Asianet Suvarna News Asianet Suvarna News

ಬೊಕ್ಕಸ ತುಂಬಿಸಲು ಸಾಲ: ದ.ಭಾರತದಲ್ಲಿ ತಮಿಳುನಾಡು ನಂ.1: ಕರ್ನಾಟಕಕ್ಕೆ 3ನೇ ಸ್ಥಾನ!

ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ ನಷ್ಟ| ದ.ಭಾರತದಲ್ಲಿ  ತಮಿಳುನಾಡು ನಂ.1|  ಕರ್ನಾಟಕಕ್ಕೆ 3ನೇ ಸ್ಥಾನ!

Lockdown Crisis Tamil Nadu in 3rd Place In terms Of Taking loan
Author
Bangalore, First Published Aug 29, 2020, 7:44 AM IST

ನವದೆಹಲಿ(ಆ.29): ಕೊರೋನಾ ವೈರಸ್‌ ತಡೆಯಲು ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ಆದಾಯ ಕುಸಿತವಾಗಿದ್ದು, ಅದನ್ನು ತುಂಬಿಕೊಳ್ಳಲು ದಕ್ಷಿಣ ಭಾರತದ ರಾಜ್ಯಗಳು ದೊಡ್ಡ ಮಟ್ಟದಲ್ಲಿ ಸಾಲದ ಮೊರೆ ಹೋಗಿವೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಸಾಲ ಮಾಡುವುದರಲ್ಲಿ ತಮಿಳುನಾಡು ಪ್ರಥಮ ಸ್ಥಾನದಲ್ಲಿದ್ದು, ಆಂಧ್ರ 2ನೇ ಹಾಗೂ ಕರ್ನಾಟಕ 3ನೇ ಸ್ಥಾನದಲ್ಲಿದೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ಸರ್ಕಾರ ಅತಿ ಹೆಚ್ಚು ಅಂದರೆ 44,750 ಕೋಟಿ ರು. ಸಾಲ ಮಾಡಿದ್ದರೆ, ಆಂಧ್ರಪ್ರದೇಶ ಸರ್ಕಾರ 24250 ಕೋಟಿ ರು. ಹಾಗೂ ಕರ್ನಾಟಕ 19 ಸಾವಿರ ಕೋಟಿ ರು. ಸಾಲ ಮಾಡಿವೆ. ತೆಲಂಗಾಣ 18461 ಕೋಟಿ ರು. ಹಾಗೂ ಕೇರಳ 13390 ಕೋಟಿ ರು. ಸಾಲ ಸಂಗ್ರಹಿಸಿವೆ.

ತೆರಿಗೆ ಆದಾಯ ಕುಸಿತವಾಗಿರುವುದರಿಂದ ರಾಜ್ಯ ಸರ್ಕಾರದ ಖರ್ಚುಗಳನ್ನು ಭರಿಸಲು, ವಿಶೇಷವಾಗಿ ಆರೋಗ್ಯ ಕ್ಷೇತ್ರದ ಖರ್ಚುಗಳನ್ನು ಭರಿಸಲು ರಾಜ್ಯ ಸರ್ಕಾರಗಳು ಈ ಸಾಲ ಮಾಡಿವೆ. ಮಾರುಕಟ್ಟೆಯಲ್ಲೀಗ ಬಡ್ಡಿ ದರ ಕಡಿಮೆ ಇರುವುದರಿಂದ 30-35 ವರ್ಷಗಳ ದೀರ್ಘಾವಧಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ (ಸುಮಾರು ಶೇ.6) ರಾಜ್ಯಗಳಿಗೆ ಸಾಲ ದೊರೆತಿದೆ. ಈ ಸಾಲದ ಹೆಚ್ಚಳವು ರಾಜ್ಯಗಳಿಗೆ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ ಕಾಯ್ದೆಯಡಿ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳಲು ಇರುವ ಅನುಮತಿಯ ಮಿತಿಯಲ್ಲೇ ಇದೆ ಎಂದು ಆರ್‌ಬಿಐ ಮೂಲಗಳು ಹೇಳಿವೆ.

Follow Us:
Download App:
  • android
  • ios