ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ: ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!
ದೇಶದ ಅತ್ಯಂತ ಮಲಿನ ನದಿಗಳೆಂದು ಹೆಸರಾಗಿದ್ದ ಗಂಗಾ ಹಾಗೂ ಯಮುನಾ ನದಿಗಳು ಶುದ್ಧ| ಗಂಗಾ ನದಿ ನೀರು ಈಗ ಕುಡಿಯಲು ಯೋಗ್ಯ| ಬರಿಗಣ್ಣಿಗೆ ಕಾಣುತ್ತಿವೆ ಜಲಚರಗಳು!
ವಾರಾಣಸಿ(ಏ14): ದೇಶದ ಅತ್ಯಂತ ಮಲಿನ ನದಿಗಳೆಂದು ಹೆಸರಾಗಿದ್ದ ಗಂಗಾ ಹಾಗೂ ಯಮುನಾ ನದಿಗಳು ಲಾಕ್‌ಡೌನ್‌ನಿಂದಾಗಿ ಸ್ವಚ್ಛವಾಗುತ್ತಿವೆ ಎಂಬ ಇತ್ತೀಚಿನ ವರದಿಗಳ ಬೆನ್ನಲ್ಲೇ ಇದೀಗ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂಬ ಇನ್ನೊಂದು ಅಚ್ಚರಿಯ ವರದಿ ಬಂದಿದೆ.
ತ್ಯಾಜ್ಯ ಹರಿಯುತ್ತಿಲ್ಲ, ಜನರೂ ಬರುತ್ತಿಲ್ಲ: ಗಂಗಾ, ಯಮುನಾ ಕ್ಲೀನ್ ಕ್ಲೀನ್!
ಗಂಗಾ ನದಿಗೆ ತ್ಯಾಜ್ಯವನ್ನು ಹರಿಸುತ್ತಿದ್ದ ಕಾರ್ಖಾನೆಗಳು ಬಂದ್ ಆಗಿವೆ. ಉತ್ತರ ಪ್ರದೇಶದ ವಾರಾಣಸಿ ಮತ್ತು ಹರಿದ್ವಾರದ ಘಾಟ್‌ಗಳಲ್ಲಿ ಸ್ನಾನ ಮಾಡುವ ಹಾಗೂ ಪೂಜಾ ಸಾಮಗ್ರಿಗಳನ್ನು ನದಿಗೆ ಎಸೆದು ಮಲಿನ ಮಾಡುವ ಭಕ್ತರೂ ಇಲ್ಲ. ಗಂಗೆಯ ತಟದ ಜನರು ಕೂಡ ಲಾಕ್‌ಡೌನ್‌ನಿಂದಾಗಿ ಮನೆಗಳಲ್ಲಿದ್ದಾರೆ. ಹೀಗಾಗಿ ನದಿ ಸಾಕಷ್ಟುಶುದ್ಧವಾಗಿದೆ. ನದಿಯಲ್ಲಿನ ಮೀನು ಹಾಗೂ ಇತರ ಜಲಚರಗಳು ಬರಿಗಣ್ಣಿಗೇ ಕಾಣಿಸುವಷ್ಟುನೀರು ಪಾರದರ್ಶಕವಾಗಿದೆ.
ಇತ್ತೀಚೆಗೆ ಈ ಪ್ರದೇಶದಲ್ಲಿ ಮಳೆಯೂ ಸುರಿದಿರುವುದರಿಂದ ನದಿಯ ನೀರಿನ ಮಟ್ಟಹೆಚ್ಚಿದ್ದು, ಕೊಳೆ ತೊಳೆದುಕೊಂಡು ಹೋಗಿದೆ. ಈಗ ಗಂಗಾ ನದಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ನೀರನ್ನು ಪರೀಕ್ಷೆಗೊಳಪಡಿಸಿದ ವಿಜ್ಞಾನಿಗಳು ತಿಳಿಸಿದ್ದಾರೆ.
ಗಂಗೆಯನ್ನು ಶೇ. 50ರಷ್ಟು ಸ್ವಚ್ಛಗೊಳಿಸಿದ ಲಾಕ್‌ಡೌನ್: ಉಸಿರಾಡ್ತಿದ್ದಾಳೆ ಪ್ರಕೃತಿ ಮಾತೆ!
ಕೊರೋನಾ ವೈರಸ್ ಭೀತಿಯಿಂದಾಗಿ ಜಗತ್ತಿನಾದ್ಯಂತ ವಾಹನಗಳ ಸಂಚಾರ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿರುವುದರಿಂದ ವಾಯುಮಾಲಿನ್ಯ ಕೂಡ ಇಳಿಕೆಯಾಗಿದೆ. ಮನುಷ್ಯ ಸಂಚಾರ ವಿರಳವಾಗಿರುವುದರಿಂದ ಕಾಡು ಪ್ರಾಣಿ ಹಾಗೂ ಪಕ್ಷಿಗಳು ನಗರಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಾಣಿಸುತ್ತಿವೆ. ಅಂತೆಯೇ ನದಿಗಳೂ ಕೂಡ ಶುದ್ಧವಾಗಿದ್ದು, ಇದಕ್ಕೆ ಪರಿಸರ ಪ್ರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.
ದಶಕಗಳ ನಂತ್ರ ಜಲಂಧರ್ ನಿವಾಸಿಗಳಿಗೆ ಹಿಮಾಚಲ ಪರ್ವತ ಶ್ರೇಣಿ ದರ್ಶನ