ನೀವು ಈ ಜಿಲ್ಲೆಯಲ್ಲಿ ‘ಎಣ್ಣೆ’ ಪಾರ್ಟಿಗೆ ಪ್ಲ್ಯಾನ್ ಮಾಡಿದ್ರೆ ಮೊದಲು ಲೈಸೆನ್ಸ್ ಪಡೀಲೇಬೇಕು ಸ್ವಾಮಿ!
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ, ಅಬಕಾರಿ ಅಧಿಕಾರಿಗಳು ನಿವಾಸಿಗಳ ಕಲ್ಯಾಣ ಸಂಘ ಮತ್ತು ನಾಗರಿಕರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದು, ಸಾಂದರ್ಭಿಕ ಪರವಾನಗಿಗಳನ್ನು ಪಡೆಯುವ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದಾರೆ.
ನವದೆಹಲಿ (ಡಿಸೆಂಬರ್ 24, 2023): ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಬರುತ್ತಿದೆ. ಕ್ರಿಸ್ಮಸ್ ಸಂಭ್ರಮ ಈಗಾಗ್ಲೇ ಶುರುವಾಗಿದೆ. ಅಲ್ಲದೆ, ಹೊಸ ವರ್ಷಕ್ಕಂತೂ ಹೊರಗೆ ಪಾರ್ಟಿ ಮಾಡೋದು ಕಷ್ಟ, ಫುಲ್ ರಶ್ ಇರುತ್ತೆ. ಮನೆಲೇ ಪಾರ್ಟಿ ಮಾಡೋಣ ಅಂತ ಇದ್ರೆ.. ಅದ್ರಲ್ಲೂ ನೀವು ಈ ನಗರದಲ್ಲಿ ವಾಸಿಸುತ್ತಿದ್ರೆ ಮೊದಲು ಅನುಮತಿ ಪಡೀಬೇಕು.
ಹೌದು, ಉತ್ತರ ಪ್ರದೇಶದ ಗೌತಮ್ ಬುದ್ಧನಗರದ ಜಿಲ್ಲಾ ಅಬಕಾರಿ ಅಧಿಕಾರಿ ಜನರು ತಮ್ಮ ಮನೆಯಲ್ಲಿ ಪಾರ್ಟಿ ಮಾಡಲು ಬಯಸಿದರೆ ಮದ್ಯದ ಪರವಾನಗಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಮನೆಯಲ್ಲಿ ಅಥವಾ ಸಮುದಾಯ ಮಟ್ಟದಲ್ಲಿ ಪಾರ್ಟಿಗಳಿಗೆ ಮದ್ಯದ ಪರವಾನಗಿ ಹೊಂದಿರದಿರುವುದು ನಿಯಮಗಳ ಉಲ್ಲಂಘನೆಯಾಗಿದೆ ಮತ್ತು ದಂಡ ಸೇರಿದಂತೆ ಕಾನೂನು ಪ್ರಕ್ರಿಯೆಗಳಿಗೆ ಒಳಗಾಗಬಹುದು ಎಂದು ಗೌತಮ್ ಬುದ್ಧನಗರದ ಜಿಲ್ಲಾ ಅಬಕಾರಿ ಅಧಿಕಾರಿ (ಡಿಇಒ) ಸುಬೋಧ್ ಕುಮಾರ್ ಶ್ರೀವಾಸ್ತವ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನು ಓದಿ: Bengaluru : ಪಾರ್ಟಿಯಲ್ಲಿ ಎಣ್ಣೆ ಜಾಸ್ತಿ ಬೇಡವೆಂದ ಗೆಳೆಯನನ್ನೇ ಕೊಲೆಗೈದ ಸ್ನೇಹಿತ!
ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ, ಅಬಕಾರಿ ಅಧಿಕಾರಿಗಳು ನಿವಾಸಿಗಳ ಕಲ್ಯಾಣ ಸಂಘ ಮತ್ತು ನಾಗರಿಕರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದು, ಸಾಂದರ್ಭಿಕ ಪರವಾನಗಿಗಳನ್ನು ಪಡೆಯುವ ಮಾರ್ಗಸೂಚಿಗಳ ಬಗ್ಗೆ ಅವರಿಗೆ ತಿಳಿಸುತ್ತಾರೆ. ಯಾರಾದರೂ ಪರವಾನಗಿ ಇಲ್ಲದೆ ಮದ್ಯವನ್ನು ಪೂರೈಸುತ್ತಿದ್ದರೆ, ಅದು ಉತ್ತರ ಪ್ರದೇಶದಲ್ಲೇ ಆಗಲಿ ಅಥವಾ ರಾಜ್ಯದ ಹೊರಗೆ ಮಾರಾಟಕ್ಕೆ ಉದ್ದೇಶಿಸಿರುವ ಮದ್ಯವಾಗಿದ್ದರೂ ಅದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಸುಬೋಧ್ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ. ಹಾಗೂ, ಇದು ಅಬಕಾರಿ ಇಲಾಖೆಯಿಂದ ಕ್ರಮವನ್ನು ಆಕರ್ಷಿಸುತ್ತದೆ ಎಂದೂ ಹೇಳಿದ್ದಾರೆ.
ಪಾರ್ಟಿಗಳಲ್ಲಿ ಮದ್ಯವನ್ನು ಬಡಿಸಲು ಸಾಂದರ್ಭಿಕ ಪರವಾನಗಿಗಳು ಸಣ್ಣ ಕೂಟ ಮತ್ತು ದೊಡ್ಡ ಕೂಟ ಎಂಬ 2 ವಿಭಾಗಗಳಲ್ಲಿ ಲಭ್ಯವಿದೆ. ಹೌಸ್ ಪಾರ್ಟಿ ಅಂದರೆ ಕಡಿಮೆ ಜನರ ಗಾತ್ರ ಇರುವ ಕೂಟಗಳಿಗೆ 4,000 ರೂ. ಶುಲ್ಕದ ಪರವಾನಗಿ ಪಡೆಯಬಹುದು. ಸಮುದಾಯ ಭವನಗಳು, ರೆಸ್ಟೋರೆಂಟ್‌ಗಳು ಅಥವಾ ಔತಣಕೂಟಗಳಂತಹ ಹೆಚ್ಚಿನ ಜನಸಂದಣಿಗಳಿಗೆ, ಪರವಾನಗಿ ಶುಲ್ಕ 11,000 ರೂ. ಎಂದು ತಿಳಿದುಬಂದಿದೆ.
ಮಶ್ರೂಮ್ ಬೀಜದ ಚೀಲಗಳ ಮಧ್ಯೆ ಗೋವಾ ಮದ್ಯ! ಖದೀಮರ ಪ್ಲಾನ್ ನೋಡಿ ಬೆಚ್ಚಿಬಿದ್ದ ಅಬಕಾರಿ ಪೊಲೀಸರು!
ಈ ಸಾಂದರ್ಭಿಕ ಪರವಾನಗಿಗಳು ಒಂದು ದಿನದವರೆಗೆ ಮಾನ್ಯವಾಗಿರುತ್ತವೆ ಮತ್ತು ಅರ್ಜಿದಾರರು ಉಪಯುಕ್ತ ಸಾರ್ವಜನಿಕ ಸೇವೆಗಳ ವಿಭಾಗದಲ್ಲಿ -- upexciseportal.in -- ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇನ್ನು, ಅಬಕಾರಿ ಇಲಾಖೆಯ ಸಾರ್ವಜನಿಕ ಸಂಪರ್ಕವು ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿದ್ದು, ಸಾಂದರ್ಭಿಕ ಬಾರ್ ಲೈಸೆನ್ಸ್‌ಗಳಿಗೆ ಹೆಚ್ಚಿನ ಜನರು ಅರ್ಜಿ ಸಲ್ಲಿಸಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಇನ್ನು, ಖಾಸಗಿ ಆಚರಣೆಗಳಿಗೂ ಲೈಸೆನ್ಸ್ ನೀತಿಯ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಿದ ಅಬಕಾರಿ ಅಧಿಕಾರಿ, ಇದು ಪಾರ್ಟಿಯಲ್ಲಿ ನೀಡುವ ಮದ್ಯವು ಅಧಿಕೃತ ಮತ್ತು ಅಕ್ರಮವಾಗಿರುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ಅಲ್ಲದೆ, ಇದರಿಂದ ಅರ್ಜಿದಾರರು ಸ್ಥಳೀಯವಾಗಿ ಮದ್ಯವನ್ನು ಖರೀದಿಸುತ್ತಾರೆ, ಅದು ರಾಜ್ಯದೊಳಗೆ ಮಾತ್ರ ಸೇವಿಸಲು ಉದ್ದೇಶಿಸಲಾಗಿದೆ ಮತ್ತು ಇತರ ರಾಜ್ಯಗಳಿಂದ ಖರೀದಿಸುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ. ಇದು ಸರ್ಕಾರಕ್ಕೆ ಆದಾಯ ನಷ್ಟವನ್ನು ಉಂಟುಮಾಡುತ್ತದೆ ಎಂದೂ ಹೇಳಿದರು.