MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ; ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ

ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಪ್ರಯಾಣಿಕ; ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಘಟನೆ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಶಾರ್ಜಾದಿಂದ ಬಂದ ವಿಮಾನ ಲ್ಯಾಂಡ್ ಆದ ಬಳಿಕ ಚಲಿಸುತ್ತಿದ್ದಾಗಲೇ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನ ದ್ವಾರದಿಂದ ಜಿಗಿದಿದ್ದಾರೆ. ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

1 Min read
Author : Mahmad Rafik
Published : May 03 2026, 03:31 PM IST
Share this Photo Gallery
  • FB
  • TW
  • Linkdin
  • Whatsapp
15
ವಿಮಾನದಿಂದ ಜಿಗಿದ ಪ್ರಯಾಣಿಕ
Image Credit : Gemini Generated

ವಿಮಾನದಿಂದ ಜಿಗಿದ ಪ್ರಯಾಣಿಕ

ಇಂದು ಬೆಳಗಿನ ಜಾವ ಪ್ರಯಾಣಿಕರೊಬ್ಬರು ತುರ್ತು ನಿರ್ಗಮನದ ಬಾಗಿಲು ತೆಗೆದು ಚಲಿಸುತ್ತಿದ್ದ ವಿಮಾನದಿಂದ ಜಿಗಿದ ಆಘಾತಕಾರಿ ಘಟನೆಯೊಂದು ಚೆನ್ನೈ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಶಾರ್ಜಾದಿಂದ ಬಂದ ವಿಮಾನ ಚೆನ್ನೈನಲ್ಲಿ ಲ್ಯಾಂಡ್ ಆಗಿತ್ತು. ನಿಧಾನವಾಗಿ ಚಲಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕ ಹೊರಗೆ ಜಿಗಿದಿದ್ದಾನೆ.

25
ಇತರೆ ಪ್ರಯಾಣಿಕರಲ್ಲಿ ಭಯ
Image Credit : Gemini Generated

ಇತರೆ ಪ್ರಯಾಣಿಕರಲ್ಲಿ ಭಯ

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಪ್ಲೇನ್‌ ಮುಖ್ಯ ರನ್‌ವೇಯಿಂದ ಹೊರಬಂದು ಟ್ಯಾಕ್ಸಿವೇಯಲ್ಲಿ ನಿಧಾನವಾಗಿ ಚಲಿಸುತ್ತಿತ್ತು ಅಂದ್ರೆ ಸಂಪೂರ್ಣವಾಗಿ ನಿಂತಾಗ ಈ ಘಟನೆ ನಡೆದಿದೆ. ಪ್ರಯಾಣಿಕನ ಈ ನಡೆಯಿಂದ ಇನ್ನುಳಿದ ಪ್ರಯಾಣಿಕರಲ್ಲಿ ಭಯವನ್ನುಂಟು ಮಾಡಿತ್ತು. ಕೂಡಲೇ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು ಎಂದು ಹೇಳಿಕೆ ನೀಡಿದ್ದಾರೆ.

Related Articles

Related image1
ಡಿಜಿಸಿಎ ನಿಯಮಗಳ ಬೆನ್ನಿಗೆ ಇಂಡಿಗೋ ಶಾಕ್: ಶಿವಮೊಗ್ಗ-ಬೆಂಗಳೂರು ವಿಮಾನ ಕಾರ್ಯಾಚರಣೆ ಸ್ಥಗಿತ
Related image2
ಮಂಗಳೂರು ವಿಮಾನ ನಿಲ್ದಾಣ ಗಮನಾರ್ಹ ಸಾಧನೆ, ಬರೋಬ್ಬರಿ 3 ಚಿನ್ನದ ಪದಕ!
35
 ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Image Credit : Gemini Generated

ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ, ವ್ಯಕ್ತಿ ಹೊರಗೆ ಜಿಗಿದಾಗ ವಿಮಾನ ಇನ್ನೂ ನಿಧಾನವಾಗಿ ಚಲಿಸುತ್ತಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾಗೆಯೇ ವಿಮಾನಕ್ಕೂ ಯಾವುದೇ ಹಾನಿಯಾಗಿಲ್ಲ. ಈ ಘಟನೆ ನಡೆದಾದ ವಿಮಾನ ಮೇನ್ ರನ್‌ವೇಯಿಂದ ಹೊರ ಬಂದಿತ್ತು ಎಂದು ಹೇಳಿದ್ದಾರೆ.

45
ಎರಡು ಬಾರಿ ವಾಂತಿ
Image Credit : Gemini Generated

ಎರಡು ಬಾರಿ ವಾಂತಿ

ಪ್ರಯಾಣದ ವೇಳೆ ಪ್ರಯಾಣಿಕ ಆರೋಗ್ಯದಲ್ಲಿ ಏರುಪೇರು ಆಗಿರಬಹುದು. ಘಟನೆಗೂ ಮುನ್ನ ಪ್ರಯಾಣಿಕನಿಗೆ ಪ್ರಯಾಣದ ವೇಳೆ ಎರಡು ಬಾರಿ ವಾಂತಿಯಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಪ್ರಯಾಣಿಕ ಈ ರೀತಿಯಾಗಿ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಪ್ರಯಾಣಿಕ ಜಿಗಿಯುತ್ತಿದ್ದಂತೆ ಪೈಲಟ್ ಕೂಡಲೇ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

55
ಪ್ರಯಾಣಿಕ ಪೊಲೀಸರ ವಶಕ್ಕೆ
Image Credit : Gemini Generated

ಪ್ರಯಾಣಿಕ ಪೊಲೀಸರ ವಶಕ್ಕೆ

ವಿಷಯ ತಿಳಿಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಪ್ರಯಾಣಿಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಘಟನೆಯಿಂದ ಕೆಲ ಸಮಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯುಂಟಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮುಖ್ಯ ರನ್‌ವೇಯನ್ನು ಬೆಳಿಗ್ಗೆ 03:23 ರಿಂದ ಬೆಳಿಗ್ಗೆ 04:23 ರವರೆಗೆ ಮುಚ್ಚಲಾಯಿತು. 

ಈ ವೇಳೆ 2ನೇ ರನ್‌ವೇ ಮೂಲಕ ವಿಮಾನಗಳ ಕಾರ್ಯಾಚರಣೆ ನಡೆಸಲಾಗಿತ್ತು. ವಿಮಾನಯಾನ ಸುರಕ್ಷತಾ ಶಿಷ್ಟಾಚಾರದ ಉಲ್ಲಂಘನೆಯ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಚೆನ್ನೈ ವಿಮಾನ ನಿಲ್ದಾಣದಿಂದ ಈ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚೆನ್ನೈ
ವಿಮಾನ ನಿಲ್ದಾಣ
ವೈರಲ್ ಸುದ್ದಿ

Latest Videos
Recommended Stories
Recommended image1
'ಯಾ ಅಲ್ಲಾ, ರಸಗುಲ್ಲಾ' ಎಂದ ಹಾಸ್ಯ ನಟರ​ ವಿರುದ್ಧ ಎಫ್​ಐಆರ್​: ಹೈಕೋರ್ಟ್​ ಹೇಳಿದ್ದೇನು?
Recommended image2
'ಹ್ಯಾಪ್ಪಿ ಬರ್ತ್​ಡೇ ಡಿಯರ್​ ಹಬ್ಬಿ' ಎಂದು ಪತಿಗೆ ಕೇಕ್ ತಿನ್ನಿಸಿದಳು: ಮುಂದೆ ಅಪ್ಪನ ಜೊತೆ ಸೇರಿ ಮಾಡಿದ್ದೇ ಬೇರೆ!
Recommended image3
ಹಾಸ್ಟೆಲ್‌ ಸೀಲಿಂಗ್‌ ಫ್ಯಾನ್‌ಗೆ ಕಬ್ಬಿಣದ ಪಂಜರ ಹಾಕಿದ್ರು; ಕೇಕೆ ಹಾಕಿ ನಕ್ಕ ಕೆಲವರು; ಆದರೆ ಉದ್ದೇಶ ಬೇರೆ ಐತಿ
Related Stories
Recommended image1
ಡಿಜಿಸಿಎ ನಿಯಮಗಳ ಬೆನ್ನಿಗೆ ಇಂಡಿಗೋ ಶಾಕ್: ಶಿವಮೊಗ್ಗ-ಬೆಂಗಳೂರು ವಿಮಾನ ಕಾರ್ಯಾಚರಣೆ ಸ್ಥಗಿತ
Recommended image2
ಮಂಗಳೂರು ವಿಮಾನ ನಿಲ್ದಾಣ ಗಮನಾರ್ಹ ಸಾಧನೆ, ಬರೋಬ್ಬರಿ 3 ಚಿನ್ನದ ಪದಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved