Asianet Suvarna News Asianet Suvarna News

ಮತದಾರರಿಗೆ ಪಕ್ಷದ ಹೆಸರಿನ ಕಾಂಡೋಮ್ ಪ್ಯಾಕ್ ವಿತರಣೆ , ವಯಾಗ್ರಾ ಯಾವಾಗ ಎಂದ ಜನ?

ಲೋಕಸಭಾ ಚುನಾವಣೆಗೆ ಪ್ರಚಾರ ಆರಂಭಗೊಂಡಿದೆ. ಪಕ್ಷಗಳು ಮತದಾರರನ್ನು ಒಲೈಸಲು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಮತದಾರರಿಗೆ ಪಕ್ಷದ ಚಿಹ್ನೆ, ಹೆಸರು ಇರುವ ಕಾಂಡೋಮ್‌ಗಳನ್ನು ವಿತರಿಸಲಾಗಿದೆ. ರಾಜಕೀಯಕ್ಕೂ ಕಾಂಡೋಮ್‌ಗೂ ಏನು ಸಂಬಂಧ? ಎಂದು ಜನ ಪ್ರಶ್ನಿಸುತ್ತಿದ್ದಾರೆ.

Lok Sabha Election 2024 Andhra Pradesh Political parties distribute Condom pack with party symbol sparks row ckm
Author
First Published Feb 22, 2024, 4:23 PM IST

ಅಮರಾವತಿ(ಫೆ.22) ಲೋಕಸಭಾ ಚುನಾವಣೆಗೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಈಗಾಗಲೇ ಪಕ್ಷಗಳು ಮತದಾರರನ್ನು ಒಲೈಸಲು ಸೀಕ್ರೆಟ್ ಉಡುಗೊರೆ ಸೇರಿದಂತೆ ಹಲವು ಕಸರತ್ತು ಮಾಡುತ್ತಿದ್ದಾರೆ. ಕುಕ್ಕರ್, ಅಕ್ಕಿ, ಬೇಳೆ ಕಾಳು, ಮೊಬೈಲ್, ಶಾಪಿಂಗ್ ಕೂಪನ್, ಹಣ ಸೇರಿದಂತೆ ಹಲವು ರೀತಿ ಉಡುಗೊರೆಗಳು ಸಾಮಾನ್ಯ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿಹ್ನೆ, ಹೆಸರು ಇರುವ ಕಾಂಡೋಮ್ ಪ್ಯಾಕೆಟ್‌ಗಳು ಮತದಾರರಿಗೆ ಹಂಚಿದ್ದಾರೆ. ಆಂಧ್ರ ಪ್ರದೇಶದ ಆಡಳಿತರೂಡ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ಈ ರೀತಿಯ ಹೊಸ ಪ್ರಚಾರ ಆರಂಭಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ.

ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪ್ರಮುಖ ವಿಪಕ್ಷ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಯ ನಾಯಕರು ತಮ್ಮ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಕಾಂಡೋಮ್ ಪ್ಯಾಕೆಟ್‌ಗಳನ್ನು ಹಂಚಿದ್ದಾರೆ. ಈ ಕಾಂಡೋಮ್ ಪ್ಯಾಕ್‌ಗಳಲ್ಲಿ ವೈಎಸ್‌ಆರ್ ಕಾಂಗ್ರೆಸ್ ಹಾಗೂ ಪ್ರಮುಖ ವಿಪಕ್ಷ ತೆಲುಗು ದೇಶಂ ಪಾರ್ಟಿಯ ಹೆಸರು ಚಿಹ್ನೆಗಳನ್ನು ಬಳಸಲಾಗಿದೆ. 

 

ಪಾಕ್ ಚುನಾವಣೆ ಫಲಿತಾಂಶ ಸಂಭ್ರಮದಲ್ಲಿ ಬಲೂನ್ ಬದಲು ಕಾಂಡೋಮ್ ಬಳಕೆ, ವಿಡಿಯೋ ವೈರಲ್!

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮತದಾರರಿಗೆ ಪಕ್ಷದ ಚಿಹ್ನೆಯ ಕಾಂಡೋಮ್ ಹಂಚುತ್ತಿದೆ ಎಂದು ಆರೋಪಿಸಿ ಕೆಲ ವಿಡಿಯೋಗಳನ್ನು ಹಂಚಿಕೊಂಡಿದೆ. ಇತ್ತ  ಟಿಡಿಪಿ ನಾಯಕರು ವೈಎಸ್‌ಆರ್ ಕಾಂಗ್ರೆಸ್ ಚಿಹ್ನೆ, ಹೆಸರು ಇರುವ ಕಾಂಡೋಮ್ ಪ್ಯಾಕ್‌ಗಳ ವಿಡಿಯೋವನ್ನು ಹಂಚಿಕೊಂಡು ವೈಎಸ್ಆರ್ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದೆ.

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮತದಾರರ ಒಲೈಸಲು ಕಾಂಡೋಮ್ ವಿತರಣೆ ಸಾಮಾಜಿಕ ಮಾಧ್ಯಮಗಳಲ್ಲಿ ಬಾರ್ ಟ್ರೋಲ್ ಆಗಿದೆ. ಇದು ಚುನಾವಣಾ ಪ್ರಚಾರವೋ ಅಥವಾ ಮೇಳವೋ ಎಂದು ಜನರು ಪ್ರಶ್ನಿಸಿದ್ದಾರೆ. ಕಾಂಡೋಮ್ ಕೊಟ್ಟಾಗಿದೆ, ಇನ್ನು ವಯಾಗ್ರ ನೀಡುತ್ತೀರೋ? ಎಂದು ಹಲವರು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ರಾಜಕೀಯಕ್ಕೂ ಕಾಂಡೋಮ್‌ಗೆ ಎಲ್ಲಿಯ ಸಂಬಂಧ? ಉಚಿತ ಕಾಂಡೋಮ್‌‌ನಿಂದ ಜನ ಮತ ಹಾಕುತ್ತಾರಾ? ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳಿಗೆ ಸ್ಥಳೀಯ ಕೆಲ ನಾಯಕರು ಅಷ್ಟೆ ಖಡಕ್ ಉತ್ತರ ನೀಡಿದ್ದಾರೆ.

ವಿನಯ್ ಬಿದರೆಗೆ ಸಿಗುತ್ತಾ ತುಮಕೂರು ಬಿಜೆಪಿ ಟಿಕೆಟ್..? ಟಿ.ಬಿ.ಜಯಚಂದ್ರ ಸ್ಪರ್ಧೆಗೆ ಒತ್ತಡ ಹಾಕುತ್ತಿರುವ ಸಿಎಂ !

ಇತ್ತೀಚಿನ ದಿನಗಳಲ್ಲಿ ಹಣಹಂಚುವುದು ಸಾಮಾನ್ಯವಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾಗಿಲ್ಲ. ಈಗಲೇ ಹಣ ಹಂಚಿದರೆ ಪ್ರಯೋಜನವಿಲ್ಲ. ಒಂದು ವೇಳೆ ಹಣ ಹಂಚುವ ನಿರ್ಧಾರ ಮಾಡಿದರೆ ಹಿರಿಯರು, ಮತದಾರರು, ಮಕ್ಕಳು ಸೇರಿದಂತೆ ದುಪ್ಪಟ್ಟು ಹಣ ಖರ್ಚಾಗಲಿದೆ. ಕಾಂಡೋಮ್ ಕೇವಲ ವಯಸ್ಕರಿಗೆ ಹಂಚಿದರೆ ಸಾಕು. ಇಷ್ಟೇ ಅಲ್ಲ ನಾವು ಪ್ರಚಾರದ ವೇಳೆ, ಕುಟುಂಬದ ಸುರಕ್ಷತೆ ಕಾಳಜಿ ವಹಿಸಿ ಸುರಕ್ಷತಾ ಕಾಂಡೋಮ್‌ಗಳನ್ನು ವಿತರಿಸಿದ್ದೇವೆ ಎಂದು ಹೇಳಲು ಸಾಧ್ಯ. ಆದರೆ ಕಾಂಡೋಮ್ ಪಡೆದ ಮತದಾರರು ಬಹಿರಂಗವಾಗಿ ಎಲ್ಲಿಯೂ ಹೇಳುವುದಿಲ್ಲ. ಹೀಗಾಗಿ ಹಲವು ಅನುಕೂಲತೆಗಳು ಕಾಂಡೋಮ್‌ನಿಂದ ಇದೆ ಎಂದು ಕೆಲ ನಾಯಕರು ಹೇಳಿದ್ದಾರೆ.
 

Follow Us:
Download App:
  • android
  • ios