ಅಮೆರಿಕಾದಿಂದ ಭಾರತಕ್ಕೆ ಬಂದು ಪತ್ನಿ ಜೊತೆ ಜಗಳ; ಕೊನೆಗೆ 8ನೇ ಮಹಡಿಯಿಂದ ಜಿಗಿದ ಗಂಡ
ವಿದೇಶದಿಂದ ಮರಳಿದ್ದ 45 ವರ್ಷದ ನಿಶಾಂತ್, ಕಟ್ಟಡವೊಂದರ 8ನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದ ಉಂಟಾದ ಮಾನಸಿಕ ಖಿನ್ನತೆಯೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.

45 ವರ್ಷದ ನಿಶಾಂತ್
ಅಮೆರಿಕದಿಂದ ಇತ್ತೀಚೆಗೆ ಹರಿಯಾಣಕ್ಕೆ ಮರಳಿದ್ದ 45 ವರ್ಷದ ನಿಶಾಂತ್ ಎಂಬುವವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಗುರುಗ್ರಾಮ್‌ನ ಸೆಕ್ಟರ್ 65ರಲ್ಲಿರುವ M3M ಎಮರಾಲ್ಡ್ ಹಿಲ್ಸ್ ಸೊಸೈಟಿಯ 8ನೇ ಮಹಡಿಯಿಂದ ಶನಿವಾರ ಸಂಜೆ 7:30ರ ಸುಮಾರಿಗೆ ಜಿಗಿದು ಪ್ರಾಣ ಬಿಟ್ಟಿದ್ದಾರೆ.
ಮಾನಸಿಕ ಖಿನ್ನತೆ
ನಿಶಾಂತ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯೊಂದಿಗೆ ಉಂಟಾದ ಜಗಳ ತಾರಕಕ್ಕೇರಿದ ನಂತರ, ಏಪ್ರಿಲ್ 28 ರಂದು ಅವರು ಅಮೆರಿಕದಿಂದ ಗುರುಗ್ರಾಮ್‌ಗೆ ವಾಪಸ್ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ
ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. 12 ವರ್ಷಗಳ ಹಿಂದೆ ಮದುವೆಯಾಗಿದ್ದ ನಿಶಾಂತ್, ಪತ್ನಿಯೊಂದಿಗೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಗುರುಗ್ರಾಮ್‌ನಲ್ಲೇ ವಾಸವಾಗಿದ್ದಾರೆ. ಮದುವೆ ಸಂಬಂಧದಲ್ಲಿನ ಸಮಸ್ಯೆಗಳೇ ಖಿನ್ನತೆಗೆ ಕಾರಣವಾಗಿ, ಅದು ಆತ್ಮ*ಹತ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಾವು ಸಮಸ್ಯೆಗೆ ಪರಿಹಾರ ಅಲ್ಲ
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಮೃತರ ಕುಟುಂಬದವರು ಪತ್ನಿ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
(ಗಮನಿಸಿ: ಆತ್ಮ*ಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಇಂತಹ ಆಲೋಚನೆಗಳು ಬರುತ್ತಿದ್ದರೆ, ಸಹಾಯಕ್ಕಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ: 1056, 0471- 2552056)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

