ವಲಸೆ ಪ್ರಯಾಣಿಕರನ್ನು ತಮ್ಮ ಊರುಗಳಿಗೆ ತಲುಪಲು ವ್ಯವಸ್ಥೆ ಮಾಡಿರುವ ಮೇ 1ರಿಂದ ಆರಂಭಿಸಲಾದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 21 ಮಕ್ಕಳು ಜನ್ಮತಾಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ(ಮೇ.22): ವಿವಿಧ ರಾಜ್ಯಗಳಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಮೇ 1ರಿಂದ ಆರಂಭಿಸಲಾದ ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲುಗಳು ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿವೆ. 

ಈ ರೈಲುಗಳಲ್ಲಿ ಕಳೆದ 20 ದಿನಗಳಲ್ಲಿ 21 ಮಕ್ಕಳು ಜನ್ಮತಾಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಲಸೆ ಕಾರ್ಮಿಕರ ಜೊತೆಗೆ ಅವರ ತುಂಬು ಗರ್ಭಿಣಿ ಪತ್ನಿಯರೂ ಸಂಚಾರ ಕೈಗೊಂಡಿದ್ದು, ಅವರ ಪೈಕಿ 23 ಜನರಿಗೆ ರೈಲಿನಲ್ಲೇ ಹೆರಿಗೆಯಾಗಿದೆ. ಈ ಪೈಕಿ 21 ಮಕ್ಕಳು ಆರೋಗ್ಯವಂತವಾಗಿದ್ದರೆ, ಅವಧಿ ಪೂರ್ಣ ಜನನವಾಗಿದ್ದ 2 ಮಕ್ಕಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾಮಾನ್ಯ ಸೇವಾ ಕೇಂದ್ರ ಮೂಲಕವೂ ರೈಲು ಟಿಕೆಟ್‌ ಸೇಲ್‌ 

ನವದೆಹಲಿ: ಜೂನ್‌ 1ರಿಂದ 100 ರೈಲುಗಳನ್ನು ಓಡಿಸಲು ನಿರ್ಧರಿಸಿದ್ದ ಭಾರತೀಯ ರೈಲ್ವೆ ಶೀಘ್ರವೇ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ ಎಂದು ಪ್ರಕಟಿಸಿದೆ.

ತಂದೆ ಕೂರಿಸಿಕೊಂಡು 1200 ಕಿ.ಮೀ. ಸೈಕಲ್‌ ತುಳಿದ 15 ವರ್ಷದ ಬಾಲಕಿ

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಖಾತೆ ಸಚಿವ ಪಿಯೂಷ್‌ ಗೋಯಲ್‌, ಮೊದಲ ಹಂತದಲ್ಲಿ ಆನ್‌ಲೈನ್‌ನಲ್ಲಿ ಮಾತ್ರವೇ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಶುಕ್ರವಾರದಿಂದ ದೇಶಾದ್ಯಂತ 1.7 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕವೂ ಟಿಕೆಟ್‌ ವಿತರಣೆ ಆರಂಭಿಸಲಾಗುತ್ತದೆ. ಮುಂದಿನ 2- 3 ದಿನಗಳಲ್ಲಿ ಆಯ್ದ ರೈಲ್ವೆ ನಿಲ್ದಾಣಗಳಲ್ಲೂ ಟಿಕೆಟ್‌ ವಿತರಣೆ ಆರಂಭವಾಗಲಿದೆ ಎಂದು ಪ್ರಕಟಿಸಿದ್ದಾರೆ.

ಇದೇ ವೇಳೆ ಮೇ 1ರಿಂದ 2050 ಶ್ರಮಿಕ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚಾರ ನಡೆಸುವ ಮುಲಕ 30 ಲಕ್ಷ ವಲಸಿಗ ಕಾರ್ಮಿಕರನ್ನು ತವರಿಗೆ ಸೇರಿಸಿವೆ. ಅಲ್ಲದೆ ಪ್ರಧಾನಿ ಮೋದಿ ಅವರ ಸೂಚನೆಯಂತೆ ಈಗಾಗಲೇ 5000 ಬೋಗಿಗಳನ್ನು ಆಸ್ಪತ್ರೆಗಳಾಗಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.