ಕೊಲ್ಕತ್ತಾ(ಏ.22): ಪಶ್ಚಿಮ ಬಂಗಾಳದ ರಾಯಗಂಜ್‌ನ ಕೋವಿಡ್ ವಾರ್ಡ್ ಅನ್ನು ಮತದಾನ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದು ಸ್ಥಳೀಯರು ಪ್ರತಿಭಟಿಸಿದ್ದಾರೆ. ರಾಯ್‌ಗಂಜ್ ವೈದ್ಯಕೀಯ ಕಾಲೇಜಿನಲ್ಲಿ 6ನೇ ಹಂತದ ಮತದಾನ ಸಂದರ್ಭ ಈ ರೀತಿ ಬದಲಾವಣೆ ಮಾಡಲಾಗಿದೆ.

ಕೊರೋನಾ ವಾರ್ಡ್‌ನಲ್ಲಿ ಮತದಾನ ಮಾಡಿ, ಅಲ್ಲಿ ಬರುವ ಜನರಿಗೆ ಕೊರೋನಾ ಬಾಧಿಸುವ ಸಾಧ್ಯತೆ ಇದೆ ಎಂದು ಮತದಾರರು ಪ್ರತಿಭಟಿಸಿದ್ದಾರೆ. ಸುರಕ್ಷಿತರೆಂಬ ಭಾವನೆ ಇಲ್ಲದೆ ನಾವು ಮತ ಚಲಾಯಿಸಲು ಸಾಧ್ಯವಿಲ್ಲ. ಎಲ್ಲಿ ಸ್ಯಾನಿಸೈಝ್ ಮಾಡಲಾಗಿದೆ, ಇಲ್ಲ ಎಂಬ ವಿಚಾರವೂ ಗೊತ್ತಿಲ್ಲ ಎಂದಿದ್ದಾರೆ ಜನ.

5 ರಾಜ್ಯಗಳಲ್ಲಿ 18 ಮೇಲ್ಪಟ್ಟವರಿಗೆ ಉಚಿತ ಲಸಿಕೆ!

ನಾವು ಒಂದು ಕುಟುಂಬವನ್ನು ಸಾಕಬೇಕು. ಕೊರೋನಾ ಬಗ್ಗೆ ಉದ್ದುದ್ದ ಭಾಷಣ ಕೊಡೋ ಸರ್ಕಾರ ಮತ್ತೆ ನಮ್ಮನ್ನು ಇಂತಹ ಸ್ಥಳದಲ್ಲಿ ಬಂದು ಮತ ಚಲಾಯಿಸಲು ಹೇಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹೊಸ 10784 ಕೊರೋನಾ ಪ್ರಕರಣಗಳು ವರದಿಯಾಗಿದ್ದು 5616 ಜನ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಯಲ್ಲಿ 58 ಸಾವು ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ಸದ್ಯ 63496 ಆಕ್ಟಿವ್ ಕೇಸ್‌ಗಳಿವೆ.  10710 ಜನರು ಇಲ್ಲಿಯವರೆಗೂ ಸಾವನ್ನಪ್ಪಿದ್ದಾರೆ.