಬಿಜೆಪಿ ಫೆಬ್ರವರಿ 29ಕ್ಕೆ ಲೋಕಸಭಾ ಚುನಾವಣೆಗೆ 100 ಅಭ್ಯರ್ಥಿಗಳ ಹೆಸರು ಘೋಷಿಸಲು ಬಿಜೆಪಿ ಮುಂದಾಗಿದೆ. ಫೆ.29ಕ್ಕೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಸೇರುತ್ತಿದೆ. ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳಿಂದ 100 ಅಭ್ಯರ್ಥಿಗಳ ಹೆಸರು ಘೋಷಿಸಲು ಪಟ್ಟಿ ಸಜ್ಜಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಹೆಸರು ಕೂಡ ಈ ಪಟ್ಟಿಯಲ್ಲಿರುವ ಸಾಧ್ಯತೆ ಇದೆ.

2024ರ ಲೋಕಸಭಾ ಚುನಾವಣೆಗೆ ಎನ್‌ಡಿಎ ಕೂಟ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ಅಭಿಯಾನ ಆರಂಭಿಸಿದೆ. ಇದರಲ್ಲಿ ಬಿಜೆಪಿ ಏಕಾಂಗಿಯಾಗಿ 370 ಸ್ಥಾನ ಗೆಲ್ಲಲಿದೆ ಎಂದಿದೆ. 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಈಗಾಗಲೋ ಘೋಷಣೆ ಮಾಡಿದೆ. 

ಇದು ಯಾವ ಭಾಷೆ? ನಶೆಯಲ್ಲಿದ್ದಾರೆ ಯುಪಿ ಯುವ ಸಮೂಹ ಅನ್ನೋ ರಾಹುಲ್ ಮಾತಿಗೆ ಮೋದಿ ಗರಂ!

ಪ್ರಧಾನಿ ನರೇಂದ್ರ ಮೋದಿ 2014 ಹಾಗೂ 2019ರಲ್ಲಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿ ದಾಖಲೆಯ ಗೆಲುವು ಕಂಡಿದ್ದಾರೆ. 2014ರಲ್ಲಿ ಮೋದಿಗೆ 3.37 ಲಕ್ಷ ಮತಗಳನ್ನು ಪಡೆದಿದ್ದರೆ, 2019ರಲ್ಲಿ 4.8 ಲಕ್ಷ ಮತಗಳನ್ನು ಪಡೆದಿದ್ದರು. ಅಮಿತ್ ಶಾ 2019ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಈ ಕ್ಷೇತ್ರ ಬಿಜೆಪಿ ಭೀಷ್ಮ ಎಲ್‌ಕೆ ಅಡ್ವಾಣಿಯ ಕ್ಷೇತ್ರವಾಗಿತ್ತು. ಅಡ್ವಾಣಿ ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಈ ಕ್ಷೇತ್ರದಿಂದ ಸ್ಪರ್ಧಿಸಿ ದಾಖಲೆ ಬರೆದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಎಲ್ಲಾ ಪಕ್ಷಗಳಿಗ ಅತ್ಯಂತ ಮುಖ್ಯವಾಗಿದೆ. 80 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ಬಿಜೆಪಿ 62 ಸ್ಥಾನ ಗೆದ್ದು ದಾಖಲೆ ಬರೆದಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಬಿಜೆಪಿಯದ್ದಾಗಿದೆ. ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ, ಆಯೋಧ್ಯೆ ರಾಮ ಮಂದಿರ ಸೇರಿದಂತೆ ಹಲವು ಪ್ರಮುಖ ವಿಷಯಗಳು ಬಿಜೆಪಿ ಬತ್ತಳಿಕೆಯಲ್ಲಿದೆ. ಇತ್ತ ಇಂಡಿಯಾ ಮೈತ್ರಿ ಒಕ್ಕೂಟದಲ್ಲಿ ಪಾಲುದಾರರಾಗಿರುವ ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಒಗ್ಗಟ್ಟಾಗಿ ಆಖಾಡಕ್ಕಿಳಿದಿದೆ. ಹೀಗಾಗಿ ತೀವ್ರ ಸ್ಪರ್ಧೆ ಎರ್ಪಡಲಿದೆ.

ಮಾ.13ರ ಬಳಿಕ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ, ಸುಗಮ ಮತದಾನಕ್ಕೆ AI ಬಳಕೆ!

Follow Us:
Download App:
  • android
  • ios